ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರಾವಳಿ ಕುವರಿ, ನಟಿ ಯಜ್ಞ ಶೆಟ್ಟಿ

ಕರಾವಳಿ ಕುವರಿ, ನಟಿ ಯಜ್ಞ ಶೆಟ್ಟಿ ವಿವಾಹ ಇಂದು (ಅಕ್ಟೋಬರ್ 30) ನಡೆದಿದೆ. ಸದ್ದಿಲ್ಲದೆ ಸಂದೀಪ್ ಶೆಟ್ಟಿ ಎಂಬುವವರ ಜೊತೆಗೆ ಯಜ್ಞ ಶೆಟ್ಟಿ ದಾಂಪತ್ಯ ಕಾಲಿಟ್ಟಿದ್ದಾರೆ. ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ನಟ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮದುವೆಯ ಫೋಟೋಗಳನ್ನು ರಿಷಬ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ನವ ಜೋಡಿಗೆ ಚಿತ್ರರಂಗದ ಸ್ನೇಹಿತರು ಶುಭ ಹಾರೈಸಿದ್ದಾರೆ.

ಅಂದಹಾಗೆ, ಯಜ್ಞ ಶೆಟ್ಟಿ ಹುಟ್ಟಿದ್ದು, ಕುದುರೆಮುಖದಲ್ಲಿ. ನಂತರ 'ಒಂದು ಪ್ರೀತಿಯ ಕಥೆ' ಸಿನಿಮಾದ ಮೂಲಕ 2007ರಲ್ಲಿ ಚಿತ್ರರಂಗಕ್ಕೆ ಬಂದರು. ನಂತರ 'ಎದ್ದೇಳು ಮಂಜುನಾಥ', 'ಸುಗ್ರೀವ' 'ಲವ್ ಗುರು', 'ಕಳ್ಳ ಮಳ್ಳ ಸುಳ್ಳ', 'ಉಳಿದವರು ಕಂಡಂತೆ', 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗಳಲ್ಲಿ ನಟಿಸಿದ್ದಾರೆ.

Yagna Shetty Got Married With Sandeep Shetty

ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಲಕ್ಷ್ಮಿಸ್ ಎನ್ ಟಿ ಆರ್' ತೆಲುಗು ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸುದೀಪ್ ನಿರ್ಮಾಣದ 'ವಾರಸ್ಧಾರ' ಧಾರವಾಹಿ ಅವರಿಗೆ ಒಳ್ಳೆಯ ಹೆಸರು ನೀಡಿದೆ.

More from Filmibeat

English summary
Kannada actress Yagna Shetty got married with Sandeep Shetty in Mangalore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X