For Quick Alerts
  ALLOW NOTIFICATIONS  
  For Daily Alerts

  ಮದುವೆಯಾದ 'ಉಲ್ಲಾಸ-ಉತ್ಸಾಹ' ನಾಯಕಿ ಯಾಮಿ ಗೌತಮ್

  |

  ಕನ್ನಡದ 'ಉಲ್ಲಾಸ-ಉತ್ಸಾಹ' ಸಿನಿಮಾದ ಮೂಲಕ ಸಿನಿ ಜೀವನ ಆರಂಭಿಸಿದ್ದ ಬಾಲಿವುಡ್ ನಟಿ ಯಾಮಿ ಗೌತಮ್ ಇಂದು ವಿವಾಹವಾಗಿದ್ದಾರೆ.

  ತಮ್ಮ ಬಹುಕಾಲದ ಗೆಳೆಯ ಆದಿತ್ಯ ಧಾರ್ ಅವರನ್ನು ಯಾಮಿ ಇಂದು ಸರಳ ಸಮಾರಂಭದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ. ಹಿಂದಿಯ 'ಉರಿ' ಸಿನಿಮಾ ನಿರ್ದೇಶಕ ಆದಿತ್ಯ ದಾರ್ ಅನ್ನು ವರಿಸಿದ್ದಾರೆ ಯಾಮಿ. ಉರಿ ಹೊರತುಪಡಿಸಿ ಕೆಲವು ಸಿನಿಮಾಗಳಿಗೆ ಸಂಭಾಷಣೆ ಮತ್ತು ಹಾಡಿಗೆ ಸಾಹಿತ್ಯ ರಚಿಸಿದ್ದಾರೆ ಆದಿತ್ಯ.

  ಇನ್‌ಸ್ಟಾಗ್ರಾಂನಲ್ಲಿ ಮದುವೆಯ ಚಿತ್ರ ಹಂಚಿಕೊಂಡಿರುವ ಯಾಮಿ, 'ನಿನ್ನ ಬೆಳಕಲ್ಲಿ ನಾನು ಪ್ರೀತಿಸುವುದ ಕಲಿತೆ' ಎಂಬ ರೂಮಿ ಮಾತಿನೊಂದಿಗೆ. ''ನಮ್ಮ ಕುಟುಂಬದ ಆಶೀರ್ವಾದದೊಂದಿಗೆ ನಾವಿಬ್ಬರೂ ಇಂದು ಮದುವೆಯಾದೆವು. ಬಹಳ ಸರಳವಾದ ಸಮಾರಂಭದಲ್ಲಿ ಕೆಲವೇ ಆಪ್ತೇಷ್ಟರ ಮುಂದೆ ನಮ್ಮ ವಿವಾಹ ಸಂಪನ್ನವಾಯಿತು. ನಾವು ಪ್ರೀತಿ ಮತ್ತು ಸ್ನೇಹದ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಈ ಸಮಯದಲ್ಲಿ ನಿಮ್ಮ ಆಶೀರ್ವಾದ ಹಾಗೂ ಶುಭಾಶಯಗಳನ್ನು ನಾವು ಬಯಸುತ್ತೇವೆ'' ಎಂದಿದ್ದಾರೆ ಯಾಮಿ.

  ಯಾಮಿ ಗೌತಮ್ ಹಾಗೂ ಆದಿತ್ಯಗೆ ಹಲವಾರು ಸೆಲೆಬ್ರಿಟಿಗಳು, ಅಭಿಮಾನಿಗಳು, ನೆಟ್ಟಿಗರು ಶುಭಾಶಯಗಳನ್ನು ತಿಳಿಸಿದ್ದಾರೆ.

  ಯಾಮಿ ಗೌತಮ್ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಿದ್ದು ಕನ್ನಡದಲ್ಲಿ. ಗಣೇಶ್ ನಾಯಕನಾಗಿ ನಟಿಸಿದ್ದ 'ಉಲ್ಲಾಸ-ಉತ್ಸಾಹ' ಸಿನಿಮಾದಲ್ಲಿ ನಾಯಕಿ ಮಹಾಲಕ್ಷ್ಮಿ ಪಾತ್ರದಲ್ಲಿ ಯಾಮಿ ನಟಿಸಿದ್ದರು. ಆ ನಂತರ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳಲ್ಲಿ ಯಾಮಿ ನಟಿಸಿದ್ದಾರೆ.

  ತೆಲುಗು ನನ್ನ ಮಾತೃಭಾಷೆ ಆದರೆ ಹೃದಯದ ಭಾಷೆ ಕನ್ನಡ ಅಂದ್ರು ಅಕುಲ್ ಹೆಂಡ್ತಿ | Filmibeat Kannada

  ಬಿಡುಗಡೆಗೆ ತಯಾರಾಗಿರುವ 'ಭೂತ್ ಪೊಲೀಸ್', 'ದಾವಿ' ಸಿನಿಮಾದಲ್ಲಿ ನಟಿಸಿರುವ ಯಾಮಿ, 'ಎ ಥರ್ಸ್‌ಡೇ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅನಿರುದ್ಧ ರಾಯ್ ಚೌಧರಿಯ ಹೊಸ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

  English summary
  Actress Yami Gautam Ties Knot with Aditya in an intimate wedding ceremony. Yami Gautam's first movie is Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X