"ಮಾವ, ಹೆಂಡ್ತಿ, ಮಗಳು ಮುಂದೆ ಹುಲಿಯಾಗು ನೋಡೋಣ"; ವರ್ತೂರು ಸಂತೋಷ್‌ಗೆ ಯಲಹಂಕ ಮಂಜು ಸವಾಲು
ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದು ಎರಡು ವಾರಗಳಾಗಿವೆ. ಆದರೂ, ಬಿಗ್‌ಬಾಸ್ ಸ್ಪರ್ಧಿಗಳ ಹವಾ ಮಾತ್ರ ಕಮ್ಮಿಯಾಗಿಲ್ಲ. ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಾ ತಮಗೆ ಸಿಕ್ಕಿರೋ ಜನಪ್ರಿಯತೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಅದರಲ್ಲೂ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ಗೆ ಸ್ವಲ್ಪ ಹೆಚ್ಚೇ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಿಂದ ಬಂದ್ಮೇಲೆ ವರ್ತೂರು ಸಂತೋಷ್ ಇಷ್ಟ ಪಡುವವರು ಎಷ್ಟು ಮಂದಿ ಇದ್ದಾರೋ..? ಅಷ್ಟೇ ಮಂದಿ ವಿರೋಧಿಸುವವರೂ ಹುಟ್ಟಿಕೊಂಡಿದ್ದಾರೆ. ಅದರಲ್ಲೂ 'ಹಳ್ಳಿಕಾರ್ ಒಡೆಯ' ಅನ್ನೋ ಬಿರುದಿನಿಂದ ಶುರುವಾಗಿರೋ ಕಿತ್ತಾಟ ಫ್ಯಾಮಿಲಿ ಮ್ಯಾಟರ್‌ವರೆಗೂ ನಡೆಯುತ್ತಲೇ ಇದೆ. ಅದರಲ್ಲೂ ಬಿಗ್‌ಬಾಸ್ ಮನೆಯೊಳಗೆ ಇರುವಾಗಲೇ ವರ್ತೂರು ಸಂತೋಷ್ ವಿರುದ್ಧ ಯಲಹಂಕ ಮಂಜು ಹರಿಹಾಯ್ದಿದ್ದರು.

ಈಗ ಮತ್ತೆ ವರ್ತೂರು ಸಂತೋಷ್ ವಿರುದ್ಧ ತಿರುಗಿಬಿದ್ದಿದ್ದಾರೆ. ವರ್ತೂರು ಸಂತೋಷ್‌ರನ್ನು ಮಾವನ ಮನೆಗೆ ನೇರಾ ನೇರಾ ಚರ್ಚೆಗೆ ಆಹ್ವಾನ ನೀಡಿದ್ದಾರೆ. ವರ್ತೂರು ಸಂತೋಷ್ ಹಾಗೂ ಯಲಹಂಕ ಮಂಜು ನಡುವೆ ಮಾತಿನ ಮತ್ತೆ ಶುರುವಾಗಿದೆ. "ಬಾ ನಿನ್ನ ಬಂಡವಾಳ ಏನು ಅಂತ ನಾವು ತೋರಿಸುತ್ತೇವೆ." ಅಂತ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸವಾಲೆಸೆದಿದ್ದಾರೆ.
ವರ್ತೂರು ಸಂತೋಷ್ ಬಿಗ್‌ಬಾಸ್ ಮನೆಯೊಳಗೆ ಇದ್ದಾಗಲೇ ಅವರ ಫ್ಯಾಮಿಲಿ ಮ್ಯಾಟರ್ ಹೊರಬಿದ್ದಿತ್ತು. ಆಗಲೇ ಅವರಿಗೆ ಮದುವೆ ಆಗಿರುವ ವಿಷಯ ಬಹಿರಂಗಗೊಂಡಿತ್ತು. ವರ್ತೂರು ಸಂತೋಷ್ ಮದುವೆ ಆಗಿರುವ ಹುಡುಗಿಯ ತಂದೆ ಗಂಭೀರ ಆರೋಪ ಮಾಡಿದ್ದರು. ಇದೇ ವೇಳೆ ಕನ್ನಡ ಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಯಲಹಂಕ ಮಂಜು ಕೂಡ ವರ್ತೂರು ಸಂತೋಷ್ ಮೇಲೆ ಹರಿಹಾಯ್ದಿದ್ದರು. ಈಗ ಮತ್ತೆ ಫಾರ್ಮ್ ಇಂಡಿಯಾ 22 ಅನ್ನೋ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವರ್ತೂರು ವಿರುದ್ಧ ತಿರುಗಿಬಿದ್ದಿದ್ದಾರೆ.
"ನಿಮ್ಮ ವರ್ತೂರು ಸಂತೋಷ್‌ಗೆ ನೇರವಾಗಿ ಹೇಳುತ್ತಿದ್ದೇನೆ. ಬಾ. ನೇರಾ ನೇರ ಕೂತುಕೊಳ್ಳೋಣ. ನೇರಾ ನೇರ ಮಾತುಗಳಾಗಲಿ. ಏನಿದೆ ಅಂತ ನಾವೂ ಉತ್ತರ ಕೊಡುತ್ತೇವೆ. ನಿಮ್ಮ ಬಗ್ಗೆ ಮಾಹಿತಿಯನ್ನೆಲ್ಲ ನಾವೂ ಸಂಗ್ರಹಿಸಿದ್ದೇವೆ. ಬಾ ನಿನಗೆ ತಾಕತ್ತಿದ್ದರೆ, ನೇರಾ ನೇರ ಕೂತ್ಕೋ.." ಎಂದು ವರ್ತೂರು ಸಂತೋಷ್‌ರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.

