ಕೆಜಿಎಫ್ ಕೋಟೆ ಅಲುಗಾಡಿಸಿ 'ಬಾಸ್' ಆದ ಯಜಮಾನ
Recommended Video

ಕೆಜಿಎಫ್ ಕನ್ನಡ ಟ್ರೈಲರ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಿತ್ತು. ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿತ್ತು. ಕೆಜಿಎಫ್ ಮಾಡಿದ್ದ ಹವಾ ನೋಡಿ, ಬಹುಶಃ ಈ ದಾಖಲೆಯನ್ನ ಬೇರೆ ಯಾವ ಚಿತ್ರವೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗ್ತಿತ್ತು.
ಆದ್ರೀಗ, ಆ ಮಾತು ಕೆಲವೇ ದಿನಗಳಲ್ಲಿ ಸುಳ್ಳಾಗಿದೆ. ಹೌದು, ಕೆಜಿಎಫ್ ನಿರ್ಮಿಸಿದ್ದ ಟ್ರೈಲರ್ ದಾಖಲೆಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾ ಅಳಿಸಿಹಾಕಿದೆ. ಈ ಮೂಲಕ ದಾಖಲೆ ಇರೋದೇ ಅಳಿಸಿ ಹಾಕೋಕೆ ಎಂಬುದನ್ನ ಈ ಎರಡು ಚಿತ್ರಗಳು ಸಾಬೀತು ಮಾಡಿದೆ.
ಸದ್ಯ, ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟ್ರೈಲರ್ ಯಾವುದು ಎಂಬ ಪ್ರಶ್ನೆಗೆ ಉತ್ತರ ಡಿ ಬಾಸ್ ಯಜಮಾನ. ಹಾಗಿದ್ರೆ, ಕೆಜಿಎಫ್ ಟ್ರೈಲರ್ ವೀಕ್ಷಣೆ ಎಷ್ಟಿದೆ? ಯಜಮಾನ ಎಷ್ಟಿದೆ? ಮುಂದೆ ಓದಿ....

ಯಜಮಾನನೇ ಈಗ ಬಾಸ್
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈಗ ಯಜಮಾನ ಹೊಸ ದಾಖಲೆ ಬರೆದಿದ್ದು, ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಗಳ ಪೈಕಿ ಯಜಮಾನ ಬಾಸ್ ಆಗಿದೆ. ಹೌದು, ಮಾರ್ಚ್ 21ಕ್ಕೆ ಯಜಮಾನ ವೀಕ್ಷಣೆ 18.78 (18,782,116) ಮಿಲಿಯನ್ ಆಗಿದೆ. ಇದು ಕನ್ನಡ ಚಿತ್ರವೊಂದು ಅತಿ ಹೆಚ್ಚು ವೀವ್ಸ್ ಪಡೆದ ಚಿತ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಕೆಜಿಎಫ್ ಎರಡನೇ ಸ್ಥಾನ
ಟ್ರೈಲರ್ ರಿಲೀಸ್ ಆದಾಗನಿಂದಲೂ ಮೊದಲ ಸ್ಥಾನದಲ್ಲಿದ್ದ ಕೆಜಿಎಫ್ ಟ್ರೈಲರ್ ಅಂತಿಮವಾಗಿ ಹಿಂದೆ ಬಿದ್ದಿದೆ. ದರ್ಶನ್ ಯಜಮಾನ ಚಿತ್ರದ ಟ್ರೈಲರ್ ಅಬ್ಬರದ ಮುಂದೆ ಕೆಜಿಎಫ್ ಗೆ ಹಿನ್ನಡೆಯಾಗಿದೆ. ಸದ್ಯ, ಕೆಜಿಎಫ್ ಟ್ರೈಲರ್ 18.77 (18,770,683) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಹಾವು ಏಣಿ ಆಟ ನಿಲ್ಲಲ್ಲ
ಅಂದ್ಹಾಗೆ, ಇದು ಅಂತಿಮವಲ್ಲ. ಕೆಜಿಎಫ್ ಮತ್ತು ಯಜಮಾನ ಟ್ರೈಲರ್ ನಡುವೆ ಭಾರಿ ಪೈಪೋಟಿ ಇದೆ. ಈಗ ಯಜಮಾನ ಮೊದಲ ಸ್ಥಾನಕ್ಕೆ ಬಂದಿದ್ದರೂ, ಮುಂದಿನ ದಿನದಲ್ಲಿ ಮತ್ತೆ ಕೆಜಿಎಫ್ ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿಯಿಲ್ಲ. ಯಾಕಂದ್ರೆ, ಈ ಎರಡು ಟ್ರೈಲರ್ ಗಳ ನಡುವಿನ ನಂತರ ತುಂಬಾ ಕಮ್ಮಿ ಇದೆ. ಮಾರ್ಚ್ 21 ಮಧ್ಯಾಹ್ನ 3.38 ಗಂಟೆಗೆ ಈ ಎರಡು ಟ್ರೈಲರ್ ಅಂತರ ಕೇವಲ 11,433 ಸಾವಿರ ಮಾತ್ರ ಇದೆ.

ಆರೋಗ್ಯಕರ ಬೆಳವಣಿಗೆ
ಒಂದು ಸಮಯದಲ್ಲಿ ಕನ್ನಡ ಸಿನಿಮಾಗಳ ಟ್ರೈಲರ್, ಹಾಡುಗಳು ಯೂಟ್ಯೂಬ್ ನ ಯಾವ ದಾಖಲೆ ಪಟ್ಟಿಯಲ್ಲೂ ಇರಲಿಲ್ಲ. ಆದ್ರೀಗ, ಸಮಯ ಬದಲಾಗಿದೆ. ಭಾರತದ ಟ್ರೆಂಡಿಂಗ್ ನಲ್ಲಿ ಕನ್ನಡ ಸಿನಿಮಾಗಳು ಹವಾ ಹೆಚ್ಚಾಗ್ತಿದೆ. ಅಂದ್ಹಾಗೆ, ಇದು ಆರೋಗ್ಯಕರ ಬೆಳವಣಿಗೆ ಆಗಿದೆ ಎಂಬುದು ಖುಷಿಯ ವಿಚಾರ.


Click it and Unblock the Notifications











