For Quick Alerts
  ALLOW NOTIFICATIONS  
  For Daily Alerts

  ಯಜಮಾನ ಚಿತ್ರದಲ್ಲಿ ಇಬ್ಬರು ನಿರ್ದೇಶಕರಲ್ಲ: ಹತ್ತು ಜನ ನಿರ್ದೇಶಕರಿದ್ದಾರೆ.!

  |
  Yajamana Movie: ಯಜಮಾನ ಸಿನೆಮಾದಲ್ಲಿದ್ದಾರೆ ಹತ್ತು ನಿರ್ದೇಶಕರು

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾಗೆ ಇಬ್ಬರು ನಿರ್ದೇಶಕರು. ಆರಂಭದಲ್ಲಿ ಪಿ ಕುಮಾರ್ ಡೈರೆಕ್ಟರ್ ಆಗಿದ್ದರು. ನಂತರ ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಕೂಡ ನಿರ್ದೇಶನದಲ್ಲಿ ಹೆಚ್ಚು ಜವಾಬ್ದಾರಿ ವಹಿಸಿಕೊಂಡ ಕಾರಣ ಇಬ್ಬರು ನಿರ್ದೇಶಕರೆಂದು ಘೋಷಿಸಿದ್ದರು.

  ವಿಶೇಷ ಅಂದ್ರೆ, ಯಜಮಾನ ಚಿತ್ರಕ್ಕೆ ಕೇವಕ ಇಬ್ಬರು ನಿರ್ದೇಶಕರು ಮಾತ್ರ ಕೆಲಸ ಮಾಡಿಲ್ಲ. ಸುಮಾರು ಹತ್ತು ಜನ ನಿರ್ದೇಶಕರ ಶ್ರಮ ಇದೆ. ಈ ಎಲ್ಲ ನಿರ್ದೇಶಕರು ಕೂಡ ಯಜಮಾನ ಚಿತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

  ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣ

  ಹೌದು, ಯಜಮಾನ ಚಿತ್ರದ ನಿರ್ಮಾಪಕ ಶೈಲಾಜ್ ನಾಗ್ ಮತ್ತು ಬಿ ಸುರೇಶ್ ದಂಪತಿ. ಬಿ ಸುರೇಶ್ ಮೂಲತಃ ನಿರ್ದೇಶಕರು. ಡೈರೆಕ್ಟರ್ ಸುರೇಶ್ ಈ ಚಿತ್ರದಲ್ಲಿ ನಿರ್ಮಾಪಕರಾಗಿ ಕೆಲಸ ಮಾಡ್ತಿದ್ದಾರೆ. ಬಟ್, ಯುವ ನಿರ್ದೇಶಕರಿಗೆ ಮಾರ್ಗದರ್ಶನವಾಗಿಯೂ ಇರ್ತಾರೆ.

  ಯಜಮಾನ ಚಿತ್ರದ ಮೊದಲ ಹಾಡು 'ಶಿವನಂದಿ' ಬರೆದಿದ್ದು ನಿರ್ದೇಶಕ ಚೇತನ್ ಕುಮಾರ್, ಎರಡನೇ ಹಾಡು 'ಓ ಮುಂಜಾನೆ' ಬರೆದಿದ್ದು ನಿರ್ದೇಶಕ ಕಮ್ ಸಾಹಿತಿ ಕವಿರಾಜ್, ಮೂರನೇ ಹಾಡು 'ಬಸಣ್ಣಿ' ಬರೆದಿದ್ದು ನಿರ್ದೇಶಕ ಯೋಗರಾಜ್ ಭಟ್, ನಂತರ ನಾಲ್ಕನೇ ಹಾಡು ಯಜಮಾನ ಟೈಟಲ್ ಹಾಡು ಬರೆದಿದ್ದು ನಿರ್ದೇಶಕ ಸಂತೋಷ್ ಆನಂದ್ ರಾಮ್.

  ದರ್ಶನ್ 50ನೇ ಚಿತ್ರದ ಬಗ್ಗೆ ನಿಲ್ಲದ ಚರ್ಚೆ: ಗೊಂದಲವೇ ಹೆಚ್ಚು.!

  ಹೀಗೆ, ಯಜಮಾನ ಚಿತ್ರದ ಎಲ್ಲ ಹಾಡುಗಳನ್ನ ನಿರ್ದೇಶಕರೇ ಬರೆದಿದ್ದಾರೆ. ಹಾಗಾಗಿ, ಯಜಮಾನನಿಗೆ ಯುವ ನಿರ್ದೇಶಕರ ಬಲವೂ ಸೇರಿದೆ. ಇನ್ನು ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಸಾಧುಕೋಕಿಲಾ ಕೂಡ ಓರ್ವ ನಿರ್ದೇಶಕರು. ಖಳನಟ ರವಿಶಂಕರ್ ಕೂಡ ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ.

  ಇವರನ್ನೆಲ್ಲ ಬಿಟ್ಟು ನೃತ್ಯ ನಿರ್ದೇಶಕ, ಸಾಹಸ ನಿರ್ದೇಶಕರು ಕೂಡ ಯಜಮಾನ ಜೊತೆ ಇದ್ದಾರೆ. ಹಾಗ್ನೋಡಿದ್ರೆ, ದರ್ಶನ್ ಸಿನಿಮಾಗೆ ಹೆಚ್ಚು ನಿರ್ದೇಶಕರೇ ಕೆಲಸ ಮಾಡ್ತಿರೋದು ಇದೇ ಮೊದಲು ಅನಿಸುತ್ತೆ.

  English summary
  There is a ten directors worked in darshan's yajamana movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X