ಇದೇ ವಿಡಿಯೋದಲ್ಲಿ ವರ್ತೂರು ಸಂತೋಷ್ ವಿರುದ್ಧ ಮತ್ತದೇ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ನೀವು ಡ್ರಗ್ಸ್ ತೆಗೆದುಕೊಂಡು ರಸ್ತೆಗಳಲ್ಲಿ ಬಟ್ಟೆ ಬಿಚ್ಚಿಕೊಂಡು ಹೋಗಿರೋದು, ನಾವೆಲ್ಲ ಮಾಹಿತಿಯನ್ನು ಕಲೆ ಹಾಕಿದ್ದೀವಿ ಬಾರಪ್ಪ. ನೀನು ಎಂಡಿ ಅಂತೇನೋ ಮಾತ್ರಗಳನ್ನು ಬೇರೆ ತೆಗೆದುಕೊಳ್ಳುತ್ತಿದ್ದೀಯ ಅಂತಲ್ಲ. ಆ ಮಾತ್ರೆ ಬಗ್ಗೆನೂ ಮಾಹಿತಿ ಕೊಡು ಬಾ.. ಏನಕ್ಕೆ ಇವನ್ನೆಲ್ಲಾ ತೆಗೆದುಕೊಳ್ಳುತ್ತಿದ್ದೀಯಾ ಅಂತೆಲ್ಲಾ ಹೇಳು ಬಾ. ಆಗ ನೀನು ಹುಲಿನಾ? ಇಲಿನಾ? ಅಂತ ತೋರಿಸುತ್ತೇವೆ." ಎಂದಿದ್ದಾರೆ.
ಹಾಗೇ "ಅಲ್ಲೆಲ್ಲೋ ಬಿಗ್‌ಬಾಸ್‌ನಿಂದ ಆಚೆ ಬಂದ್ಮೇಲೆ ಕೆಲವು ಚೇಲಾಗಳೆಲ್ಲ ಹೇಳುತ್ತಿದ್ದಾರೆ. ಹುಲಿ ಬಂದೈತೆ ಬನ್ನಿ ಅಂತ ಹೇಳುತ್ತಿದ್ದೀರಲ್ಲ. ಆಯ್ತಪ್ಪ ಹುಲಿ, ಬಾ ಈಗ ಸೋಮನಾಥ್ ಅಣ್ಣನ ಮನೆಗೆ ಬಾ.. ಅಲ್ಲೇ ಕೂತುಕೊಳ್ಳೋಣ. ಏನೋ ಸಾಧನೆ ಮಾಡುತ್ತಿದ್ದಾನೆ ಅಂತ ತೋರಿಸುತ್ತಾ ಇದ್ದಿರಲ್ಲ. ಬಾ ನಿನ್ನ ಬಂಡವಾಳ ಏನು ಅಂತ ನಾವು ತೋರಿಸುತ್ತೇವೆ." ಎಂದು ಯಲಹಂಕ ಮಂಜು ಕಿಡಿಕಾರಿದ್ದಾರೆ.
"ನಿಮ್ಮ ಮಾವನ ಮುಂದೆ, ಹೆಂಡ್ತಿ ಮುಂದೆ, ನಿಮ್ಮ ಮಗಳು ಕೂಡ ಇರುತ್ತಾರೆ ಬಾ.. ನಿಮ್ಮ ಮಾವನ ಮನೆಯಲ್ಲೇ ಕೂತುಕೊಂಡು ನೇರಾ ನೇರಾ ಚರ್ಚೆ ಮಾಡೋಣ ಬಾ.. ಜನಕ್ಕೆ ನೇರಾ ನೇರ ಚರ್ಚೆ ಮಾಡೋಣ. ನೀವು ಎಲ್ಲೋ ಕೂತ್ಕೊಂಡು ವಿಡಿಯೋ ಮಾಡಿ ಹಾಕಿದ್ರೆ ಆಗಲ್ಲ. ಆಗ ನೀನು ಹುಲಿಯಾಗು ನೋಡೋಣ. ಆಗ ನೀನು ಗಂಡಸು ಆಗು." ಎಂದು ವರ್ತೂರು ಸಂತೋಷ್‌ಗೆ ಯಲಹಂಕ ಮಂಜು ಸವಾಲು ಎಸೆದಿದ್ದಾರೆ.


Click it and Unblock the Notifications











