'ಕೆಜಿಎಫ್' ದಾಖಲೆ ಮುರಿಯೋಕೆ ಹತ್ತಿರ ಬಂದೇ ಬಿಟ್ಟ 'ಯಜಮಾನ'
Recommended Video

ದಾಖಲೆಗಳು ಶಾಶ್ವತ ಅಲ್ಲ. ಇಂದು ನಿರ್ಮಾಣವಾದ ದಾಖಲೆ ನಾಳೆ ಉಡೀಸ್ ಆಗುತ್ತೆ. ನಾಳೆ ಸೃಷ್ಟಿಯಾದ ದಾಖಲೆ ನಾಡಿದ್ದು ಬ್ರೇಕ್ ಆಗುತ್ತೆ. ಇದು ಬರಿ ಆಟದಲ್ಲಿ ಮಾತ್ರವಲ್ಲ, ಸಿನಿಮಾ ವಿಚಾರದಲ್ಲೂ ಅಷ್ಟೇ.
ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ವರ್ಲ್ಡ ವೈಡ್ ಬಿಡುಗಡೆಯಾಗಿದ್ದು, ಎಲ್ಲೆಡೆಯೂ ಉತ್ತಮ ಪ್ರದರ್ಶನ ಕಾಣ್ತಿದೆ. ಅದಕ್ಕೂ ಮುಂಚೆ ತೆರೆಕಂಡಿದ್ದ ಕೆಜಿಎಫ್ ಚಿತ್ರವೂ 75 ದಿನ ಪೂರೈಸಿ ಇನ್ನು ಹಲವು ಚಿತ್ರಮಂದಿಗಳಲ್ಲಿ ಪ್ರದರ್ಶನವಾಗುತ್ತಲೇ ಇದೆ.
ಐದು ಭಾಷೆಯಲ್ಲಿ ರಿಲೀಸ್ ಆಗಿದ್ದ ಕೆಜಿಎಫ್ ಸಿನಿಮಾ ಇದುವರೆಗೂ ಯಾರೂ ಮಾಡದಂತಹ ದಾಖಲೆಯನ್ನ ನಿರ್ಮಿಸಿತ್ತು. ಈ ರೆಕಾರ್ಡ್ ಬ್ರೇಕ್ ಮಾಡೋಕೆ ಸದ್ಯಕ್ಕಂತೂ ಆಗಲ್ಲ ಎಂಬ ಮಾತುಗಳು ಕೇಳಿಬರ್ತಿದ್ದಾಗಲೇ ಯಜಮಾನ ಎಂಟ್ರಿಯಾದ. ಅದರ ಪರಿಣಾಮ ಕೆಜಿಎಫ್ ರೆಕಾರ್ಡ್ ಬ್ರೇಕ್ ಆಗುವ ಲಕ್ಷಣ ಕಾಣ್ತಿದೆ. ಅಷ್ಟಕ್ಕೂ, ಏನಿದು ದಾಖಲೆ ವಿಷ್ಯ? ಮುಂದೆ ಓದಿ....

ಟ್ರೈಲರ್ ವೀಕ್ಷಣೆಯಲ್ಲಿ ನಿಲ್ಲದ ಪೈಪೋಟಿ
ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ರಾಕಿಂಗ್ ಯಶ್ ಅವರ ಕೆಜಿಎಫ್ ಚಾಪ್ಟರ್ 1 ಟ್ರೈಲರ್. ಇದೀಗ, ಈ ದಾಖಲೆಯನ್ನ ಮುರಿಯೋಕೆ ದರ್ಶನ್ ಯಜಮಾನ ಸಜ್ಜಾಗಿದ್ದು, ಎರಡು ಟ್ರೈಲರ್ ಗಳ ನಡುವೆ ಕೇವಲ 1.7 (1,73,452) ಲಕ್ಷ ವ್ಯತ್ಯಾಸವಿದೆ.

ಕೆಜಿಎಫ್ ನಂಬರ್ ಎಷ್ಟಿದೆ?
ನವೆಂಬರ್ 8 ರಂದು ಬಿಡುಗಡೆಯಾಗಿದ್ದ ಕೆಜಿಎಫ್ ಕನ್ನಡ ಟ್ರೈಲರ್ ಇಲ್ಲಿಯವರೆಗೂ 1.8 (1,86,22,618) ಕೋಟಿ ವೀಕ್ಷಣೆ ಕಂಡಿದೆ. ಇದು ಕನ್ನಡ ಮಟ್ಟಿಗೆ ಮೊದಲ ಸ್ಥಾನದಲ್ಲಿದೆ. ಕೆಜಿಎಫ್ ಮಟ್ಟಿಗೆ ಯಾವ ಟ್ರೈಲರ್ ಕೂಡ ಯಶಸ್ಸು ಕಂಡಿರಲಿಲ್ಲ.

ದಾಖಲೆ ಬೆನ್ನತ್ತಿದ ಯಜಮಾನ
ಕೆಜಿಎಫ್ ದಾಖಲೆ ಮುರಿಯಲು ಕಷ್ಟಸಾಧ್ಯ ಎಂದು ಲೆಕ್ಕಾಚಾರ ಹಾಕ್ತಿದ್ದ ವೇಳೆ ದರ್ಶನ್ ಅಭಿನಯದ ಯಜಮಾನ ಟ್ರೈಲರ್ ಬಂತು. ನೋಡು ನೋಡುತ್ತಿದ್ದಂತೆ ಕೆಜಿಎಫ್ ಸನಿಹಕ್ಕೆ ಬಂದ ಯಜಮಾನ ಈಗ ಯಶ್ ಟ್ರೈಲರ್ ದಾಖಲೆ ಅಳಿಸಿಹಾಕುವ ಹಾದಿಯಲ್ಲಿದೆ. ಫೆಬ್ರವರಿ 9 ರಂದು ರಿಲೀಸ್ ಆಗಿದ್ದ ಯಜಮಾನ ಟ್ರೈಲರ್, ಇಲ್ಲಿಯವರೆಗೂ 1.8 (1,84,49,166) ಕೋಟಿ ವೀಕ್ಷಣೆ ಕಂಡಿದೆ.

ದಾಖಲೆ ಶಾಶ್ವತವಲ್ಲ
ಹಾಗ್ನೋಡಿದ್ರೆ, ಯಜಮಾನ ಸಿನಿಮಾ ಈ ದಾಖಲೆಯನ್ನ ಬ್ರೇಕ್ ಮಾಡಿದ್ರು ಅದು ಶಾಶ್ವತವಲ್ಲ. ಆ ರೆಕಾರ್ಡ್ ಬ್ರೇಕ್ ಮಾಡೋಕೆ ಇನ್ನೊಂದು ಟ್ರೈಲರ್ ಬರಬಹುದು. ಈಗ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರರಂಗ ಹೆಚ್ಚು ಸದ್ದು ಮಾಡ್ತಿದ್ದು, ಈ ನಂಬರ್ಸ್ ಎಲ್ಲ ದಿನದಿಂದ ದಿನಕ್ಕೆ ಧೂಳಿಪಟ ಆಗುತ್ತೆ.


Click it and Unblock the Notifications











