ಯಜಮಾನ ಚಿತ್ರಕ್ಕೂ ಎದುರಾಯ್ತು ಪೈರಸಿ ಕಾಟ.!

Recommended Video

Yajamana Movie: ನಟಸಾರ್ವಭೌಮ ಆಯ್ತು, ಈಗ ಯಜಮಾನ | FILMIBEAT KANNADA

ಕನ್ನಡ ಇಂಡಸ್ಟ್ರಿಯಲ್ಲಿ ಪೈರಸಿ ಕಮ್ಮಿ ಎಂಬ ಮಾತಿದೆ. ಬಹುಶಃ ಅದು ನಿಜ ಕೂಡ ಆಗಿತ್ತು. ಆದ್ರೆ, ಈಗ ಆ ಮಾತನ್ನ ವಾಪಸ್ ತೆಗೆದುಕೊಳ್ಳಬೇಕಿದೆ. ಯಾಕಂದ್ರೆ, ರಿಲೀಸ್ ಆದ ಕೆಲವೇ ದಿನಗಳಲ್ಲಿ ಕನ್ನಡ ಚಿತ್ರಗಳ ಪೈರಸಿ ಕೂಡ ಹೊರಗೆ ಬರುತ್ತಿದೆ.

ಹೊಸಬರ ಅಥವಾ ಯುವನಟರ ಸಿನಿಮಾಗಳು ಅಂದ್ರೆ ಅದನ್ನ ತಡೆಯೋದು ಸ್ವಲ್ಪ ಕಷ್ಟ ಎನ್ನಬಹುದು. ಆದ್ರೆ, ಪುನೀತ್, ದರ್ಶನ್ ಅಂತಹ ಸ್ಟಾರ್ ನಟರ ಚಿತ್ರಗಳೇ ಖಾಸಗಿ ವೆಬ್ ಸೈಟ್ ಗಳಲ್ಲಿ ಹರಿದಾಡುತ್ತಿದೆ. ಹೌದು, ಈಗ ಲೇಟೆಸ್ಟ್ ಆಗಿ ದರ್ಶನ್ ಅವರ ಯಜಮಾನ ಸಿನಿಮಾ ಪೈರಸಿಯಾಗಿದೆ.

ಈಗಿನ ಪರಿಸ್ಥಿತಿಯಲ್ಲಿ ಸ್ಟಾರ್ ನಟರ ಇಂಟ್ರೋ ಸಾಂಗ್ ಅಥವಾ ಇಂಟ್ರೋ ದೃಶ್ಯವನ್ನ ಸೆರೆಹಿಡಿದು ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ರೆನೇ ಅಭಿಮಾನಿಗಳು ಸುಮ್ಮನೇ ಇರಲ್ಲ. ಇದೀಗ, ಪೂರ್ತಿ ಸಿನಿಮಾವನ್ನೇ ಪೈರಸಿ ಮಾಡಿದ್ರೆ ಏನ್ ಮಾಡೋದು? ಇದರ ವಿರುದ್ಧ ಇನ್ನು ಯಾಕೆ ಯಾರು ಎಚ್ಚೆತ್ತುಕೊಂಡಿಲ್ಲ? ಮುಂದೆ ಓದಿ...

ತಮಿಳು ರಾಕರ್ಸ್ ಅಟ್ಟಹಾಸ

ತಮಿಳು ರಾಕರ್ಸ್ ಅಟ್ಟಹಾಸ

ಇಷ್ಟು ದಿನ ತೆಲುಗು, ತಮಿಳು, ಹಿಂದಿ ಚಿತ್ರಗಳನ್ನ ಟಾರ್ಗೆಟ್ ಮಾಡಿದ್ದ ತಮಿಳು ರಾಕರ್ಸ್, ಈಗ ಕನ್ನಡ ಸಿನಿಮಾಗಳನ್ನ ಕೂಡ ಗುರಿಯಾಗಿಸಿದೆ. ದರ್ಶನ್ ಯಜಮಾನ ಸಿನಿಮಾ ರಿಲೀಸ್ ಆಗಿ ಕೇವಲ ಏಳು ದಿನಗಳು ಕಳೆದಿದೆ. ಅಷ್ಟರಲ್ಲೇ ಯಜಮಾನ ಪೂರ್ತಿ ಸಿನಿಮಾ ಪೈರಸಿಯಾಗಿದೆ.

