'ಯಜಮಾನ' ಮುಂಗಡ ಟಿಕೆಟ್ ಬುಕ್ಕಿಂಗ್ ಪ್ರಾರಂಭ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. 'ಯಜಮಾನ' ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಇಂದಿನಿಂದ ಶುರು ಆಗಿದೆ.
ಬುಕ್ ಮೈ ಶೋ ನಲ್ಲಿ ಚಿತ್ರದ ಟಿಕೆಟ್ ಗಳು ಲಭ್ಯವಿದೆ. ಸದ್ಯಕ್ಕೆ ಕೆಲವು ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ಅನ್ನು ಓಪನ್ ಮಾಡಲಾಗಿದೆ. ಬೆಂಗಳೂರಿನ ಊರ್ವಶಿ, ತುಳಸಿ, ಶ್ರೀನಿವಾಸ, ಗೋಪಾಲನ್ ಸಿನಿಮಾಸ್, ಸಿದ್ದಲಿಂಗೇಶ್ವರ ಚಿತ್ರಮಂದಿರಗಳಲ್ಲಿ ಸದ್ಯಕ್ಕೆ ಬುಕ್ಕಿಂಗ್ ಶುರುವಾಗಿದೆ.
ಮಾರತ್ ಹಳ್ಳಿಯ ತುಳಸಿ ಚಿತ್ರಮಂದಿರದಲ್ಲಿ ಬೆಳಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಪ್ರಾರಂಭ ಆಗುತ್ತಿದೆ. ಸಿನಿಮಾದ ಕ್ರೇಜ್ ತುಂಬಾನೇ ಜೋರಾಗಿದ್ದು, ಚಿತ್ರಮಂದಿರಗಳ ಸಂಖ್ಯೆ ಅಧಿಕ ಆಗಲಿದೆ. ಸದ್ಯಕ್ಕೆ ಎಂಟು ಚಿತ್ರಮಂದಿರಗಳಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ. ಒಂದೊಂದೇ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿದೆ.

'ಯಜಮಾನ' ಸಿನಿಮಾದ ಮೂಲಕ ದರ್ಶನ್ ಒಂದೂವರೆ ವರ್ಷಗಳ ಬಳಿಕ ಬರುತ್ತಿದ್ದಾರೆ. ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯ ಹೂಪ್, ದೇವರಾಜ್, ಧನಂಜಯ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್ ಸೇರಿದಂತೆ ಬಹು ತಾರಾಗಣ ಚಿತ್ರದಲ್ಲಿದೆ.
ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಜೊತೆಗೆ ಡೈರೆಕ್ಟರ್ ಕೂಡ ಆಗಿದ್ದಾರೆ. ಶೈಲಜಾ ನಾಗ್ ಚಿತ್ರದ ನಿರ್ಮಾಣ ಹಾಗೂ ವಿತರಣೆ ಮಾಡುತ್ತಿದ್ದಾರೆ.


Click it and Unblock the Notifications











