ಕನ್ನಡದ ಯಾವ ಹಾಡು ಮಾಡದ ದಾಖಲೆ ಬರೆದ 'ಯಜಮಾನ'

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ ಎರಡು ಹಾಡುಗಳು ಬಿಡುಗಡೆಯಾಗಿದೆ. 'ಶಿವನಂದಿ' ಮತ್ತು 'ಒಂದು ಮುಂಜಾನೆ' ಹಾಡುಗಳು ಸೂಪರ್ ಹಿಟ್ ಆಗಿದ್ದು, ಯೂಟ್ಯೂಬ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆದಿದೆ.

ಅತಿ ವೇಗವಾಗಿ ಒಂದು ಲಕ್ಷ, ಎರಡು ಲಕ್ಷ, ಮೂರು ಲಕ್ಷ, ನಾಲ್ಕು ಲಕ್ಷ ಹೀಗೆ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡು ಎಂಬ ಹೆಗ್ಗಳಿಕೆಗೆ 'ಶಿವನಂದಿ' ಪಾತ್ರವಾಗಿದೆ.

ಸದ್ಯದ ಮಟ್ಟಿಗೆ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಕರನ್ನ ಹೊಂದಿರುವುದು 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾರ ಮುಖವಾ' ಹಾಡು. ಈ ಹಾಡು ಮಾಡಲಾಗದ ಒಂದು ವಿಶೇಷ ಸಾಧನೆಯಲ್ಲಿ 'ಯಜಮಾನ' ಚಿತ್ರದ 'ಶಿವನಂದಿ' ಹಾಡು ಮಾಡಿದೆ. ಏನದು? ಮುಂದೆ ಓದಿ.....

'ಕಿರಿಕ್ ಪಾರ್ಟಿ' ಹಾಡಿನ ವೀಕ್ಷಣೆ ಎಷ್ಟು?

'ಕಿರಿಕ್ ಪಾರ್ಟಿ' ಹಾಡಿನ ವೀಕ್ಷಣೆ ಎಷ್ಟು?

2016ರಲ್ಲಿ ಅಪ್ ಲೋಡ್ ಆಗಿರುವ 'ಕಿರಿಕ್ ಪಾರ್ಟಿ' ಚಿತ್ರದ 'ಬೆಳಗೆದ್ದು ಯಾವ ಮುಖವಾ ನಾನು ನೋಡಲಿ' ಹಾಡು ಇದುವರೆಗೂ ಅತಿ ಹೆಚ್ಚು ವೀಕ್ಷಣೆ ಪಡೆದು ಕನ್ನಡ ಚಿತ್ರರಂಗ ಮಟ್ಟಿಗೆ ಮೊದಲ ಸ್ಥಾನದಲ್ಲಿದೆ. 72 ಮಿಲಿಯನ್ (7 ಕೋಟಿ 20) ವೀವ್ಸ್ ಪಡೆದಿದೆ. 245k ಲೈಕ್ಸ್ ಹೊಂದಿದ್ದು, 24k ಡಿಸ್ ಲೈಕ್ಸ್ ಪಡೆದುಕೊಂಡಿದೆ.

'ಕಿರಿಕ್ ಪಾರ್ಟಿ' ದಾಖಲೆ ಮುರಿದ 'ಶಿವನಂದಿ'

'ಕಿರಿಕ್ ಪಾರ್ಟಿ' ದಾಖಲೆ ಮುರಿದ 'ಶಿವನಂದಿ'

ಅತಿ ಹೆಚ್ಚು ವೀಕ್ಷಣೆಯಲ್ಲಿ ಈ ಹಾಡಿನ ಸನಿಹವೂ ಬಾರದ ಶಿವನಂದಿ ಸಾಂಗ್, ಸರ್ಪ್ರೈಸ್ ಎಂಬಂತೆ ಲೈಕ್ಸ್ ನಲ್ಲಿ ಕಿರಿಕ್ ಪಾರ್ಟಿ ದಾಖಲೆ ಬ್ರೇಕ್ ಮಾಡಿದೆ. 'ಬೆಳಗೆದ್ದು' ಹಾಡು 245k ಲೈಕ್ಸ್ ಹೊಂದಿದ್ದು, 24k ಡಿಸ್ ಲೈಕ್ಸ್ ಪಡದಿದ್ರೆ, ಶಿವನಂದಿ ಹಾಡು 250k ಲೈಕ್ಸ್ ಪಡೆದು ಹೊಸ ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಕನ್ನಡ ಹಾಡೊಂದು 250k ಲೈಕ್ಸ್ ಹಾಗೂ 13k ಡಿಸ್ ಲೈಕ್ಸ್ ಪಡೆಯುವ ಮೂಲಕ ವಿಶಿಷ್ಠ ಸಾಧನೆ ಮಾಡಿದೆ.

ಬೊಂಬೆ ಹೇಳುತೈತೆ ಹಾಡು

ಬೊಂಬೆ ಹೇಳುತೈತೆ ಹಾಡು

ಇನ್ನು ಕನ್ನಡದ ಮತ್ತೊಂದು ಸೂಪರ್ ಹಿಟ್ ಹಾಡು 'ರಾಜಕುಮಾರ' ಚಿತ್ರದ ಬೊಂಬೆ ಹೇಳುತೈತೆ ಹಾಡು. ಬಹುಶಃ ಈ ಹಾಡಿನ ವೀಕ್ಷಕರ ಸಂಖ್ಯೆ ಮತ್ತು ಲೈಕ್ಸ್ ಹೆಚ್ಚಿರಬಹುದು ಎಂದು ನೋಡಿದಾಗ, 18 ಮಿಲಿಯನ್ ವೀವ್ಸ್ ಹೊಂದಿದ್ದು, 66k ಲೈಕ್ಸ್ ಹೊಂದಿದೆ.

ಕೆಜಿಎಫ್ ಹಾಡು, ಪೈಲ್ವಾನ್ ಟೀಸರ್

ಕೆಜಿಎಫ್ ಹಾಡು, ಪೈಲ್ವಾನ್ ಟೀಸರ್

ಇದೇ ಕುತೂಹಲದಲ್ಲಿ ಕೆಜಿಎಫ್ ಚಿತ್ರದ ಸಲಾಂ ರಾಕಿ ಭಾಯ್ ಹಾಡಿಗೆ ಎಷ್ಟು ಲೈಕ್ಸ್ ಬಂದಿರಬಹುದು ಎಂದು ನೋಡಿದಾಗ, 95k ಲೈಕ್ಸ್ ಇದೆ. ಪೈಲ್ವಾನ್ ಟೀಸರ್ ಗೆ 143 ಲೈಕ್ಸ್ ಇದೆ. ಟ್ರೈಲರ್, ಟೀಸರ್ ಗಳನ್ನ ಇಲ್ಲಿ ಪರಿಗಣಿಸಿಲ್ಲ. ಬರಿ ಹಾಡುಗಳನ್ನ ಮಾತ್ರ ಲೆಕ್ಕಾಚಾರ ಹಾಕಲಾಗಿದೆ.

More from Filmibeat

English summary
Darshan starrer yajamana movie shivanandi song beats kirik party belageddu yara mukava song record.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X