'ಅಂಶು' ಚಿತ್ರದಲ್ಲಿ ಅಣ್ಣಯ್ಯ ಸೀರಿಯಲ್ ಸುಂದರಿ ನಿಶಾ ರವಿಕೃಷ್ಣನ್, ಟ್ರೈಲರ್ ಹೇಗಿದೆ..?

By ಪ್ರಿಯಾ ದೊರೆ

ನಿಶಾ ರವಿಕೃಷ್ಣನ್ ಅವರು ಸದ್ಯ ತೆಲುಗು ಮತ್ತು ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ತಮ್ಮ ಚೊಚ್ಚಲ ಸಿನಿಮಾ ಟ್ರೈಲರ್ ರಿಲೀಸ್ ಆದ ಹಿನ್ನೆಲೆ ನಿಶಾ ಖುಷಿಯಲ್ಲಿದ್ದಾರೆ. ನಟಿ ನಿಶಾ ರವಿಕೃಷ್ಣನ್ ಅವರು ಸದ್ಯ ತೆಲುಗು ಮತ್ತು ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ಕನ್ನಡ ಕಿರುತೆರೆಯಲ್ಲಿ ರೌಡಿ ಬೇಬಿ ಎಂದೇ ಖ್ಯಾತಿ ಪಡೆದಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಪಾತ್ರದ ಮೂಲಕ ಚಿರಪರಿಚಿತರಾಗಿದ್ದಾರೆ. ತೆಲುಗಿನ ಅಮ್ಮಾಯಿಗಾರು ಸೀರಿಯಲ್ ನಲ್ಲಿ ರೂಪಾ ಪಾತ್ರದ ಮೂಲಕ ಫುಲ್ ಫೇಮಸ್ ಆಗಿದ್ದಾರೆ.

ನಿಶಾ ನಟನೆಯ ಚಿತ್ರ ಅಂಶು

ಸದ್ಯ ನಟಿ ನಿಶಾ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ನಟಿ ನಿಶಾ ರವಿಕೃಷ್ಣನ್ ಅವರು ಅಂಶೂ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಅಭೀಮಾನಿಗಳು, ತಮ್ಮ ನೆಚ್ಚಿನ ನಟಿಯನ್ನು ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ. ಈ ಚಿತ್ರದಲ್ಲಿ ನಿಶಾ ಅವರು ಡಿಫರೆಂಟ್ ಪಾತ್ರದ ಮೂಲಕ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನಲ್ಲಿ ನಾವು ನಂಬೋದೆಲ್ಲ ನಿಜ ಅಲ್ಲ, ಸಹಿಸೋಕ್ ಆಗ್ದೆ ಇರೋದೆಲ್ಲ ಸುಳ್ಳಲ್ಲ ಎಂದು ಹೇಳುವ ನಿಶಾ ಅವರು ಅಂಶು ಅನ್ನು ಉಳಿಸಿಕೊಂಡೇ ಉಳಿಸಿಕೊಳ್ಳುತ್ತೀನಿ ಎಂದು ಕೂಡ ಹೇಳುತ್ತಾರೆ. ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರವನ್ನು ಎಂ.ಸಿ ಚನ್ನಕೇಶವ ಎಂಬುವರು ನಿರ್ದೇಶಿಸಿದ್ದಾರೆ.

Written update on Actress Nisha Ravikrishnan

ಮಹಿಳಾ ಪ್ರಧಾನ ಕಥೆಯುಳ್ಳ ಅಂಶು

ಗ್ರಹಣ ಎಲ್ ಎಲ್ ಪಿ ಬ್ಯಾನರಿನ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಚಲುವರಾಜ್ ಅವರು ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾಎ. ಚಲುವರಾಜ್ ಅವರು ಭಜರಂಗಿ- 2, ವೇದ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದರು. ಈ ಚಿತ್ರ ಮಹಿಳಾ ಪ್ರಧಾನ ಕಥೆಯನ್ನು ಒಳಗೊಂಡಿದ್ದು, ಟ್ರೈಲರ್ ನಲ್ಲಿ ಕಂಪ್ಲೀಟ್ ಆಗಿ ನಿಶಾ ಅವರೊಬ್ಬರೇ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನೋಡಿ ವೀಕ್ಷಕರು ಕುತೂಹಲಗೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಕರಾಗಿದ್ದಾರೆ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನವನ್ನು ಮಾಡಿದ್ದು,ಮಹೇಂದ್ರ ಗೌಡ ಸಂಭಾಷಣೆ ಮತ್ತು, ಸಾಹಿತ್ಯದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ನಿಶಾ ನಟನೆಯ ಧಾರಾವಾಹಿಗಳು

ಇನ್ನು ನಟಿ ನಿಶಾ ರವಿಕೃಷ್ಣನ್ ಅವರು ಬಾಲ ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿಕೊಟ್ಟವರು. ಈಗ ಕಿರುತೆರೆಯ ಸೂಪರ್ ನಟಿಯಾಗಿ ಎಲ್ಲರ ಮನ ಗೆದ್ದಿದ್ದಾರೆ. ಬಾಲ್ಯದಲ್ಲೇ ಕ್ಯಾಮರಾ ಫೇಸ್ ಮಾಡುವುದನ್ನು ಕಲಿತಿದ್ದರು. ಸರ್ವ ಮಂಗಳ ಮಾಂಗಲ್ಯೇ ಎಂಬ ಸೀರಿಯಲ್ ನಲ್ಲಿ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ತದನಂತರ ನಿಶಾ ಗಟ್ಟಿಮೇಳ ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ರೌಡಿ ಬೇಬಿಯಾಗಿ ಎಲ್ಲರ ಮನ ಗೆದ್ದಿದ್ದರು. ತೆಲುಗಿನಲ್ಲಿ ಮುತ್ಯಮಂತ ಮುದ್ದು, ಅಮ್ಮಾಯಿಗಾರು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಅಣ್ಣಯ್ಯ ಸೀರಿಯಲ್ ನಲ್ಲಿ ಪಾರ್ವತಿಯಾಗಿ ನಟಿಸುತ್ತಾ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ

ನಿಶಾ ಅವರು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಫೋಟೋಶೂಟ್ ಮಾಡಿಸಿ ವಿವಿಧ ಉಡುಗೆಯಲ್ಲಿನ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಅಂಶು ಚಿತ್ರಕ್ಕೂ ಮುನ್ನ ನಿಶಾ ಅವರು ಅದೊಂದಿತ್ತು ಕಾಲ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇಷ್ಟಕಾಮ್ಯ ಸಿನಿಮಾದ ಹಾಡೊಂದಕ್ಕೆ ಬ್ಯಾಕ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅಂಶು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಬೆಳ್ಳಿ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X