'ಯಜಮಾನ' ಟೈಟಲ್ ಹಾಡಿನಲ್ಲಿ ಸರ್ಪ್ರೈಸ್ , ದಿನಾಂಕ ಪ್ರಕಟ
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಹಾಡುಗಳಿಂದ ಉತ್ಸವ ಮಾಡುತ್ತಿದೆ. ಸದ್ಯ ಮೂರು ಹಾಡುಗಳು ರಿಲೀಸ್ ಆಗಿದ್ದು, ದಾಖಲೆಗಳು ಉಡೀಸ್ ಆಗಿದೆ. ಅದೇ ರೀತಿ ಹಾಡುಗಳು ಕೂಡ ಜನರ ಮೆಚ್ಚುಗೆ ಗಳಿಸಿಕೊಂಡಿದೆ.
ಈಗ ನಾಲ್ಕನೇ ಹಾಡಿನ ಸರದಿ. ಮೂರು ಸೂಪರ್ ಹಿಟ್ ಹಾಡು ನೀಡಿದ ಯಜಮಾನ್ರು ನಾಲ್ಕನೇ ಹಾಡು ಯಾವುದು ಮತ್ತು ಯಾವಾಗ ಎಂಬ ಕುತೂಹಲ ಡಿ ಬಾಸ್ ಭಕ್ತರಲ್ಲಿ ಕಾಡ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.
ಈ ಹಿಂದೆ ಹೇಳಿದಂತೆ ಯಜಮಾನ ಚಿತ್ರದ ನಾಲ್ಕನೇ ಹಾಡನ್ನ ರಾಜಕುಮಾರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿದ್ದಾರೆ. ಈ ಬಗ್ಗೆ ಸಂತೋಷ್ ಕೂಡ ಸಂತಸ ಹಂಚಿಕೊಂಡಿದ್ದಾರೆ. ಹಾಗಿದ್ರೆ, ಯಜಮಾನ ಚಿತ್ರದ ನಾಲ್ಕನೇ ಹಾಡಿನ ವಿಶೇಷತೆಗಳೇನು? ಮುಂದೆ ಓದಿ.....

ಇದು ಟೈಟಲ್ ಸಾಂಗ್
ಈಗಾಗಲೇ ದರ್ಶನ್ ಇಂಟ್ರೋ ಸಾಂಗ್, ಐಟಂ ನಂಬರ್ ಮತ್ತು ರೋಮ್ಯಾಟಿಕ್ ಹಾಡು ರಿಲೀಸ್ ಮಾಡಿರುವ ಯಜಮಾನ ಈಗ ಟೈಟಲ್ ಹಾಡನ್ನ ಪ್ರೇಕ್ಷಕರೆದುರು ತರ್ತಿದ್ದಾರೆ. ''ನಿಂತ ನೋಡೋ ಯಜಮಾನ'' ಎಂಬ ಹಾಡು ಇದಾಗಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಸಂತೋಷ್ ಆನಂದ್ ರಾಮ್ ಖುಷಿ
2012 ರಲ್ಲಿ ದರ್ಶನ ಸರ್ ಸಿನಿಮಾ ಚಿಂಗಾರಿ ಗೆ co writer ಆಗಿ ಸಂಭಾಷಣೆ ಬರೆದಿದ್ದೆ. ಈಗ 2019 ರಲ್ಲಿ ಚಾಲೆಂಜಿಂಗ್ ಸರ್ ಅವರ "ಯಜಮಾನ" ಚಿತ್ರಕ್ಕೆ ನನ್ನ ನೆಚ್ಚಿನ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಯಜಮಾನ'ದ'ಟೈಟಲ್ ಟ್ರ್ಯಾಕ್ "ನಿಂತ ನೋಡೋ ಯಜಮಾನ" ಹಾಡನ್ನು ಬರೆದಿದ್ದೇನೆ. ನಿಮಗೆ ಇಷ್ಟವಾಗುತ್ತೇ ಎಂದು ಭಾವಿಸಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.

ಫೆಬ್ರವರಿ 5ಕ್ಕೆ ಟೈಟಲ್ ಸಾಂಗ್
ಫೆಬ್ರವರಿ 5ನೇ ತಾರೀಖು ಸಂಜೆ 5 ಗಂಟೆಗೆ "ನಿಂತ ನೋಡೋ ಯಜಮಾನ" ಹಾಡು ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಲಿದೆ. ಈ ಹಾಡಿಗೆ ದರ್ಶನ್ ಅಭಿಮಾನಿಗಳು ಈಗಲೇ ಹ್ಯಾಷ್ ಟ್ಯಾಗ್ ರೆಡಿ ಮಾಡಿ ಟ್ರೆಂಡ್ ಮಾಡಲು ಸಜ್ಜಾಗಿದ್ದಾರೆ.

ಅತಿ ಶೀಘ್ರದಲ್ಲಿ ಟ್ರೈಲರ್
ಯಜಮಾನ ಹಾಡುಗಳ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಇದೇ ತಿಂಗಳಲ್ಲಿ ಟ್ರೈಲರ್ ನೋಡುವ ಅವಕಾಶ ಕೂಡ ಸಿಗಲಿದೆ. ಹೌದು, ಅತಿ ಶೀಘ್ರದಲ್ಲಿ ಯಜಮಾನ ಟ್ರೈಲರ್ ರಿಲೀಸ್ ಆಗುತ್ತಿದೆ. ಬಹುಶಃ ಸಿನಿಮಾ ಕೂಡ ಮಾರ್ಚ್ ಆರಂಭದಲ್ಲಿ ತೆರೆಕಾಣಬಹುದು.


Click it and Unblock the Notifications











