2019ರ ಅತ್ಯುತ್ತಮ ಚಿತ್ರ 'ಯಜಮಾನ': ದರ್ಶನ್ ಚಿತ್ರಕ್ಕೆ ಸಿಕ್ಕ ಮತವೆಷ್ಟು?

ಫಿಲ್ಮಿಬೀಟ್ ಕನ್ನಡ ಆಯೋಜನೆ ಮಾಡಿದ್ದ ಬೆಸ್ಟ್ ಆಫ್ ಸ್ಯಾಂಡಲ್ ವುಡ್ 2019 ಪೋಲ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅತ್ಯುಮ ನಟ ಪುನೀತ್ ರಾಜ್ ಕುಮಾರ್ ಮತ್ತು ಅತ್ಯುತ್ತಮ ನಟಿ ರಚಿತಾ ರಾಮ್ ಆಯ್ಕೆಯಾಗಿದ್ದಾರೆ.

ಇನ್ನು ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಭಾರಿ ಪೈಪೋಟಿ ಇತ್ತು. ಈ ಕಾಂಪಿಟೇಶನ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾ ಗೆದ್ದಿದೆ. ಅಷ್ಟಕ್ಕೂ, ಯಜಮಾನ ಚಿತ್ರಕ್ಕೆ ಸಿಕ್ಕ ವೋಟ್ ಎಷ್ಟು? ಯಾವ ಚಿತ್ರವನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿದೆ? ಮುಂದೆ ಓದಿ...

ಭಾರಿ ಪೈಪೋಟಿಯಲ್ಲಿ ಗೆದ್ದ ಯಜಮಾನ

ಭಾರಿ ಪೈಪೋಟಿಯಲ್ಲಿ ಗೆದ್ದ ಯಜಮಾನ

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಕಳೆದ ವರ್ಷದ ದಿ ಬೆಸ್ಟ್ ಚಿತ್ರಗಳು ಸ್ಪರ್ಧೆ ಮಾಡಿದ್ದವು. ಇದರಲ್ಲಿ ದರ್ಶನ್ ಅವರ ಯಜಮಾನ ಸಿನಿಮಾ 27559 ಮತ ಪಡೆದು ಜಯಶಾಲಿ ಆಗಿದೆ. ಶತದಿನ ಆಚರಿಸಿದ್ದ ಯಜಮಾನ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಗೆದ್ದು ಬೀಗಿತ್ತು. ಅದೇ ಚಿತ್ರವನ್ನು ಫಿಲ್ಮಿಬೀಟ್ ಓದುಗರು ಆಯ್ಕೆ ಮಾಡಿದ್ದಾರೆ.

185 ಮತಗಳ ಅಂತರದಲ್ಲಿ ಗೆಲುವು

185 ಮತಗಳ ಅಂತರದಲ್ಲಿ ಗೆಲುವು

ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಒಟ್ಟು ವೋಟಿಂಗ್ ಆಗಿರುವುದು 88228. ಇದರಲ್ಲಿ ಯಜಮಾನ ಚಿತ್ರಕ್ಕೆ 27559 ಮತ ಸಿಕ್ಕಿದೆ. ಪುನೀತ್ ಅಭಿನಯಿಸಿರುವ ನಟಸಾರ್ವಭೌಮ ಹಾಗೂ ಯಜಮಾನ ಸಿನಿಮಾದ ನಡುವೆ ತೀವ್ರ ಸೆಣಸಾಟ ಕಂಡು ಬಂದಿತ್ತು. ಅಂತಿಮವಾಗಿ ಯಜಮಾನ ಸಿನಿಮಾ 185 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

ಎರಡನೇ ಸ್ಥಾನಕ್ಕೆ ನಟಸಾರ್ವಭೌಮ

ಎರಡನೇ ಸ್ಥಾನಕ್ಕೆ ನಟಸಾರ್ವಭೌಮ

ಮೊದಲ ಸ್ಥಾನದಲ್ಲಿ ಯಜಮಾನ ಇದ್ದರೆ, ಎರಡನೇ ಸ್ಥಾನದಲ್ಲಿ ನಟಸಾರ್ವಭೌಮ ಸಿನಿಮಾ ನಿಂತಿದೆ. ನಟಸಾರ್ವಭೌಮ ಚಿತ್ರಕ್ಕೆ ಒಟ್ಟು 27374 ಮತಗಳು ಸಿಕ್ಕಿತ್ತು. ಪವನ್ ಒಡೆಯರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

ಉಳಿದಂತೆ ಯಾವ ಸಿನಿಮಾ ಸ್ಪರ್ಧೆಯಲ್ಲಿತ್ತು

ಉಳಿದಂತೆ ಯಾವ ಸಿನಿಮಾ ಸ್ಪರ್ಧೆಯಲ್ಲಿತ್ತು

ಯಜಮಾನ, ನಟಸಾರ್ವಭೌಮ ಸಿನಿಮಾಗಳನ್ನು ಬಿಟ್ಟು ಪೈಲ್ವಾನ್, ಕುರುಕ್ಷೇತ್ರ, ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ, ಭರಾಟೆ, ಗೀತಾ, ಕವಚ, ಆಯುಷ್ಮಾನ್ ಭವ ಚಿತ್ರಗಳು ರೇಸ್ ನಲ್ಲಿದ್ದರು.

More from Filmibeat

English summary
Filmibeat poll final result announced. Challenging star darshan starrer Yajamana movie wins best movie 2019 title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X