ಈ ವಾರ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ಕನ್ನಡ ಚಿತ್ರಗಳ ಲಿಸ್ಟ್

ಮತ್ತೊಂದು ವಾರ ಕಳೆದ ಹೊಸ ವಾರ ಆರಂಭವಾಗಿದೆ. ಪ್ರತಿ ವಾರದಂತೆ ಈ ವಾರವೂ ಒಂದಷ್ಟು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಮುಂದಿನ ವಾರ ದೀಪಾವಳಿ ವೀಕೆಂಡ್ ಬರಲಿದೆ. ಹಾಗಾಗಿ ಈ ವಾರ ತೆರೆಕಂಡು ಗೆದ್ದ ಚಿತ್ರಗಳಿಗೆ ಮುಂದೆ ಹಬ್ಬದ ರಜೆ ಪ್ಲಸ್ ಆಗುತ್ತದೆ.

ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಬಿಡುಗಡೆಗೆ ಸಜ್ಜಾಗುತ್ತಿವೆ. ಕನ್ನಡದಲ್ಲಿ 4 ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಇನ್ನು ತೆಲುಗು, ತಮಿಳು, ಹಿಂದಿ ಚಿತ್ರಗಳು ಕೂಡ ಪ್ರೇಕ್ಷಕರ ಮುಂದೆ ಬರಲಿದೆ.

YalaKunni to Praapthi Kannada movies releasing this week in theaters

ಕನ್ನಡ

1. ಯಲಾಕುನ್ನಿ

ಬಹಳ ದಿನಗಳ ಬಳಿಕ ನಟ ಕೋಮಲ್ ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ. ಪ್ರದೀಪ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ 'ಯಲಾಕುನ್ನಿ' ಚಿತ್ರದಲ್ಲಿ ಮಿಂಚಿದ್ದಾರೆ. ಸಂಪೂರ್ಣ ಹಳ್ಳಿ ಸೊಗಡಿನ ಚಿತ್ರ ಇದಾಗಿದ್ದು ಖ್ಯಾತ ಖಳನಟ ವಜ್ರಮುನಿ ಗೆಟಪ್‌ನಲ್ಲಿ ಕೋಮನ್ ಮಿಂಚಿದ್ದಾರೆ. ಇನ್ನು ವಜ್ರಮುನಿ ಮೊಮ್ಮಗ ಆಕರ್ಶ್ ಸಹ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾನೆ. ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರದ ಇದೇ ಶುಕ್ರವಾರ ತೆರೆಗೆ ಬರಲಿದೆ.

2. ಎಲ್ಲಿಗೆ ಪಯಣ ಯಾವುದೋ ದಾರಿ

ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ನಟನೆಯ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಕಿರಣ್ ಎಸ್ ಸೂರ್ಯ ನಿರ್ದೇಶನದ ಚಿತ್ರವನ್ನು ಸುದರ್ಶನ್ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ನಿರ್ಮಿಸಿದ್ದಾರೆ. ಅಭಿಮನ್ಯು ಜೋಡಿಯಾಗಿ ಸ್ಫೂರ್ತಿ ನಟಿಸಿದ್ದಾರೆ. ಬಲರಾಜ್ವಾಡಿ, ಶೋಭನ್, ಪ್ರದೀಪ್, ರಮೇಶ್ ನಾಯಕ್ ಸೇರಿ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೈಲರ್, ಸಾಂಗ್ಸ್ ಗಮನ ಸೆಳೆದಿದೆ.

YalaKunni to Praapthi Kannada movies releasing this week in theaters

3. ನಸಾಬ್

ಟೈಟಲ್‌ನಿಂದಲೇ ಗಮನ ಸೆಳೆದಿರುವ ಸಿನಿಮಾ 'ನಸಾಬ್'. ಬಂಜಾರ ಭಾಷೆಯಲ್ಲಿ 'ನಸಾಬ್' ಎಂದರೆ ಸರ್ವೋಚ್ಚ ನಾಯಕ ಎನ್ನುವ ಅರ್ಥ ಬರುತ್ತದೆ. ಈ ಚಿತ್ರದಲ್ಲಿ ಸಾಮಾನ್ಯ ಹುಡುಗ ನಸಾಬ್ ಆಗಿ ಬೆಳೆಯುವ ಕಥೆಯಿದೆಯಂತೆ. ಕೀರ್ತಿ ಕುಮಾರ್ ನಾಯ್ಕ್ ಚಿತ್ರವನ್ನು ನಿರ್ದೇಶಿಸಿ ಹೀರೊ ಆಗಿ ನಟಿಸಿದ್ದಾರೆ. ಶಫಾಲಿ ಸಿಂಗ್ ಸೋನಿ ಚಿತ್ರದ ನಾಯಕಿ.

