ಸ್ವೀಡನ್ ನಲ್ಲೂ 'ಯಜಮಾನ'ನಿಗೆ ಕಾಡಿದ ಕಿಡಿಗೇಡಿಗಳು.!
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಸಿನಿಮಾ ಸ್ವೀಡನ್ ನಲ್ಲಿ ಚಿತ್ರೀಕರಣ ಮಾಡುತ್ತಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನದಿಂದ ಶೂಟಿಂಗ್ ನಿಲ್ಲಿಸಿ, ಬೆಂಗಳೂರಿಗೆ ಬಂದಿದ್ದ ದರ್ಶನ್ ಅಂಬಿ ಅಪ್ಪಾಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಸುಮಲತಾ ಮತ್ತು ಅಭಿಷೇಕ್ ಜೊತೆ ನಿಂತು ನಾನಿದ್ದೀನಿ ಎಂದು ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಅತ್ತ ಯಜಮಾನನ ಆಗಮನಕ್ಕೆ ಸ್ವೀಡನ್ ನಲ್ಲಿ ಚಿತ್ರತಂಡ ಕಾಯುತ್ತಿದೆ. ಯಾಕಂದ್ರೆ, ಸ್ವೀಡನ್ ಗೆ ಹೋಗಿರುವುದು ಸಾಂಗ್ ಶೂಟಿಂಗ್ ಗಾಗಿ. ದರ್ಶನ್ ಇಲ್ಲದೇ ಶೂಟಿಂಗ್ ರದ್ದುಗೊಳಿಸಿದ್ದು, ಮತ್ತೆ ದರ್ಶನ್ ವಾಪಸ್ ಗಾಗಿ ಕಾಯುತ್ತಿದ್ದಾರೆ.
ಈ ಮಧ್ಯೆ 'ಯಜಮಾನ' ಚಿತ್ರಕ್ಕೆ ಕಿಡಿಗೇಡಿಗಳು ಕಾಡಿದ್ದಾರೆ. ಯಜಮಾನ ಚಿತ್ರದ ಹಾಡಿನ ತುಣುಕುಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ್ದಾರೆ. ಇದು ಸಹಜವಾಗಿ ಚಿತ್ರದ ನಿರ್ಮಾಪಕರಿಗೆ ಬೇಸರ ತರಿಸಿದೆ. ಯಾವ ದೃಶ್ಯ ಲೀಕ್ ಆಗಿದೆ? ಮುಂದೆ ಓದಿ.....

ದಚ್ಚು-ರಶ್ಮಿಕಾ ಡುಯೇಟ್ ಸಾಂಗ್ ಲೀಕ್
ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿರುವ ಕೆಲವು ದೃಶ್ಯಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಚಳಿ ಚಳಿಯ ಸ್ವೀಡನ್ ನಲ್ಲಿ ದರ್ಶನ್ ಮತ್ತು ರಶ್ಮಿಕಾ ರೋಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡುತ್ತಿರುವುದನ್ನ ಯಾರೋ ಲೀಕ್ ಮಾಡಿದ್ದಾರೆ.

ಬೆಂಗಳೂರಿನಲ್ಲೂ ಗಲಾಟೆ ಆಗಿತ್ತು
ಇದಕ್ಕೂ ಮುಂಚೆ ಬೆಂಗಳೂರಿನಲ್ಲಿ 'ಯಜಮಾನ' ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ, ಯಾರೀ ವಿಡಿಯೋ ಮಾಡ್ತಿದ್ರು ಎಂದು ದರ್ಶನ್ ಗದರಿಸಿದ್ದರಂತೆ. ಈ ವೇಳೆ ಜೂನಿಯರ್ ಆರ್ಟಿಸ್ಟ್ ಒಬ್ಬರು ದರ್ಶನ್ ನನ್ನ ಮೇಲೆ ಹಲ್ಲೆ ಮಾಡಿದ್ರು ಎಂದು ಆರೋಪ ಮಾಡಿದ್ದರು. ನಂತರ ಸ್ಪಷ್ಟನೆ ನೀಡಿದ್ದ ನಿರ್ಮಾಪಕಿ ಶೈಲಾಜ ನಾಗ್ ಫೋಟೋ ಕ್ಲಿಕ್ ಮಾಡಬೇಡಿ ಎಂದು ಹೇಳಿದ್ದು ಅಷ್ಟೇ, ಹಲ್ಲೆ ಮಾಡಿಲ್ಲ ಎಂದಿದ್ದರು.

