twitter
    For Quick Alerts
    ALLOW NOTIFICATIONS  
    For Daily Alerts

    ಆ ಚಿತ್ರ ಚೆನ್ನಾಗಿತ್ತು ಹಾಗಾಗಿಯೇ ಓಟಿಟಿಗೆ ಬಂದಮೇಲೂ ಥಿಯೇಟರ್‌ನಲ್ಲಿ 20 ವಾರ ಓಡಿತು: ದರ್ಶನ್

    |

    ಕ್ರಾಂತಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರತರಾಗಿದ್ದಾರೆ. ಮೊದಲಿಗೆ ಯುಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುವ ಮೂಲಕ ಪ್ರಚಾರ ಕೆಲಸಗಳನ್ನು ಆರಂಭಿಸಿದ ನಟ ದರ್ಶನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದರು. ಇನ್ನು ಚಿತ್ರತಂಡ ಚಿತ್ರದ ಒಂದೊಂದು ಹಾಡನ್ನು ಒಂದೊಂದು ಊರಿನಲ್ಲಿ ಬಿಡುಗಡೆ ಮಾಡುವ ಮೂಲಕ ಹೈಪ್ ಹೆಚ್ಚಿಸಲು ಮುಂದಾಗಿದೆ.

    ಯೋಜನೆಯಂತೆ ಚಿತ್ರದ ಮೊದಲ ಹಾಡು ಧರಣಿಯನ್ನು ಮೈಸೂರಿನಲ್ಲಿ ಬಿಡುಗಡೆಗೊಳಿಸಿದ್ದ್ ಕ್ರಾಂತಿ ಚಿತ್ರತಂಡ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಹಾಡು ಬಿಡುಗಡೆ ಕಾರ್ಯಕ್ರಮಗಳು ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆದರೆ, ಹೊಸಪೇಟೆಯಲ್ಲಿ ವಿವಾದಕ್ಕೆ ಕಾರಣವಾಯಿತು. ಹೌದು, ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಕಿಡಿಗೇಡಿಯೋರ್ವ ಚಪ್ಪಲಿ ಎಸೆದಿದ್ದ.

    ಹೀಗೆ ದೊಡ್ಡ ವಿವಾದದ ಬಳಿಕ ಕ್ರಾಂತಿ ಚಿತ್ರತಂಡ ತಮ್ಮ ಚಿತ್ರದ ಮೂರನೇ ಹಾಡು 'ಪುಷ್ಪವತಿ'ಯನ್ನು ಬಿಡುಗಡೆಗೊಳಿಸಲು ಹುಬ್ಬಳ್ಳಿಗೆ ಆಗಮಿಸಿತ್ತು. ಡಿಸೆಂಬರ್ 25ರ ಭಾನುವಾರದಂದು ನಡೆದ ಈ ಸಮಾರಂಭದಲ್ಲಿ ಬಹಳ ಅದ್ಧೂರಿಯಾಗಿ ಹಾಡನ್ನು ಬಿಡುಗಡೆಗೊಳಿಸಲಾಯಿತು. ಇನ್ನು ಈ ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟ ದರ್ಶನ್ ಪತ್ರಕರ್ತರ ಹಲವು ಪ್ರಶ್ನಗಳಿಗೆ ಉತ್ತರ ನೀಡಿದರು.

    ಪೈರಸಿ ಕಾಟದ ಬಗ್ಗೆ ದರ್ಶನ್ ಖಡಕ್ ಪ್ರತಿಕ್ರಿಯೆ

    ಪೈರಸಿ ಕಾಟದ ಬಗ್ಗೆ ದರ್ಶನ್ ಖಡಕ್ ಪ್ರತಿಕ್ರಿಯೆ

    ಈ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೋರ್ವರು ಚಿತ್ರಗಳನ್ನು ಪೈರಸಿ ಮಾಡಿ ಬಿಡುಗಡೆ ಮಾಡುತ್ತಾರೆ, ಅದರ ಬಗ್ಗೆ ಮುಂಜಾಗ್ರತೆ ಕ್ರಮ ಏನಾದರೂ ತೆಗೆದುಕೊಂಡಿದ್ದೀರ ಎಂದು ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ನಟ ದರ್ಶನ್ ಚಿತ್ರವೊಂದು ಚೆನ್ನಾಗಿದ್ದರೆ ಎಷ್ಟೇ ಪೈರಸಿ ಆದರೂ ಸಹ ಅದು ಗೆಲುವನ್ನು ಕಾಣಲಿದೆ, ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದರು ಹಾಗೂ ಇದಕ್ಕೆ ತಮ್ಮದೇ ಚಿತ್ರವೊಂದನ್ನು ಉದಾಹರಣೆಯನ್ನಾಗಿ ಸಹ ನೀಡಿದರು.

