IMDB ರೇಟಿಂಗ್ ನಲ್ಲಿ 'ಯಜಮಾನ' ಹವಾ: ದರ್ಶನ್ ಚಿತ್ರಕ್ಕೆ ಹೆಚ್ಚು ಕ್ರೇಜ್
Recommended Video

ದರ್ಶನ್ ತೂಗುದೀಪ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಸುಮಾರು 800ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಯಜಮಾನ ಎಂಟ್ರಿ ಕೊಡ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಹಬ್ಬವೇ ನಡೆಯಲಿದೆ.
ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ, ಇಡೀ ದೇಶದಲ್ಲೇ ಯಜಮಾನ ಸದ್ದು ಮಾಡ್ತಿದ್ದಾನೆ. ಇದಕ್ಕೆ ತಾಜಾ ಉದಾಹರಣೆ ಐಎಂಡಿಬಿ ರೇಟಿಂಗ್.
ಹೌದು, ದೇಶದ ಪ್ರತಿಷ್ಠಿತ ಚಿತ್ರಗಳ ಬಗ್ಗೆ ರೇಟಿಂಗ್ ಮಾಡುವ ಐಎಂಡಿಬಿಯಲ್ಲಿ ದರ್ಶನ್ ಯಜಮಾನನ ಹವಾ ಜೋರಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಜಮಾನ ಚಿತ್ರಕ್ಕೆ ಯಾವುದೇ ಕಾಂಪಿಟೇಶನ್ ಇಲ್ಲ ಎನ್ನಲಾಗಿದೆ. ಮುಂದೆ ಓದಿ..

ದೇಶದ ನಿರೀಕ್ಷೆಯ ಚಿತ್ರಗಳಲ್ಲಿ ಯಜಮಾನ ನಂ 1
ಐಎಂಡಿಬಿ ಪ್ರಕಾರ ದೇಶದ ಬಹುನಿರೀಕ್ಷೆಯ ಚಿತ್ರಗಳ ಪೈಕಿ ಡಿ ಬಾಸ್ ಅಭಿನಯದ ಯಜಮಾನ ಸಿನಿಮಾ ಮೊದಲ ಸ್ಥಾನದಲ್ಲಿದೆ. ಶೇಕಡಾ 35.9 ಜನಪ್ರಿಯತೆ ಹೊಂದಿರುವ ಯಜಮಾನ ಇತರೆ ಚಿತ್ರಗಳಿಂದ ಮುಂದೆ ಇದೆ.

ಯಜಮಾನನ ಮುಂದೆ ಯಾವುದು ಇಲ್ಲ
ಯಜಮಾನ ಸಿನಿಮಾ ಬಿಟ್ಟರೇ ನಿರೀಕ್ಷೆಯ ಚಿತ್ರಗಳ ಪಟ್ಟಿಯಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳೇ ಇಲ್ಲ. ನೋಟ್ ಬುಕ್ ಎರಡನೇ ಸ್ಥಾನದಲ್ಲಿದ್ರೆ, ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಮೂರನೇ ಸ್ಥಾನದಲ್ಲಿದೆ. ಆರನೇ ಸ್ಥಾನದಲ್ಲಿ ಅಮಿತಾಬ್ ಬಚ್ಚನ್ ಅಭಿನಯದ ಬದ್ಲಾ ಸಿನಿಮಾ ಇದೆ.

ಒಂದು ವಾರದ ಮುಂಚೆಯೇ ಕಟೌಟ್
ಈಗಾಗಲೇ ರಾಜ್ಯದ ಅನೇಕ ಚಿತ್ರಮಂದಿರಗಳ ಮುಂದೆ ಯಜಮಾನ ಚಿತ್ರದ ಕಟೌಟ್, ಪೋಸ್ಟರ್ ನಿಂತಿದೆ. ಮಾರ್ಚ್ 1 ರಂದು ಚಿತ್ರಮಂದಿರಕ್ಕೆ ಬರ್ತಿದ್ದರೂ, ಒಂದು ವಾರದ ಮುಂಚೆಯೇ ಥಿಯೇಟರ್ ಗಳ ಬಳಿ ಸಂಭ್ರಮ ಹೆಚ್ಚಾಗಿದೆ.

ಕನ್ನಡದಲ್ಲಿ ಮಾತ್ರ ಬಿಡುಗಡೆ
ಅಂದ್ಹಾಗೆ, ಯಜಮಾನ ಸಿನಿಮಾ ವಿಶ್ವಾದ್ಯಂತ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿಯೂ ಕನ್ನಡದಲ್ಲೇ ಸಿನಿಮಾ ಬರ್ತಿದೆ ಎಂದು ನಿರ್ಮಾಕಿ ಶೈಲಜಾ ನಾಗ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.


Click it and Unblock the Notifications