ಎಚ್ಚೆತ್ತುಕೊಳ್ಳಬೇಕಿದೆ

ಎಚ್ಚೆತ್ತುಕೊಳ್ಳಬೇಕಿದೆ

ಕೇವಲ ದೃಶ್ಯಗಳು ಮಾತ್ರ ಲೀಕ್ ಮಾಡಿದವರ ವಿರುದ್ಧ ಕ್ರ ಜರುಗಿಸುವ ಚಿತ್ರತಂಡಗಳು ಈಗ ಇಡೀ ಸಿನಿಮಾವನ್ನೇ ಲೀಕ್ ಮಾಡಿದವರಿಗೆ ಏನು ಮಾಡಬೇಕು ಹೇಳಿ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿಲ್ಲ ಅಂದ್ರೆ ಕನ್ನಡ ಸಿನಿಮಾಗಳಿಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ. ಇದು ಕಲೆಕ್ಷನ್ ಮೇಲೂ ಪ್ರಭಾವ ಬೀರಲಿದೆ.

ನಟಸಾರ್ವಭೌಮನೂ ಲೀಕ್

ನಟಸಾರ್ವಭೌಮನೂ ಲೀಕ್

ಕೇವಲ ದರ್ಶನ್ ಸಿನಿಮಾ ಮಾತ್ರವಲ್ಲ, ಪುನೀತ್ ರಾಜ್ ಕುಮಾರ್ ಅವರ ನಟಸಾರ್ವಭೌಮ ಸಿನಿಮಾನೂ ಲೀಕ್ ಆಗಿತ್ತು. ಸಿನಿಮಾ ರಿಲೀಸ್ ಆಗಿ ಕೇವಲ 25 ದಿನ ಆಗಿದೆಯಷ್ಟೆ. ಈ ಚಿತ್ರವನ್ನ ಕೂಡ ತಮಿಳು ರಾಕರ್ಸ್ ಅವರೇ ಪೈರಸಿ ಮಾಡಿದ್ದಾರೆ.

ಕನ್ನಡಕ್ಕೆ ಮಾರಕವಾಗ್ತಿದೆ ತಮಿಳು ರಾಕರ್ಸ್

ಕನ್ನಡಕ್ಕೆ ಮಾರಕವಾಗ್ತಿದೆ ತಮಿಳು ರಾಕರ್ಸ್

ರಜನಿಕಾಂತ್, ವಿಜಯ್, ಎನ್.ಟಿ.ಆರ್, ರಾಮ್ ಚರಣ್ ಅಂತವರ ಚಿತ್ರಗಳಿಗೆ ಬಹಿರಂಗವಾಗಿ ಸವಾಲ್ ಹಾಕಿ ಸಿನಿಮಾ ಪೈರಸಿ ಮಾಡ್ತಿರುವ ತಮಿಳು ರಾಕರ್ಸ್ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸುವಲ್ಲಿ ಯಶಸ್ಸು ಕಾಣ್ತಿಲ್ಲ. ಯಾಕಂದ್ರೆ, ತಮಿಳು ರಾಕರ್ಸ್ ನಿಯಂತ್ರಕರು ಎಲ್ಲಿದ್ದಾರೆ, ಹೇಗೆ ಲೀಕ್ ಮಾಡ್ತಾರೆ, ಅವರ ಐಪಿ ವಿಳಾಸ ಯಾವುದೂ ಗೊತ್ತಿಲ್ಲ. ಹೀಗಾಗಿ, ಇದು ಭಾರತೀಯ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ತಲೆನೋವಾಗಿದೆ.

More from Filmibeat

English summary
Challenging star darshan's Yajamana full movie leaked online by Tamilrockers. movie was written and directed by Harikrishna. movie has released on march 1st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X