For Quick Alerts
  ALLOW NOTIFICATIONS  
  For Daily Alerts

  ಹಿಂದಿ ಚಾನಲ್ ನಲ್ಲಿ ದರ್ಶನ್ 'ಯಜಮಾನ'ನ ಅಬ್ಬರ

  |
  Yajamana Movie: ಹಿಂದಿಯಲ್ಲೂ ಕೂಡ ಯಜಮಾನನ ಅಬ್ಬರ

  ಕನ್ನಡ ಟಿವಿ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಹಾಗೂ ಆನ್ ಲೈನ್ ಮೀಡಿಯಾಗಳಲ್ಲಿ ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಚಿತ್ರಗಳ ಬಗ್ಗೆಯೂ ಸುದ್ದಿ ಮಾಡಲಾಗುತ್ತೆ. ಅದೇ ರೀತಿ ಕನ್ನಡ ಸಿನಿಮಾಗಳ ಬಗ್ಗೆ ಪರಭಾಷೆ ಮಾಧ್ಯಮದವರು ಸುದ್ದಿ ಮಾಡ್ತಾರಾ ಎಂಬ ಪ್ರಶ್ನೆಯನ್ನ ಕನ್ನಡಾಭಿಮಾನಿಗಳು ಕೇಳ್ತಾರೆ.

  ಈಗ ಕಾಲಾ ಬದಲಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಬೇರೆ ಭಾಷೆಯವರು ನೋಡುವಂತೆ ಆಗಿದೆ. ಕೆಜಿಎಫ್, ಯಜಮಾನ, ಪೈಲ್ವಾನ್ ಅಂತಹ ಚಿತ್ರಗಳ ಬಗ್ಗೆ ತೆಲುಗು, ತಮಿಳು ಪತ್ರಿಕೆಗಳು ವರದಿ ಮಾಡಿರುವ ಉದಾಹರಣೆ ಇದೆ.

  'ಯಾರದ್ದೂ ಕರೆಕ್ಟ್ ಪಿಕ್ಚರ್ ಸಿಗಲ್ಲ': ಕಲೆಕ್ಷನ್ ಬಗ್ಗೆ 'ಯಜಮಾನ' ನೇರ ಮಾತು

  ಇದೀಗ, ಹಿಂದಿ ಸುದ್ದಿವಾಹಿನಿಯೊಂದರಲ್ಲಿ ಯಜಮಾನ ಚಿತ್ರದ ಬಗ್ಗೆ ಸುದ್ದಿ ಬಿತ್ತರಿಸಿದ್ದಾರೆ. ಮಾರ್ಚ್ 1 ರಂದು ಸಿನಿಮಾ ಬಿಡುಗಡೆಯಾದಾಗ, ಯಜಮಾನ ಚಿತ್ರದ ಕ್ರೇಜ್ ನೋಡಿ ಸುದ್ದಿ ಮಾಡಿದ್ದಾರೆ. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಷ್ಟೇ ಅಲ್ಲದೇ, ಯಜಮಾನ ಚಿತ್ರ ಮುಂಬೈ, ತಮಿಳು ನಾಡು, ಆಂಧ್ರಪ್ರದೇಶಗಳಲ್ಲೂ ತೆರೆಕಂಡಿದ್ದು, ಅಲ್ಲಿನ ಪ್ರೇಕ್ಷಕರು ನೋಡಿ ಖುಷಿಯಾಗಿದ್ದಾರೆ. ಈ ಬಗ್ಗೆ ತಮ್ಮದೇ ಅಭಿಪ್ರಾಯಗಳನ್ನ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡ್ತಿದ್ದಾರೆ.

  ಯಜಮಾನ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  ಇನ್ನುಳಿದಂತೆ ಹರಿಕೃಷ್ಣ, ಪಿ ಕುಮಾರ್ ನಿರ್ದೇಶನದ ಈ ಚಿತ್ರವನ್ನ ಬಿ ಸುರೇಶ್ ಮತ್ತು ಶೈಲಜಾ ನಾಗ್ ದಂಪತಿ ನಿರ್ಮಿಸಿದ್ದಾರೆ. ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ದೇವರಾಜ್, ಠಾಕೂರ್ ಅನೂಪ್ ಸಿಂಗ್, ಸಾಧುಕೋಕಿಲಾ, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

  English summary
  Hindi channel was telecast Challenging star darshan starrer yajamana movie news. this kannada movie directed by harikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X