'ಯಜಮಾನ' ಟ್ರೇಲರ್ : ಶಿವನಂದಿಯಾಗಿ ಅಬ್ಬರಿಸಿದ ಡಿ ಬಾಸ್
'ಯಜಮಾನ' ಸಿನಿಮಾದ ನಾಲ್ಕು ಹಾಡುಗಳು ಅದ್ಬುತ ಯಶಸ್ಸಿನ ಬಳಿಕ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾದ ಕೇವಲ 8 ನಿಮಿಷಗಳಲ್ಲಿ ಒಂದು ಲಕ್ಷ ಹಿಟ್ಸ್ ಪಡೆದುಕೊಂಡಿದೆ
ದರ್ಶನ್ ಅಭಿಮಾನಿಗಳಿಗೆ ಏನು ಬೇಕೋ ಆ ಅಂಶಗಳು ಸಿನಿಮಾದಲ್ಲಿದೆ ಎನ್ನುವುದದನ್ನು ಟ್ರೇಲರ್ ತೋರುತ್ತಿದೆ. ಆಕ್ಷನ್, ಖಡಕ್ ಡೈಲಾಗ್ ಗಳ ಜೊತೆಗೆ ಮನೆ ಹುಡುಗನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಎಲ್ಲ ಅಂಶಗಳು ಇರುವ ಇದೊಂದು ಪಕ್ಕಾ ಫ್ಯಾಮಿಲಿ ಚಿತ್ರವಾಗಲಿದೆ.

ರಶ್ಮಿಕಾ ಮಂದಣ್ಣ, ತಾನ್ಯ ಹೂಪೆ, ಧನಂಜಯ್, ಟಾಕೂರ್ ಅನೂಪ್ ಸಿಂಗ್ ಹಾಗೂ ರವಿಶಂಕರ್ ಟ್ರೇಲರ್ ನಲ್ಲಿ ಗಮನ ಸೆಳೆಯುತ್ತಾರೆ.ಟ್ರೇಲರ್ ನಲ್ಲಿ ಸಿನಿಮಾದ ಬಿಡುಗಡೆಯ ದಿನಾಂಕ ಕೂಡ ಅನೌನ್ಸ್ ಆಗಿದೆ. ಸಿನಿಮಾ ಮಾರ್ಚ್ 1 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ.
'ಯಜಮಾನ' ಹರಿಕೃಷ್ಣ ಹಾಗೂ ಪಿ ಕುಮಾರ್ ನಿರ್ದೇಶಕದ ಚಿತ್ರವಾಗಿದೆ. ಶೈಲಜಾ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹರಿಕೃಷ್ಣ ಹಾಗೂ ದರ್ಶನ್ ಕಾಂಬಿನೇಶನ್ ನ 25ನೇ ಸಿನಿಮಾವಾಗಿದೆ.
English summary
Challenging Star Darshan 'Yajamana' kannada movie trailer out.


Click it and Unblock the Notifications