For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳ ಪ್ರೀತಿಯಿಂದ ನಂಬರ್ 1 ಸ್ಥಾನಕ್ಕೇರಿದ 'ಯಜಮಾನ'

  |

  'ಯಜಮಾನ' ಸಿನಿಮಾದ ಪ್ರತಿ ಹಾಡುಗಳು ಕೂಡ ಹಿಟ್ ಆಗಿದೆ. ನಿನ್ನೆ ಬಿಡುಗಡೆಯಾದ ನಾಲ್ಕನೇ ಹಾಡು ಕೂಡ ದೊಡ್ಡ ಜನಪ್ರಿಯತೆ ಪಡೆದಿದೆ. ದರ್ಶನ್ ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಈ ಹಾಡು ಪಡೆದುಕೊಂಡಿದೆ.

  'ನಿಂತ ನೋಡು ಯಜಮಾನ..' ಹಾಡಿನ ಪೂರ್ಣ ಸಾಹಿತ್ಯ

  'ನಿಂತ ನೋಡು ಯಜಮಾನ..' ಹಾಡು ಈಗ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ನಲ್ಲಿದೆ. ನಿನ್ನೆ ರಾತ್ರಿಯಿಂದ ಹಾಡು ಮೊದಲ ಸ್ಥಾನದಿಂದ ಅಲ್ಲಾಡಿಲ್ಲ. ಜೊತೆಗೆ ಹಾಡು ಒಂದು ಮಿಲಿಯನ್ ಹಿಟ್ಸ್ ಪಡೆದು ಮುನ್ನುಗುತ್ತಿದೆ.

  6 ನಿಮಿಷದಲ್ಲಿ ಹಳೆ ದಾಖಲೆ ಉಡೀಸ್ ಮಾಡಿದ ಯಜಮಾನ ಟೈಟಲ್ ಹಾಡು.!

  ಒಂದು ಲಕ್ಷಕ್ಕೂ ಅಧಿಕ ಮೆಚ್ಚುಗೆ ಹಾಡಿಗೆ ಸಿಕ್ಕಿದೆ. ಸಾಕಷ್ಟು ಜನ ಕಮೆಂಟ್ಸ್ ಗಳ ಮೂಲಕ ಹಾಡಿನಲ್ಲಿ ತಮಗೆ ಏನು ಇಷ್ಟ ಆಯ್ತು ಎಂಬುದನ್ನು ತಿಳಿಸಿದ್ದಾರೆ. ಹಾಡಿನ ಸಾಹಿತ್ಯ, ಸಂಗೀತ ಹಾಗೂ ಧ್ವನಿ ತುಂಬ ಚೆನ್ನಾಗಿದೆ.

  ಹರಿಕೃಷ್ಣ ಸಂಗೀತ, ವಿಜಯ ಪ್ರಕಾಶ್ ಗಾಯನ ಹಾಗೂ ಸಂತೋಷ್ ಆನಂದ್ ರಾಮ್ ಸಾಹಿತ್ಯ ಹಾಡಿನಲ್ಲಿದೆ. ಸರಳ ಸುಂದರ ಪದಗಳ ಮೂಲಕ 'ಯಜಮಾನ'ನನ್ನು ವರ್ಣಿಸಿರುವ ರೀತಿ ತುಂಬ ಚೆನ್ನಾಗಿದೆ.

  ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೂಪೆ ಸಿನಿಮಾದಲ್ಲಿ ನಟಿಸಿದ್ದಾರೆ. ಹರಿಕೃಷ್ಣ ಹಾಗೂ ಪಿ ಕುಮಾರ್ ನಿರ್ದೇಶನದ ಸಿನಿಮಾ ಇದಾಗಿದೆ. ಶೈಲಜಾ ನಾಗ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

  English summary
  Kannada actor Darshan's 'Yajamana' movie 'Nintha Nodu Yajamana..' song trending number 1 on youtube. The movie is producing by Shailaja Nag. P.Kumar and V Harikrishana directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X