For Quick Alerts
  ALLOW NOTIFICATIONS  
  For Daily Alerts

  ಯಜ್ಞಾ ಶೆಟ್ಟಿಗೆ ದೊಡ್ಡ ಅವಕಾಶ ನೀಡಿದ ರಾಮ್ ಗೋಪಾಲ್ ವರ್ಮಾ

  |

  ಎದ್ದೇಳು ಮಂಜುನಾಥ, ಉಳಿದವರು ಕಂಡಂತೆ, ಕಿಲ್ಲಿಂಗ್ ವೀರಪ್ಪನ್ ಅಂತಹ ಚಿತ್ರಗಳಲ್ಲಿ ನಟಿಸಿದ್ದ ನಟಿ ಯಜ್ಞಾ ಶೆಟ್ಟಿಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದೊಡ್ಡದೊಂದು ಅವಕಾಶ ನೀಡಿದ್ದಾರೆ.

  ಟಾಲಿವುಡ್ ನಲ್ಲಿ ಸದ್ಯ ಸೆನ್ಸೆಷ್ನಲ್ ಹುಟ್ಟುಹಾಕಿರುವ 'ಲಕ್ಷ್ಮೀಸ್ ಎನ್.ಟಿ.ಆರ್' ಚಿತ್ರದಲ್ಲಿ ನಟಿಸಲು ಯಜ್ಞಾ ಶೆಟ್ಟಿ ಮಣೆ ಹಾಕಿದ್ದಾರೆ. ಈ ಸುದ್ದಿಯನ್ನ ಸ್ವತಃ ರಾಮ್ ಗೋಪಾಲ್ ವರ್ಮಾ ಅವರೇ ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ.

  ತೆಲುಗಿನ ಸೂಪರ್ ಸ್ಟಾರ್ ನಟ ಎನ್.ಟಿ.ಆರ್ ಅವರ ಜೀವನ ಕುರಿತಾಗಿ 'ಲಕ್ಷ್ಮೀಸ್ ಎನ್.ಟಿ.ಆರ್' ಎಂಬ ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ಯಜ್ಞಾ ಶೆಟ್ಟಿ ನಟಿಸಲಿದ್ದಾರೆ.

  Ntr ಬೆನ್ನಿಗೆ ಚೂರಿ ಹಾಕಿದ ಕಥೆ ಬಿಚ್ಚಿಟ್ಟ ವರ್ಮಾ, 'ಬಾಬು' ಮೇಲೆ ಅಟ್ಯಾಕ್.!Ntr ಬೆನ್ನಿಗೆ ಚೂರಿ ಹಾಕಿದ ಕಥೆ ಬಿಚ್ಚಿಟ್ಟ ವರ್ಮಾ, 'ಬಾಬು' ಮೇಲೆ ಅಟ್ಯಾಕ್.!

  ಇಲ್ಲಿಯವರೆಗೂ 'ಲಕ್ಷ್ಮೀಸ್ ಎನ್.ಟಿ.ಆರ್' ಚಿತ್ರದ ಯಾವ ಪಾತ್ರದ ಬಗ್ಗೆಯೂ ಸಣ್ಣ ಸುಳಿವು ಕೂಡ ನೀಡಿರಲಿಲ್ಲ. ಇದೇ ಮೊದಲ ಸಲ ಮೊದಲ ಪಾತ್ರವನ್ನ ವರ್ಮಾ ಪರಿಚಯ ಮಾಡಿದ್ದಾರೆ. ಸದ್ಯ, ಬಹುತೇಕ ಚಿತ್ರೀಕರಣ ಮುಗಿಸಿರುವ ಆರ್.ಜಿ.ವಿ ಸದ್ಯದಲ್ಲೇ ರಿಲೀಸ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.

  ಯಜ್ಞಾ ಶೆಟ್ಟಿ ಪಾತ್ರದ ಜೊತೆ ಇನ್ನೊಂದು ಪಾತ್ರವನ್ನ ರಿವೀಲ್ ಮಾಡಿರುವ ವರ್ಮಾ, ಚಂದ್ರು ಬಾಬು ನಾಯ್ಡು ಅವರನ್ನ ಹೋಲುವಂತ ವ್ಯಕ್ತಿಯ ಫೋಟೋ ಶೇರ್ ಮಾಡಿ, ಇವರು ಯಾರ ಪಾತ್ರ ನಿರ್ವಹಿಸಲಿದ್ದಾರೆ ಎಂದು ಊಹಿಸಿ ಎಂದು ಜನರಿಗೆ ಬಿಟ್ಟಿದ್ದಾರೆ.

  ಈಗಾಗಲೇ ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರದ ಎರಡು ಹಾಡುಗಳನ್ನ ರಿಲೀಸ್ ಮಾಡಿದ್ದು, ತೆಲುಗು ಇಂಡಸ್ಟ್ರಿ ಹಾಗೂ ತೆಲುಗು ರಾಜಕೀಯ ಕ್ಷೇತ್ರವನ್ನ ಬೆಚ್ಚಿಬೀಳಿಸಿದ್ದಾರೆ. ಎನ್.ಟಿ.ಆರ್ ಗೆ ಮೋಸ ಮಾಡಿದ್ದು ಯಾರು? ಅವರ ಬೆನ್ನಿಗೆ ಚೂರಿ ಹಾಕಿದ್ದು ಯಾರು, ಜೊತೆಯಲ್ಲೇ ಇದ್ದು ಹೇಗೆ ಅವರನ್ನ ಸೋಲಿಸಿದರು ಎಂದು ಈ ಸಿನಿಮಾದಲ್ಲಿ ಆರ್.ಜಿ.ವಿ ತೋರಿಸಲಿದ್ದಾರಂತೆ.

  English summary
  Kannada actress Yagna Shetty is playing Lakshmi Parvathi role in Lakshmis NTR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X