4. ಪ್ರಾಪ್ತಿ

ಡಾ. ಎಸ್ ಮಹೇಶ್ ಬಾಬು ನಿರ್ಮಿಸಿ ನಿರ್ದೇಶನದ ಮಾಡಿರುವ 'ಪ್ರಾಪ್ತಿ' ಚಿತ್ರಕ್ಕೂ ಈ ವಾರ ಬಿಡುಗಡೆ ಭಾಗ್ಯ. ಜಯಸೂರ್ಯ ಹಾಗೂ ಗೌರಿ ಸಾಗರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಸಂಬಂಧಗಳ ಕುರಿತು ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ವಿವಾಹೇತರ ಸಂಬಂಧ, ವಿಚ್ಛೇದನ, ಮಾನಸಿಕ ಖಿನ್ನತೆ ರೀತಿಯ ವಿಷಯಗಳ ಸುತ್ತಾ ಚಿತ್ರದ ಕಥೆ ಸುತ್ತುತ್ತದೆ. 'ಮೂಕ ಜೀವ' ಎನ್ನುವ ಮತ್ತೊಂದು ಚಿತ್ರ ಕೂಡ ಶುಕ್ರವಾರ ತೆರೆಗೆ ಬರಲಿದೆ.

ತೆಲುಗಿನಲ್ಲಿ 'ಪೊಟ್ಟೆಲ್', 'ಲಗ್ಗಂ', 'ರೋಟಿ ಕಪಡಾ ರೊಮ್ಯಾನ್ಸ್', 'ನರುಡಿ ಬದುಕು ನಟನ', 'C202', 'ಎಂತ ಪನಿ ಚೆಸಾವ್ ಚಂಟಿ' ಹೀಗೆ ಹಲವು ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿದೆ. ಪ್ರಭಾಸ್ ಹುಟ್ಟಹಬ್ಬದ ಸಂಭ್ರಮದಲ್ಲಿ ಅಕ್ಟೋಬರ್ 23ಕ್ಕೆ 'ಈಶ್ವರ್' ಹಾಗೂ ಅಕ್ಟೋಬರ್ 22ಕ್ಕೆ 'ಮಿ. ಪರ್ಫೆಕ್ಟ್' ಚಿತ್ರಗಳು ರೀ-ರಿಲೀಸ್ ಆಗ್ತಿದೆ.

ಬಾಲಿವುಡ್‌ನಲ್ಲಿ ಕಾಜೋಲ್ ಹಾಗೂ ಕೃತಿ ಸನೂನ್ ನಟನೆಯ 'ದೋ ಪಟ್ಟಿ' ಚಿತ್ರ ಈ ವಾರ ತೆರೆಗೆ ಬರ್ತಿದೆ. ಶಶಾಂತ್ ಚತುರ್ವೇದಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಬಂದಾ ಸಿಂಗ್ ಚೌಧರಿ' ಹಾಗೂ 'ದಿ ಮಿರಾಂಡಾ ಬ್ರದರ್ಸ್' ಎನ್ನುವ ಚಿತ್ರಗಳು ಬಿಡುಗಡೆ ಆಗುತ್ತಿವೆ. ತಮಿಳಿನಲ್ಲಿ ಯಾವುದೇ ದೊಡ್ಡ ಸಿನಿಮಾ ಈ ವಾರ ರಿಲೀಸ್ ಆಗ್ತಿಲ್ಲ.

More from Filmibeat

English summary
Kannada, telugu, hindi, tamil movies Theatrical release on October 25th;
Read more about: filmibeat original komal theater
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X