    ಓಟಿಟಿಗೆ ಬಂದಮೇಲೂ ನೂರು ದಿನ

    ಓಟಿಟಿಗೆ ಬಂದಮೇಲೂ ನೂರು ದಿನ

    ಹೀಗೆ ಪೈರಸಿ ಮಾಡುವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿರುವ ದರ್ಶನ್ ತಮ್ಮದೇ ಯಜಮಾನ ಚಿತ್ರವನ್ನು ಉದಾಹರಣೆಯನ್ನಾಗಿ ನೀಡಿದರು. ಯಜಮಾನ ಚಿತ್ರ ಅಮೆಜಾನ್ ಪ್ರೈಮ್‌ನಲ್ಲಿ 45 ದಿನಗಳ ಬಳಿಕ ಬಿಡುಗಡೆಯಾಗಿತ್ತು, ಆದರೂ ಸಹ ಆ ಚಿತ್ರ ಚಿತ್ರಮಂದಿರದಲ್ಲಿ ಶತದಿನೋತ್ಸವವನ್ನು ಪೂರೈಸಿತು ಎಂದು ದರ್ಶನ್ ಹೇಳಿದರು. ಅಷ್ಟೇ ಅಲ್ಲದೇ ಅದು ಎಚ್‌ಡಿ ಪ್ರಿಂಟ್‌ನ ಚಿತ್ರ, ಎಲ್ಲೋ ಕದ್ದು ಮುಚ್ಚಿ ಮಾಡಿದ್ದ ವಿಡಿಯೊ ಅಲ್ಲ, ಆದರೂ ಸಹ ಜನ ಚಿತ್ರದ ಕಂಟೆಂಟ್ ಚೆನ್ನಾಗಿದ್ದ ಕಾರಣ ಚಿತ್ರಮಂದಿರಕ್ಕೇ ಬಂದು ಚಿತ್ರವನ್ನು ನೋಡಿದ್ದರು ಎಂದರು.

    ಹೊಸಪೇಟೆ ವಿವಾದದ ಬಗ್ಗೆ ದರ್ಶನ್ ಮಾತು

    ಹೊಸಪೇಟೆ ವಿವಾದದ ಬಗ್ಗೆ ದರ್ಶನ್ ಮಾತು

    ಇನ್ನು ಹಾಡು ಬಿಡುಗಡೆಯಾದ ನಂತರ ಮಾತನಾಡಿದ ನಟ ದರ್ಶನ್ "ಯಾರು ಏನೇ ಮಾಡಲಿ. ಹಾಳು ಮಾಡೋಕೆ ಒಂದು ಜನ ಇದ್ರೂ, ಕಾಪಾಡುವುದಕ್ಕೆ ನಿಮ್ಮಂತಹ ಸಾವಿರಾರು ಜನ ಇದ್ದಾರೆ. ಇದರ ಮೇಲೆ ನೋಡಿಕೊಳ್ಳೋಣ. ನಿನ್ನೆ ಬಿದ್ದಿರೋದಕ್ಕೆ ಇವತ್ತು ಹೂವಿನಲ್ಲಿ ಮುಳುಗಿಸಿದ್ರಾ? ಇದಕ್ಕಿಂತ ಬೇಕಾ? ಇದಕ್ಕಿಂತ ಬೇಕೆನಪ್ಪಾ? ಅದ್ಯಾವುದು ನಾವು ತಲೆಗೂ ಹಾಕಿಕೊಳ್ಳೋದಿಲ್ಲ. ನೀವು ಏನೇ ಮಾಡಿದ್ರೂ ನಾವು ತಲೆಗೂ ಹಾಕಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ಹಿಂಗೆ (ಕಾಲರ್) ಅಂದ್ಕೊಂಡೇ ಓಡಾಡೋಣ. ಇನ್ನೂ ಒಂದು ಸ್ಟೆಪ್ ಮುಂದಕ್ಕೆ ಹೋಗಿ ಉರಿಸಬೇಕು ಅಂದ್ರೆ, ಇನ್ನೂ ಜಾಸ್ತಿ ಉರಿಸೋಣ. ನಾವು ಮಾತಾಡೋದು ಬೇಡ. ನಮ್ಮ ಕೆಲಸ ಮಾತಾಡಲಿ ಅಂತಾನೇ ನಾನು ಬಯಸೋದು" ಎಂದು ಹೇಳಿಕೆ ನೀಡಿದರು. ಸದ್ಯ ದರ್ಶನ್ ಅವರ ಈ ಹೇಳಿಕೆಗಳು ಸಾಕಷ್ಟು ಸದ್ದನ್ನು ಮಾಡುತ್ತಿವೆ.

    English summary
    Yajamana movie ran for 100 days even after ott release says Darshan. Read on
    Monday, December 26, 2022, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X