ಯುಎಸ್, ಕೆನಡಾದಲ್ಲಿ ದಾಖಲೆ ಬರೆಯಲಿರುವ ಯಜಮಾನ.!
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಕಳೆದ ವಾರವಷ್ಟೇ ಅದ್ಧೂರಿಯಾಗಿ ತೆರೆಕಂಡಿದ್ದು, ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರು ಸಖತ್ ಎಂಜಾಯ್ ಮಾಡ್ತಿದ್ದಾರೆ.
ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದ ಯಜಮಾನ ಯುಎಸ್ ಮತ್ತು ಕೆನಡಾದಲ್ಲಿ ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಮಾರ್ಚ್ 8 ರಂದು ದರ್ಶನ್ ಸಿನಿಮಾ ವಿದೇಶದಲ್ಲಿ ಅದ್ಧೂರಿ ಎಂಟ್ರಯಾಗ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯುತ್ತಿದೆ.
ಹೌದು, ಸದ್ಯದ ಮಾಹಿತಿ ಪ್ರಕಾರ ಉತ್ತರ ಅಮೇರಿಕಾದಲ್ಲಿ 55ಕ್ಕೂ ಅಧಿಕ ಸ್ಥಳಗಳಲ್ಲಿ ಕನ್ನಡ ಸಿನಿಮಾ ತೆರೆಕಾಣುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಈಗಾಗಲೇ ಕರ್ನಾಟಕ ಹಾಗೂ ಹೊರರಾಜ್ಯಗಳಲ್ಲಿ ಯಜಮಾನ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು, ಬಾಕ್ಸ್ ಅಫೀಸ್ ನಲ್ಲೂ ಭರ್ಜರಿ ಬಿಸಿನೆಸ್ ಮಾಡ್ತಿದೆ. ಇದೀಗ, ಹೊರದೇಶದಲ್ಲೂ ಹೆಚ್ಚು ಶೋಗಳನ್ನ ಕಾಡಲಿದ್ದು, ಅಲ್ಲಿಯೂ ಅಬ್ಬರಿಸುವ ಸೂಚನೆ ಸಿಕ್ಕಿದೆ.
ಇನ್ನುಳಿದಂತೆ ಪೊನ್ನು ಕುಮಾರ್ ಮತ್ತು ಹರಿಕೃಷ್ಣ ನಿರ್ದೇಶನ ಮಾಡಿರುವ ಈ ಚಿತ್ರವನ್ನ ಬಿ ಸುರೇಶ್ ಮತ್ತು ಶೈಲಜಾ ನಾಗ್ ದಂಪತಿ ನಿರ್ಮಾಣ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ದೇವರಾಜ್, ರವಿಶಂಕರ್, ತಾನ್ಯ ಹೋಪ್, ಠಾಕೂರ್ ಅನೂಪ್ ಸಿಂಗ್, ಧನಂಜಯ್, ಸಾಧು ಕೋಕಿಲಾ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











