'ಯಜಮಾನ' ಸಿನಿಮಾವನ್ನು ಯಾರಾದ್ರೂ ಪೈರಸಿ ಮಾಡಿದ್ರೆ ಹೀಗೆ ಮಾಡಿ
ದೊಡ್ಡ ಸ್ಟಾರ್ ಸಿನಿಮಾಗಳಿಗೆ ಶನಿಯಂತೆ ಕಾಡುವುದು ಪೈರಸಿ. ಯಾವ ಭಾಷೆಯ ಸಿನಿಮಾವಾದರೂ ಸರಿಯೇ ಅದಕ್ಕೆ ಪೈರಸಿ ಕಾಟ ತಪ್ಪಿದ್ದಲ್ಲ. ಅದೇ ಕಾರಣಕ್ಕೆ ಪೈರಸಿ ವಿರುದ್ಧ ಅನೇಕ ಕ್ರಮಗಳನ್ನು ಚಿತ್ರತಂಡಗಳು ತೆಗೆದುಕೊಳ್ಳುತ್ತಿರುತ್ತವೆ.
ಇದೀಗ 'ಯಜಮಾನ' ಚಿತ್ರತಂಡ ಕೂಡ ಪೈರಸಿ ವಿರುದ್ಧ ಫೈಟ್ ಮಾಡಲು ರೆಡಿಯಾಗಿದೆ. 'ಯಜಮಾನ' ಸಿನಿಮಾದ ಪೈರಸಿಯನ್ನು ತಡೆಯಲು ಚಿತ್ರತಂಡ ಅಭಿಮಾನಿಗಳ ಸಹಕಾರವನ್ನು ಬಯಸಿದೆ.
'ಯಜಮಾನ' ಸಿನಿಮಾದ ಫೇಸ್ ಬುಕ್ ಲೈವ್, ವಿಡಿಯೋ ಹೀಗೆ ಯಾವುದಾದರು ಚಟುವಟಿಕೆ ಕಂಡು ಬಂದರೆ ಕೂಡಲೇ 9384601685 ನಂಬರ್ ಗೆ ತಿಳಿಸಿ ಅಥವಾ [email protected] ಗೆ ತಿಳಿಸಬಹುದಾಗಿದೆ.

ಸಾಮಾನ್ಯವಾಗಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಬೇಕಾದರೆ, ಅದರ ವಿಡಿಯೋಗಳನ್ನು ಶೂಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಹರಿದುಬಿಡುತ್ತಾರೆ. ಇದನ್ನು ತಡೆಯಲು 'ಯಜಮಾನ' ತಂಡ ಈ ಪ್ರಯತ್ನಕ್ಕೆ ಕೈ ಹಾಕಿದೆ.
'ಯಜಮಾನ' ಸಿನಿಮಾ ನಾಳೆ ದೇಶಾದ್ಯಂತ 600ಕ್ಕೆ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುತ್ತಿದೆ.
English summary
Kannada actor Darshan and Rashmika Mandanna's 'Yajamana' movie team has taken precautionary measures about piracy. The movie will be releasing tomorrow (March 1st).


Click it and Unblock the Notifications