ಮೂವರು ಸುಂದರಿಯರ 'ಯಾನ'ಗೆ ರಾಕಿಂಗ್ ಸ್ಟಾರ್ ಯಶ್ ಸಾಥ್
Recommended Video
ಸ್ಯಾಂಡಲ್ ವುಡ್ ನಲ್ಲಿ ಮೂವರು ಸುಂದರಯರು 'ಯಾನ' ಹೊರಟು ವರ್ಷವೆ ಆಗಿದೆ. ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸಾರಥ್ಯದಲ್ಲಿ ಹೊರಟ 'ಯಾನ' ಇನ್ನು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿಲ್ಲ. ಆದ್ರೀಗ ಅವರ 'ಯಾನ'ಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಸಾಥ್ ನೀಡಿದ್ದಾರೆ.
ಹೌದು, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ 'ಯಾನ' ಸಿನಿಮಾ ರಿಲೀಸ್ ಗೆ ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿಜಯಲಕ್ಷ್ಮಿ ಅವರ ಮೂವರು ಮಕ್ಕಳಾದ ವೈಭವಿ, ವೈಸಿರಿ ಮತ್ತು ವೈನಿಧಿ ಅಭಿನಯಿಸಿರುವ ಚಿತ್ರ 'ಯಾನ'. ಇದೊಂದು ಜರ್ನಿಯ ಸ್ಟೋರಿಯಾಗಿದ್ದು ಪ್ರವಾಸದ ಅನುಭವವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆಯಂತೆ.
ಅಂದ್ಹಾಗೆ ಒಂದಿಷ್ಟು ಕುತೂಹವನ್ನು ಹುಟ್ಟುಹಾಕಿರುವ 'ಯಾನ' ಚಿತ್ರದ ಟ್ರೈಲರ್ ರಿಲೀಸ್ ಗೆ ತಯಾರಿ ಮಾಡಿಕೊಳ್ಳಲಾಗಿದೆ. ಚಿತ್ರದ ಟ್ರೈಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡುತ್ತಿರುದು ವಿಶೇಷ. ಇಂದು(ಜೂನ್ 27) 'ಯಾನ' ಚಿತ್ರದ ಬಹುನಿರೀಕ್ಷೆಯ ಟ್ರೈಲರ್ ಚಿತ್ರಾಭಿಮಾನಿಗಳ ಮುಂದೆ ಬರಲಿದೆ.

ಈ ಮೂವರು ಸುಂದರಿಯರು ಹೇಗೆ ಅಭಿನಯಿಸಿದ್ದಾರೆ. ಚಿತ್ರ ಹೇಗಿರಲಿದೆ ಎನ್ನುವ ಸುಳಿವು ಈ ಟ್ರೈಲರ್ ಮೂಲಕ ಸಿಗಲಿದೆ. ಈ ಮೂವರು ಸಹೋದರಿಯರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಯಾವ ಪಾತ್ರ ಅನ್ನೋದು ರಿವೀಲ್ ಆಗಲಿಲ್ಲ. ಆದ್ರಿಂದು ರಿಲೀಸ್ ಆಗುತ್ತಿರುವ ಟ್ರೈಲರ್ ಹೇಗಿರಲಿದೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಲ್ಲಿದೆ.


Click it and Unblock the Notifications











