ಅಮೂಲ್ಯ ಮಕ್ಕಳು ಮೈಸೂರು ಝೂನಲ್ಲಿ ಏನ್ ಮಾಡಿದ್ದಾರೆ ಗೊತ್ತಾ..?

By ಪ್ರಿಯಾ ದೊರೆ

ಅಮೂಲ್ಯ ಅವರು ಮದುವೆಯಾದ ಬಳಿಕ ಕಂಪ್ಲೀಟ್ ಆಗಿ ಫ್ಯಾಮಿಲಿ ಹುಡುಗಿಯಾಗಿದ್ದಾರೆ. ಬಾಲ ನಟಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.ಹಲವು ಸಿನಿಮಾಗಳಲ್ಲಿ ನಟಿಸಿರುವ ಅಮೂಲ್ಯ ಅವರು ನಾಯಕಿಯಾಗಿಯೂ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಕೆಲ ವರ್ಷಗಳ ಹಿಂದೆ ಮದುವೆಯಾದರು.ಇದಾದ ಬಳಿಕ ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ. 2022ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮೂಲ್ಯ ಅವರು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ.

ಚಿರತೆ ಮತ್ತು ನವಿಲನ್ನು ದತ್ತು ಪಡೆದ ನಟಿ

ಇದೀಗ ಮೊದಲ ಬಾರಿಗೆ ತಮ್ಮ ಮಕ್ಕಳನ್ನು ನಟಿ ಅಮೂಲ್ಯ ಅವರು ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ. ಆಗಾಗ ಪತಿ ಹಾಗೂ ಮಕ್ಕಳ ಜೊತೆಗೆ ಪ್ರವಾಸ ಮಾಡುವ ಅಮೂಲ್ಯ ಅವರು ಈ ಬಾರಿ ಮೈಸೂರಿನ ಝೂಗೆ ತೆರಳಿದ್ದಾರೆ. ಮಕ್ಕಳಿಗೆ ಮೊದಲ ಬಾರಿಗೆ ಪ್ರಾಣಿಗಳನ್ನು ತೋರಿಸಿದ್ದು, ಪಾಠ ಮಾಡಿದ್ದಾರೆ. ಅಲ್ಲದೇ ಇದೇ ವೇಳೆಗೆ ಅಮೂಲ್ಯ ಅವರು ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ತಮ್ಮ ಮಕ್ಕಳ ಹೆಸರಲ್ಲಿ ಬ್ಲ್ಯಾಕ್ ಪ್ಯಾಂಥರ್ ಅಂದರೆ ಕರಿ ಚಿರತೆಯನ್ನು ಒಂದು ವರ್ಷದ ಕಾಲಕ್ಕೆ ದತ್ತು ಪಡೆದಿದ್ದಾರೆ. ಜೊತೆಗೆ ಬಿಳಿ ನವಿಲನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಮಕ್ಕಳಿಗೆ ಈಗಲೇ ಪ್ರಾಣಿ ಹಾಗೂ ಪರಿಸರದ ಬಗ್ಗೆ ಪಾಠ ಮಾಡಿದ್ದಾರೆ.

Written update on actress amulya


ದತ್ತು ಪಡೆದ ನಟ-ನಟಿಯರು

ಝೂಗಳಲ್ಲಿ ಇರುವ ಪ್ರಾಣಿಗಳನ್ನು ಯಾರು ಬೇಕಾದರೂ ದತ್ತು ಪಡೆಯಬಹುದು. ಈ ಹಿಂದೆ ಕರೋನಾ ಸಂದರ್ಭದಲ್ಲಿ ಝೂಗಳಲ್ಲಿನ ಪ್ರಾಣಿಗಳ ಲಾಲನೆ-ಪಾಲನೆಗೆ ಬಹಳ ಸಂಕಷ್ಟ ಎದುರಾಗಿತ್ತು. ಆಗ ಪ್ರಾಣಿ ಪ್ರಿಯ ನಟ ದರ್ಧಶನ್ ಅವರು ದತ್ತು ಪಡೆದಿದ್ದಲ್ಲದೇ, ಎಲ್ಲರಿಗೂ ಪ್ರಾಣಿಗಳನ್ನು ದತ್ತು ಪಡೆಯುವಂತೆ ಹೇಳಿದ್ದರು. ಆಗ ನಟ ರಿಷಭ್ ಶೆಟ್ಟಿ, ನಟಿ ಕಾರುಣ್ಯಾ ರಾಮ್, ನಟ ಚಿಕ್ಕಣ್ಣ, ಅಭಯ್ ವೀರ್, ಸೃಜನ್ ಲೋಕೇಶ್ ಹೀಗೆ ಸಾಕಷ್ಟು ನಟ, ನಟಿಯರು ಹಾಗೂ ನಿರ್ದೇಶಕರು ಹಲವರು ಪ್ರಾಣಿಗಳನ್ನು ದತ್ತು ಪಡೆದಿದ್ದರು. ದರ್ಶನ್ ಕರೆಗೆ ಓಗೊಟ್ಟು ಅಭಿಮಾನಿಗಳು ಕೂಡ ಪ್ರಾಣಿಗಳನ್ನು ದತ್ತು ಪಡೆದಿದ್ದರು.


ಮಕ್ಕಳಿಗೆ ಸಮಾಜ ಸೇವೆಯ ಪಾಠ

ಇದೀಗ ನಟಿ ಅಮೂಲ್ಯ ಅವರು ತಮ್ಮ ಮಕ್ಕಳನ್ನು ಝೂಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಾಣಿಗಳ ಪರಿಚಯ ಮಾಡಿಸಿದ್ದಾರೆ. ಬಳಿಕ ಅಥರ್ವ್ ಮತ್ತು ಅಧವ್ ಹೆಸರಲ್ಲಿ ಕರಿ ಚಿರತೆ ಹಾಗೂ ಬಿಳಿ ನವಿಲನ್ನು ಒಂದು ವರ್ಷದ ಕಾಲಕ್ಕೆ ದತ್ತು ಪಡೆದಿದ್ದಾರೆ. ಅಮೂಲ್ಯ ಅವರ ಮಕ್ಕಳಿಗೆ ಈಗ ಇನ್ನೂ ಎರಡೂವರೆ ವರ್ಷ, ಈಗಲೇ ಮಕ್ಕಳಿಗೆ ಸಮಾಜ ಸೇವೆಯ ಬಗ್ಗೆ ತಿಳಿಸಿಕೊಡುವ ಯತ್ನ ಮಾಡಿದ್ದಾರೆ. ಇದರ ಫೋಟೋಗಳನ್ನು ಕೂಡ ಅಮೂಲ್ಯ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿಕೊಂಡಿದ್ದಾರೆ.


ಸ್ಯಾಂಡಲ್ ವುಡ್ ಜೊತೆಗೆ ನಂಟು

ಅಮೂಲ್ಯ ಅವರು ಜಗದೀಶ್ ಎಂಬುವರನ್ನು ವಿವಾಹವಾಗಿದ್ದು, ಜಗದೀಶ್ ಅವರದ್ದು ರಾಜಕೀಯ ಹಿನ್ನೆಲೆಯ ಕುಟುಂಬವಾಗಿದೆ. ಅಮೂಲ್ಯ ಅವರು ನಟನೆಯಿಂದ ದೂರವಾಗಿದ್ದರೂ ಚಿತ್ರರಂಗದಿಂದ ದೂರಾಗದ ಅಮೂಲ್ಯ, ಈಗಲೂ ಚಂದನವನದ ನಟ-ನಟಿಯರ ಜೊತೆಗೆ ಆತ್ಮೀಯ ಗೆಳೆತನವನ್ನು ಹೊಂದಿದ್ದಾರೆ. ಅಮೂಲ್ಯ ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡದರು ಸ್ಯಾಂಡಲ್ ವುಡ್ ತಾರೆಯರು ಹಾಗೂ ರಾಜಕಾರಣಿಗಳು ಆಗಮಿಸುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅಮೂಲ್ಯ, ಆಗಾಗ್ಗೆ ತಮ್ಮ ಮಕ್ಕಳ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಮೂಲ್ಯ ಕೊನೆಯದಾಗಿ ಗಣೇಶ್ ಜೊತೆಗೆ ಮುಗುಳು ನಗೆ ಸಿನಿಮಾದಲ್ಲಿ ನಟಿಸಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X