ದರ್ಶನ್ ಗೆ ಕೆಟ್ಟ ಕೋಪ ಬರುತ್ತೆ
ಅಂದ್ಹಾಗೆ, ಸಿನಿಮಾ ಶೂಟಿಂಗ್ ನಡೆಯಬೇಕಾದರೇ ವಿಡಿಯೋ ರೆಕಾರ್ಡ್ ಮಾಡುವುದು, ಫೋಟೋ ತೆಗೆಯುವುದನ್ನ ನಟ ದರ್ಶನ್ ಒಪ್ಪುವುದಿಲ್ಲ. ಇಂತವರನ್ನ ಕಂಡರೇ ತಕ್ಷಣ ಅವರನ್ನ ವಿರೋಧಿಸುತ್ತಾರೆ. ಇಂತಹ ಘಟನೆಗಳಿಂದ ನಿರ್ಮಾಪಕರಿಗೆ ತೊಂದರೆಯಾಗುತ್ತೆ ಎಂದು ಈಗಾಗಲೇ ಹಲವು ಸಲ ಹೇಳಿದ್ದಾರೆ.

ದರ್ಶನ್ ವಾಪಸ್ ಹೋದ್ರಾ.?
ಅಂಬರೀಶ್ ನಿಧನದಿಂದ ಸ್ವೀಡನ್ ನಿಂದ ಬೆಂಗಳೂರಿಗೆ ವಾಪಸ್ ಬಂದಿದ್ದ ದರ್ಶನ್, ಈಗ ಸ್ವೀಡನ್ ಗೆ ಪ್ರಯಾಣ ಬೆಳಸಿರಬಹುದು. ಅಂತ್ಯಕ್ರಿಯೆ ಬಳಿಕ, ಅಂಬಿ ಅಸ್ಥಿ ವಿಸರ್ಜನೆ ವೇಳೆಯೂ ದರ್ಶನ್, ಕುಟುಂಬದ ಜೊತೆ ಇದ್ದರು. ಸದ್ಯಕ್ಕೆ ಎಲ್ಲರಿಗೂ ಸಾಂತ್ವನ ಹೇಳಿ, ನಿರ್ಮಾಪಕರಿಗೆ ನಷ್ಟವಾಗಬಾರದು ಎಂಬ ಉದ್ದೇಶದಿಂದ ಶೂಟಿಂಗ್ ಪಾಲ್ಗೊಳ್ಳಲು ಹೋಗಿದ್ದಾರೆ ಎನ್ನಲಾಗಿದೆ.

'ತಾರಕ್' ನಂತರ ಯಾವ ಸಿನಿಮಾನೂ ಬಂದಿಲ್ಲ
2017ರಲ್ಲಿ ಬಿಡುಗಡೆಯಾದ 'ತಾರಕ್' ಸಿನಿಮಾದ ನಂತರ ದರ್ಶನ್ ಅಭಿನಯದ ಯಾವ ಚಿತ್ರವೂ ರಿಲೀಸ್ ಆಗಿಲ್ಲ. 'ಕುರುಕ್ಷೇತ್ರ' ಚಿತ್ರೀಕರಣ ಮುಗಿದಿದ್ದರು, ಪೋಸ್ಟ್ ಪ್ರಡೊಕ್ಷನ್ ಕೆಲಸ ಸಮಯ ತೆಗೆದುಕೊಳ್ಳುತ್ತಿದೆ. ಹಾಗಾಗಿ, 'ಯಜಮಾನ' ಸಿನಿಮಾನೇ ಮೊದಲು ಬರಬಹುದು ಎಂಬ ನಿರೀಕ್ಷೆ ಇದೆ. ಬಟ್, ಈ ವರ್ಷ ದರ್ಶನ್ ಅವರ ಯಾವ ಸಿನಿಮಾನೂ ತೆರೆಕಾಣಲು ಲಕ್ಷಣ ಕಾಣುತ್ತಿಲ್ಲ. 'ಯಜಮಾನ' ಕೂಡ ಮುಂದಿನ ವರ್ಷದ ಆರಂಭದಲ್ಲಿ ಬರಬಹುದು.


Click it and Unblock the Notifications











