ಬರೆದಿಟ್ಟುಕೊಳ್ಳಿ, ದರ್ಶನ್ 50ನೇ ಚಿತ್ರ ಪಕ್ಕಾ ಆಯ್ತು

Recommended Video

Yajamana Movie : ದರ್ಶನ್ ರ 50ನೇ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಯ್ತು | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಯಾವುದು ಎಂಬ ಗೊಂದಲಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಯಜಮಾನ ಮತ್ತು ಕುರುಕ್ಷೇತ್ರ ಚಿತ್ರಗಳ ನಡುವಿನ ಕನ್ ಫ್ಯೂಶನ್ ಗೆ ಉತ್ತರ ಸಿಕ್ಕಿದೆ.

ಡಿ ಬಾಸ್ ದರ್ಶನ್ 50ನೇ ಸಿನಿಮಾ ವಿಶೇಷವಾಗಿರಬೇಕು. ಈ ಚಿತ್ರ ಮೈಲಿಗಲ್ಲಾಗಬೇಕು ಎಂಬ ಕಾರಣಕ್ಕೆ ಮೊದಲೇ ನಿರ್ಧರಿಸಿದ್ದ ಚಿತ್ರಗಲನ್ನ ಪಕ್ಕಕ್ಕಿಟ್ಟು ಕುರುಕ್ಷೇತ್ರಕ್ಕೆ ಚಾಲನೆ ನೀಡಿದ್ದರು ದರ್ಶನ್. ನಿರೀಕ್ಷೆಯಂತೆ ಈ ಸಿನಿಮಾನೇ 50ನೇಯದ್ದು ಆಗಲಿದೆ ಎಂಬ ಲೆಕ್ಕಾಚಾರ ನಡೆದಿತ್ತು.

ಆದ್ರೆ, ಕುರುಕ್ಷೇತ್ರ ಸಿನಿಮಾದ ಪ್ಲಾನಿಂಗ್ ಸ್ವಲ್ಪ ಬದಲಾಯ್ತು. ಅದರ ಪರಿಣಾಮ ಯಜಮಾನ ಚಿತ್ರ ಶೂಟಿಂಗ್ ಮುಗಿಸಿ ರಿಲೀಸ್ ಗೆ ರೆಡಿಯಾಗೋಯ್ತು. ಹಾಗಿದ್ದರೂ ಎಲ್ಲೋ ಒಂದು ಕಡೆ ಕುರುಕ್ಷೇತ್ರವೇ ಮೊದಲು ಬರಬಹುದು ಎಂಬ ಆಸೆ ಅನೇಕರಲ್ಲಿತ್ತು. ಕೊನೆಗೂ ಭಾಗ್ಯ ಇನ್ನಷ್ಟು ದೂರವಾಗಿ ಉಳಿದಿದೆ. ಮುಂದೆ ಓದಿ....

ಶಿವರಾತ್ರಿಗೆ ಯಜಮಾನ

ಶಿವರಾತ್ರಿಗೆ ಯಜಮಾನ

ದರ್ಶನ್ ಅವರ 50ನೇ ಸಿನಿಮಾ ಯಾವುದು ಎಂಬ ಲೆಕ್ಕಾಚಾರದ ನಡೆವೆಯೇ ಯಜಮಾನ ಸಿನಿಮಾ ಬಿಡುಗಡೆ ದಿನಾಂಕವನ್ನ ಘೋಷಿಸಿದೆ. ಫೆಬ್ರವರಿ 10 ರಂದು ಟ್ರೈಲರ್ ರಿಲೀಸ್ ಮಾಡಿದ್ದ ಯಜಮಾನ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನ ಪ್ರಕಟಿಸಿದೆ. ಹೌದು, ಮಾರ್ಚ್ 1 ರಂದು ಯಜಮಾನ ತೆರೆಗೆ ಬರ್ತಿದ್ದಾನೆ

