ಅಭಿಮನ್ಯು ಸನ್ ಆಫ್ ಕಾಶಿನಾಥ್ ಸಿನಿಮಾಗೆ ನಟಿ ಸ್ಪಂದನಾ ನಾಯಕಿ..!

By ಪ್ರಿಯಾ ದೊರೆ

ಕಿರುತೆರೆಯಿಂದ ನಟಿಯರು ಪರಭಾಷೆಗೆ ಹಾರುವುದು, ಸಿನಿಮಾಗಳಲ್ಲಿ ನಟಿಸಲು ಅವಕಾಶ ಗಿಟ್ಟಿಸಿಕೊಂಡು ತೆರೆಮೇಲೆ ಮಿಂಚುವುದು ಹೊಸತೇನು ಅಲ್ಲ. ಈಗ ಈ ಲಿಸ್ಟ್ ಗೆ ನಟಿ ಸ್ಪಂದನಾ ಸೋಮಣ್ಣ ಕೂಡ ಸೇರಿಕೊಂಡಿದ್ದಾರೆ. ಆದರೆ, ಸ್ಪಂದನಾ ಅವರು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡವರೇ. ಈಗ ಮತ್ತೆ ತಮ್ಮ ಲಕ್ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಮುದ್ದಾಗಿ ಕಾಣುವ ನಟಿ ಸ್ಪಂದನಾ ಅವರು ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

ನಾಲ್ಕನೇ ಚಿತ್ರಕ್ಕೆ ನಟಿ ಸ್ಪಂದನಾ ರೆಡಿ

ಹೌದು ನಟಿ ಸ್ಪಂದನಾ ಸೋಮಣ್ಣ ಅವರು ಈಗಾಗಲೇ ದಿಲ್ ಖುಷ್, ಶಟ್ ದ ನಾಯ್ಸ್ ಮತ್ತು ಮರೀಚಿ ಎಂಬ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದೀಗ ದಿ. ಕಾಶೀನಾಥ್ ಅವರ ಪುತ್ರ ಅಭಿಮನ್ಯು ಅವರೊಂದಿಗೆ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಂದೆ ಬದುಕಿರುವಾಗಲೇ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ಅಭಿಮನ್ಯು ಅವರು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಇನ್ನು ಅಭಿಮನ್ಯು ಅವರು ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾದಲ್ಲಿ ನಟಿಸಿದ್ದು, ಈಗ ಅಭಿಮನ್ಯು ಸನ್/ಆಫ್ ಕಾಶೀನಾಥ್ ಎಂಬ ಚಿತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾಗೆ ಹೊಸ ಅನುಭವ ಅಂತ ಸಬ್ ಟೈಟಲ್ ಕೂಡಲಾಗಿದೆ. ಇನ್ನು ಈ ಚಿತ್ರಕ್ಕೆ ರಾಜ್ ಮುರಳಿ ಅವರ ನಿರ್ದೇಶನವಿರಲಿದ್ದು, ಐಸಿರಿ ಪ್ರೊಡಕ್ಷನ್ ಅಡಿ ಮಾರಪ್ಪ ಶ್ರೀನಿವಾಸ್ ನಿರ್ಮಾಣ ಮಾಡುತ್ತಿದ್ದಾರೆ.

Written update on Actress Spandana Somanna

ಕರಿಮಣಿ ಜೊತೆಗೆ ಹೊಸ ಸಿನಿಮಾ

ನಟಿ ಸ್ಪಂದನಾ ಸೋಮಣ್ಣ ಅವರು ಸದ್ಯ ಕರಿಮಣಿ ಎಂಬ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಧಾರಾವಾಹಿ ಜೊತೆಗೆ ಸಿನಿಮಾ ಶೂಟಿಂಗ್ ಗೂ ಡೇಟ್ಸ್ ನೀಡಿದ್ದಾರೆ. ಸ್ಪಂದನಾ ಅವರು ಗೃಹಪ್ರವೇಶ ಧಾರಾವಾಹಿಯ ನಾಯಕಿಯಾಗಿ ನಟಿಸಿದ್ದರು. ಇದಷ್ಟೇ ಅಲ್ಲದೇ, ನಾನು ನನ್ನ ಕನಸು ಧಾರಾವಾಹಿಯಲ್ಲೂ ನಟಿಸಿದ್ದರು. ತೆಲುಗಿನ ಹಲವು ಧಾರಾವಾಹಿಗಳಿಗೆ ಸ್ಪಂದನಾ ಸೋಮಣ್ಣ ಅವರು ಬಣ್ಣ ಹಚ್ಚಿದ್ದಾರೆ. ಅಭಿಲಾಷ ಎನ್ನುವ ಧಾರಾವಾಹಿ ಹಾಗೂ ನಚ್ಚಾವೆ ಎಂಬ ತೆಲುಗಿನ ವೆಬ್ ಸಿರೀಸ್ ಮತ್ತು ಹಿಂದಿಯ ಸುನ್ ಲೆ ನಾ ಎಂಬ ಆಲ್ಬಂ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ.


ಮಾರ್ಡನ್ ಲುಕ್ ನಲ್ಲಿ ಗೊಂಬೆಯಂತೆ ಕಾಣುವ ನಟಿ

ಮೂಲತಃ ಮೈಸೂರಿನವರಾಗಿರುವ ನಟಿ ಸ್ಪಂದನಾ ಸೋಮನ್ಣ, ಮಾಡೆಲ್ ಕೂಡ ಹೌದು. ಸೀರಿಯಲ್ ಗಳಲ್ಲಿ ಹೆಚ್ಚು ಲಂಗ ದಾವಣಿ, ಸಲ್ವಾರ್ ಮತ್ತು ಸೀರೆಯಲ್ಲಿ ಕಾಣಿಸಿಕೊಳ್ಳುವ ಸ್ಪಂದನಾ ಅವರು ಸಿಕ್ಕಾಪಟ್ಟೆ ಮಾರ್ಡನ್ ಉಡುಗೆಯನ್ನೂ ಧರಿಸುತ್ತಾರೆ. ಮಾರ್ಡನ್ ಡ್ರೆಸ್ ಗಳಲ್ಲೂ ಸೂಪರ್ ಆಗಿ ಕಾಣಿಸುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸುವ ಸ್ಪಂದನಾ ಅವರು ಎಲ್ಲಾ ಉಡುಗೆಯಲ್ಲೂ ಮುದ್ದಾಗಿ ಕಾಣಿಸುತ್ತಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಹೊಸ ಲುಕ್ ನ ರೀಲ್ಸ್ ಮಾಡುತ್ತಿರುತ್ತಾರೆ.

ವಿಶ್ ಮಾಡಿದ ಅಭಿಮಾನಿಗಳು

ಇನ್ನು ಈ ಬಾರಿಯ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ನಟಿ ಸ್ಪಂದನಾ ಸೋಮಣ್ಣ ಅವರು ಜಿಯೋ ಸಿನಿಮಾ ಜೋಡಿ ಎಂಬ ಪ್ರಶಸ್ತಿಯನ್ನು ಕರಿಮಣಿ ನಾಯಕನೊಂದಿಗೆ ಪಡೆದಿದ್ದರು. ನಟಿ ಸ್ಪಂದನಾ ಅವರು ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಎಲ್ಲರೂ ಸ್ಪಂದನಾ ಅವರಿಗೆ ವಿಶ್ ಮಾಡಿದ್ದು, ಈ ಸಿನಿಮಾ ನಿಮಗೆ ಊಹಿಸದಷ್ಟು ಸಕ್ಸಸ್ ತಂದು ಕೊಡಲಿ ಎಂದು ಶುಭ ಹಾರೈಸಿದ್ದಾರೆ. ನಮ್ಮ ಕಡೆಯಿಂದಲೂ ನಟಿ ಸ್ಪಂದನಾ ಅವರಿಗೆ ಆಲ್ ದಿ ಬೆಸ್ಟ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X