»   » ಉಪೇಂದ್ರ 'ಪ್ರಜಾಕೀಯ'ದ ಬಗ್ಗೆ ಮಹಾರಾಜ ಯದುವೀರ್ ಮಾತು

ಉಪೇಂದ್ರ 'ಪ್ರಜಾಕೀಯ'ದ ಬಗ್ಗೆ ಮಹಾರಾಜ ಯದುವೀರ್ ಮಾತು

Posted By:
Subscribe to Filmibeat Kannada

ನಟ ಉಪೇಂದ್ರ ಅವರ 'ಪ್ರಜಾಕೀಯ'ದ ಬಗ್ಗೆ ಈಗಾಗಲೇ ಅನೇಕ ಗಣ್ಯರು ಮಾತನಾಡಿದ್ದಾರೆ. ಕೆಲವರು ಉಪ್ಪಿ ಆಲೋಚನೆಯನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ದುಡ್ಡಿಲ್ಲದೆ ಅದೇಗೇ ಪಕ್ಷ ಮಾಡೊಕ್ಕೆ ಸಾಧ್ಯ ಎನ್ನುತ್ತಿದ್ದಾರೆ. ಆದರೆ ಇದರೊಂದಿಗೆ ಈಗ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಉಪ್ಪಿಗೆ ಶುಭ ಕೋರಿದ್ದಾರೆ.

ಉಪೇಂದ್ರ 'ಪ್ರಜಾಕೀಯ' ವೆಬ್ ಸೈಟ್ ನಲ್ಲಿರುವ ವಿಶೇಷತೆಗಳು

''ಉಪೇಂದ್ರ ಅವರು ಪ್ರಜಾಕೀಯ ಪಕ್ಷ ಕಟ್ಟಿದ್ದು ಒಳ್ಳೆದಾಯಿತು, ಉಪೇಂದ್ರ ಅವರು ಹೊಸ ಆಲೋಚನೆ ಇಟ್ಟುಕೊಂಡು ಪಕ್ಷ ಸ್ಥಾಪಿಸಿದ್ದಾರೆ. ಕರ್ನಾಟಕಕ್ಕೆ ಹೊಸ ಆಲೋಚನೆಗಳು ಬೇಕಾಗಿತ್ತು. ಆ ಹೊಸ ಆಲೋಚನೆಯನ್ನು ಉಪೇಂದ್ರ ಅವರು ಮಾಡಿದ್ದಾರೆ. ಈ ರೀತಿಯ ಪಕ್ಷ ಕರ್ನಾಟಕಕ್ಕೆ ಬೇಕಾಗಿತ್ತು. ಉಪೇಂದ್ರ ಅವರು ಈ ಮೂಲಕ ಕರ್ನಾಟಕಕ್ಕೆ ಒಳ್ಳೆಯದು ಮಾಡಲಿ'' ಎಂದು ಹೇಳಿದರು.

 Yaduveer Krishnadatta Chamaraja Wadiyar spoke about Upendra

ಕೊಳ್ಳೆಗಾಲ ತಾಲೂಕಿನ ಕುರುಬರಕಟ್ಟೆ ಗ್ರಾಮದ ಶ್ರೀ ಧರೆಗೆ ದೊಡ್ಡವರ ಸಂಸ್ಥಾನ ಮಠದ ಧ್ಯಾನ ಮಂದಿರ ಉದ್ಘಾಟಿಸಿದ ವೇಳೆ ಉಪ್ಪಿ ಬಗ್ಗೆ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು. ಜೊತೆಗೆ ತಮಗೆ ಸದ್ಯಕ್ಕೆ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ.

English summary
Yaduveer Krishnadatta Chamaraja Wadiyar spoke about Upendra's 'Karnataka Pragnyavanta Janata Paksha'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada