Yash: ಯಶ್ ಕಾಣೆಯಾಗಿದ್ದಾರೆ ಹುಡುಕಿಕೊಡಿ; ಅಭಿಮಾನಿಗಳೇ ಹಂಚಿಕೊಂಡ ಪ್ರಕಟಣೆ ಇದು!

ರಾಕಿಂಗ್ ಸ್ಟಾರ್ ಯಶ್ ಸದಾ ಸಾಮಾಜಿಕ ಜಾಲತಾಣದ ಟ್ರೆಂಡಿಂಗ್ ಪಟ್ಟಿಯಲ್ಲಿರುವ ನಟ. ಕಳೆದ ವರ್ಷ ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಸಾವಿರ ಕೋಟಿ ಕ್ಲಬ್ ಸೇರಿದ ಯಶ್ ಭಾರತ ಬಾಕ್ಸ್ ಅಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದ್ದರು. ಹೀಗೆ ಕನ್ನಡದ ಸೂಪರ್ ಸ್ಟಾರ್ ಆಗಿದ್ದ ಯಶ್ ಕೆಜಿಎಫ್ ಚಿತ್ರ ಸರಣಿಯ ಮೂಲಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದು, ದೊಡ್ಡ ಮಟ್ಟದ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಇಷ್