ಪ್ರೇಮಿಗಳ ದಿನದ ಪ್ರಯುಕ್ತ ಸಾನ್ಯಾ ಅಯ್ಯರ್ ಹೊಚ್ಚ ಹೊಸ ಅವತಾರ ; ಪಡ್ಡೆಗಳ ಹೃದಯ ಪುಕಪುಕ..!

By ಪ್ರಿಯಾ ದೊರೆ

ಬಾಲನಟಿಯಾಗಿ ಕಿರುತೆರೆಯಲ್ಲಿ ಮಿಂಚಿದ ಸಾನ್ಯಾ ಅಯ್ಯರ್ ಈಗ ಸಿಕ್ಕಾಪಟ್ಟೆ ಫೇಮಸ್. ಬಿಗ್ ಬಾಸ್ ನಲ್ಲಿ ಭಾಗವಹಿಸಿ ಮನೆ ಮಾತಾದ ಸಾನ್ಯಾ, ಇತ್ತೀಚೆಗೆ ಪದೇ ಪದೇ ಸುದ್ದಿಯಲ್ಲಿರುತ್ತಾರೆ. ಸಾನ್ಯಾ ಅಯ್ಯರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಚಿರಪರಿಚಿತರಾಗಿರುವ ಸಾನ್ಯಾ ಈಗ ಚಿತ್ರರಂಗದಲ್ಲಿ ಹೆಸರು ಗಳಿಸಲು ಮುಂದಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಸಾನಿಯಾ ಪುಟ್ಟ ಗೌರಿ ಧಾರಾವಾಹಿಯಲ್ಲಿ ಬಾಲನಟಿಯಾಗಿ ಕೂಡ ಕಾಣಿಸಿಕೊಂಡಿದ್ದರು

ಸಾನ್ಯಾ ಬಣ್ಣದ ಲೋಕದ ನಂಟು

ಸಾನ್ಯಾ ಅಯ್ಯರ್ ಅವರ ತಂದೆ ಹಾಗೂ ತಾಯಿ ಇಬ್ಬರೂ ಕೂಡ ಕಲಾವಿದರೇ. 8ನೇ ತರಗತಿಯವರೆಗೆ ಪುಟ್ಟಗೌರಿ ಸೀರಿಯಲ್ ನಲ್ಲಿ ಸಾನ್ಯಾ ಅಯ್ಯರ್ ಅವರು ನಟಿಸಿದ್ದರು. ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿರುವ ಸಾನ್ಯಾ ಅವರಿಗೆ ಬಣ್ಣದ ಲೋಕ ಹೊಸತೇನಲ್ಲ. ಮಲಯಾಳಂನ ಆರಾರೋ..ನೀಯಾರೋ ಎಂಬ ಅಲ್ವಮ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಕೂಡ ಅಭಿನಯಿಸಿದ್ದಾರೆ. ಗುಲಾಬ್ ಜಾಮೂನ್ ಎಂಬ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ ನಿರೂಪಣೆಯ, ಒಟಿಟಿಯಲ್ಲಿ ಪ್ರಸಾರವಾದ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ಮೂಲಕ ಸಾನ್ಯಾ ಅವರು ಸಿಕ್ಕಾಪಟ್ಟೆ ಫೇಮಸ್ ಆದರು.

Written Update on actress sanyaaiyer photoshoot

ಹೆಚ್ಚು ಟ್ರೋಲ್ ಆಗಿದ್ದ ಸಾನ್ಯಾ

ಸಣ್ಣ-ಪುಟ್ಟ ವಿಚಾರಗಳಿಗೂ ಸಾನ್ಯಾ ಅವರು ಟ್ರೋಲ್ ಆಗುತ್ತಿದ್ದರು. ಆಗಾಗ ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಸಾನ್ಯಾ ಅವರು ಕಮೆಂಟ್ ಗಳ ಸುರಿಮಳೆಯನ್ನೇ ಪಡೆದಿದ್ದರು. ಸಾನ್ಯಾ ಅವರ ಅವತಾರಕ್ಕೆ ಹಲವರು ಬೇಸರ ಮಾಡಿಕೊಳ್ಳುತ್ತಿದ್ದರು. ತಮ್ಮ ಬೋಲ್ಡ್ ಫೋಟೋ ಗಳಿಂದ ಟ್ರೋಲ್ ಆಗಿದ್ದೇ ಹೆಚ್ಚು. ಆದರೆ, ಇದ್ಯಾವುದಕ್ಕೂ ಸಾನ್ಯಾ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಬಿಗ್ ಬಾಸ್ ಮೂಲಕ ರೂಪೇಶ್ ಶೆಟ್ಟಿ ಜೊತೆಗೆ ಸಾನ್ಯಾ ಅವರ ಹೆಸರು ಸೇರಿಕೊಂಡಿತ್ತು. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲಿ ಎಂದು ಕೂಡ ಅಭಿಮಾನಿಗಳು ಬಯಸಿದ್ದರು.

ಲಕ್ ತಂದು ಕೊಡಲಿರುವ ಗೌರಿ

ಗೌರಿ ಎಂಬ ಹೆಸರು ಸಾನ್ಯಾಗೆ ಲಕ್ ತಂದುಕೊಡಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಯಾಕೆಂದರೆ ಸದ್ಯ ಸಾನ್ಯಾ ಅವರು ಪುಟ್ಟ ಗೌರಿ ಧಾರಾವಾಹಿ ಮೂಲಕ ಚಿರಪರಿಚಿತರಾಗಿದ್ದರು. ಇದೀಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಗೌರಿ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ಇದೂ ಕೂಡ ಸಾನ್ಯಾ ಅವರಿಗೆ ಒಳ್ಳೆಯ ಸಕ್ಸಸ್ ತಂದು ಕೊಡಬಹುದು ಎಂದು ಅನೇಕರು ಗೆಸ್ ಮಾಡಿದ್ದಾರೆ. ಸ್ಟೈಲಿಶ್ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರ ಬಹುನಿರೀಕ್ಷಿತ ಸಿನಿಮಾ ಗೌರಿ ಚಿತ್ರದ ಡಬ್ಬಿಂಗ್ ಸದ್ಯಕ್ಕೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗುವ ಸೂಚನೆಯೂ ಕಾಣಿಸುತ್ತಿದೆ. ಖ್ಯಾತ ಸಾಹಿತಿ ಪಿ ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ಗೌರಿ ಚಿತ್ರದ ನಾಯಕನಾಗಿದ್ದು, ಸಾನ್ಯಾಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

Written Update on actress sanyaaiyer photoshoot

ಪ್ರೇಮಿಗಳ ದಿನಕ್ಕೆ ಹೊಸ ಫೋಟೋಸ್

ಪ್ರೇಮಿಗಳ ದಿನದ ಪ್ರಯುಕ್ತ ಈಗ ಸಾನ್ಯಾ ಮತ್ತು ಸಮರ್ಜಿತ್ ಇಬ್ಬರೂ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ವಿಭಿನ್ನವಾದ ಫೋಟೋಶೂಟ್ ಗೆ ಬಾಲಿವುಡ್ ಸೆಲೆಬ್ರಿಟಿಗಳ ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರಿಂದ ಮೇಕಪ್ ಮಾಡಿಸಿದ್ದು, ಖ್ಯಾತ ಛಾಯಾಗ್ರಾಹಕ ಕೆನಡಾದ ರೋಹಿತ್ ಅವರಿಂದ ಫೋಟೋಗಳನ್ನು ತೆಗೆಸಲಾಗಿದೆ. ಈ ಫೋಟೋಶೂಟ್ ನ ವೀಡಿಯೋವನ್ನು ಸಾನ್ಯಾ ಅಯ್ಯರ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

More from Filmibeat

English summary
actress sanyaaiyer new photoshoot for valentine’s day
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X