ಏಪ್ರಿಲ್ ಮೊದಲನೇ ವಾರ

ಏಪ್ರಿಲ್ ಮೊದಲನೇ ವಾರ

ಶಿವರಾತ್ರಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಶಿವನಂದಿ ಉಡುಗೊರೆಯಾಗಲಿದ್ದಾನೆ. ಯುಗಾದಿ ಹಬ್ಬಕ್ಕೆ ಕುರುಕ್ಷೇತ್ರವನ್ನ ತರಲು ನಿರ್ಮಾಪಕ ಮುನಿರತ್ನ ನಿರ್ಧರಿಸಿದ್ದಾರೆ. ಈಗಾಗಲೇ ಮುನಿರತ್ನ ಹೇಳಿರುವ ಪ್ರಕಾರ ಕುರುಕ್ಷೇತ್ರ ಏಪ್ರಿಲ್ 5 ರಂದು ಚಿತ್ರಮಂದಿರಕ್ಕೆ ಆಗಮನವಾಗಲಿದೆ. ಅದು ಯುಗಾದಿ ಹಬ್ಬದ ಸಂಭ್ರಮವನ್ನ ಮತ್ತಷ್ಟು ಹೆಚ್ಚಿಸಲಿದೆ.

ಕುರುಕ್ಷೇತ್ರ ಮುಂದಕ್ಕೆ ಹೋಗಬಹುದು.!

ಕುರುಕ್ಷೇತ್ರ ಮುಂದಕ್ಕೆ ಹೋಗಬಹುದು.!

ಎಲ್ಲ ಅಂದುಕೊಂಡಂತೆ ಆಗಿದ್ದರೇ ಕುರುಕ್ಷೇತ್ರ ಸಿನಿಮಾ ಇಷ್ಟೋತ್ತಿಗಾಗಲೇ ಬರಬೇಕಿತ್ತು. ಬಹುಭಾಷೆಯಲ್ಲಿ ರಿಲೀಸ್, ಡಬ್ಬಿಂಗ್, 3ಡಿ ಹೀಗೆ ಪೋಸ್ಟ್ ಪ್ರೊಡಕ್ಷನ್ ಕೆಲಸದಿಂದ ಬಿಡುಗಡೆ ವಿಳಂಬವಾಗಿದೆ. ಬಹುಶಃ, ಏಪ್ರಿಲ್ 5ಕ್ಕೆ ಬರಬೇಕು ಎನ್ನುವುದು ನಿರ್ಮಾಪಕರ ಆಸೆಯಾಗಿದೆ. ಆದ್ರೆ, ನಿರೀಕ್ಷೆಯಂತೆ ಔಟ್ ಪುಟ್ ಬಂದಿಲ್ಲ ಅಂದ್ರೆ ಮತ್ತಷ್ಟು ದಿನ ಮುಂದಕ್ಕೆ ಹೋಗುವುದಕ್ಕೆ ನಿರ್ಮಾಪಕರು ಹಿಂದೇಟು ಹಾಕುವುದಿಲ್ಲ. ಹಾಗಾಗಿ, ಅಧಿಕೃತವಾಗಿ ಹೇಳುವವರೆಗೂ ಕುರುಕ್ಷೇತ್ರ ದಿನಾಂಕ ಪಕ್ಕಾ ಅಲ್ಲ.

ಯಜಮಾನ 50ನೇ ಸಿನಿಮಾ ಒಳ್ಳೆಯದು

ಯಜಮಾನ 50ನೇ ಸಿನಿಮಾ ಒಳ್ಳೆಯದು

ಹಾಗ್ನೋಡಿದ್ರೆ, ಕುರುಕ್ಷೇತ್ರ ವಿಳಂಬದಿಂದ ದರ್ಶನ್ 50ನೇ ಚಿತ್ರ ಎಂಬ ಹೆಗ್ಗಳಿಕೆ ಯಜಮಾನ ಪಾತ್ರವಾಗಲಿದೆ. ಸದ್ಯ ಹಾಡುಗಳು, ಟ್ರೈಲರ್ ಮೂಲಕ ಅತಿಯಾದ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ದರ್ಶನ್ ವೃತ್ತಿ ಜೀವನದಲ್ಲಿ ಮತ್ತೆ ಗೆಲುಗು ತಂದುಕೊಡಲಿದೆ ಎಂಬ ಮಾತಿದೆ.

More from Filmibeat

English summary
Challenging star darshan starrer Yajamana movie release date announced. Now it's official, yajamana is the 50th movie of D boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X