ಪರೀಕ್ಷೆ, ಚುನಾವಣೆ ಬಿಸಿಯಲ್ಲೂ 25 ದಿನ ಪೂರೈಸಿದ ಯಜಮಾನ
Recommended Video

ಒಂದು ಕಡೆ ಎಸ್.ಎಸ್.ಎಲ್.ಸಿ ಪರೀಕ್ಷೆ, ಇನ್ನೊಂದು ಕಡೆ ಲೋಕಸಭೆ ಚುನಾವಣೆ. ಇವೆರಡರ ನಡುವೆಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಯಶಸ್ವಿ 25 ಪೂರೈಸಿದೆ.
ಮಾರ್ಚ್ 1 ರಂದು ವರ್ಲ್ಡ್ ವೈಡ್ ತೆರೆಕಂಡಿದ್ದ ಯಜಮಾನ ರಿಲೀಸ್ ಆಗಿತ್ತು. ಬಹುದಿನಗಳ ಬಳಿಕ ದರ್ಶನ್ ಸಿನಿಮಾ ದೊಡ್ಡ ಮಟ್ಟದ ಗೆಲವು ಕಂಡಿದ್ದು, ಸಹಜವಾಗಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಸುಮಾರು 175ಕ್ಕೂ ಅಧಿಕ ಸೆಂಟರ್ ಗಳಲ್ಲಿ 25 ದಿನ ಪ್ರದರ್ಶನ ಕಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಔಟ್ ಅಂಡ್ ಔಟ್ ಫ್ಯಾಮಿಲಿ ಕಥೆ ಹೊಂದಿದ್ದ ಯಜಮಾನನಿಗೆ ಕನ್ನಡ ಕಲಾರಸಿಕರ ಫಿದಾ ಆಗಿದ್ದರು. ಹರಿಕೃಷ್ಣ ಮತ್ತು ಪೊನ್ನು ಕುಮಾರ್ ನಿರ್ದೇಶನ ಹಾಗೂ ಶೈಲಜಾ ನಾಗ್ ಅವರ ನಿರ್ಮಾಣದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ರಶ್ಮಿಕಾ, ತಾನ್ಯ ಹೋಪ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಧನಂಜಯ್, ಸಾಧು ಕೋಕಿಲಾ ಸೇರಿದಂತೆ ಹಲವರು ಅಭಿನಯಿಸಿದ್ದರು.

ಒಂದು ಕಡೆ ಯಜಮಾನ ಅಮೋಘ ಪ್ರದರ್ಶನವಾಗುತ್ತಿದ್ದರೇ, ಮತ್ತೊಂದೆಡೆ ನಟ ದರ್ಶನ್, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ಮಾಡ್ತಿದ್ದಾರೆ.
ಕಳೆದ ಒಂದು ವಾರದಿಂದ ಸಂಪೂರ್ಣವಾಗಿ ಮಂಡ್ಯದಲ್ಲಿ ರಾಜಕಾರಣದಲ್ಲಿ ದರ್ಶನ್ ಹೆಸರು ಸದ್ದು ಮಾಡ್ತಿದ್ದು, ಯಜಮಾನ ಸಿನಿಮಾವನ್ನ ಅದೇಷ್ಟೋ ಅಭಿಮಾನಿಗಳು ಮರೆತೆ ಹೋಗಿದ್ದರು. ಹಾಗಿದ್ದರೂ ಯಜಮಾನ ಸಿನಿಮಾ ತನ್ನ ಗೆಲವಿನ ನಾಗಲೋಟ ಮುಂದುವರಿಸಿದೆ.


Click it and Unblock the Notifications











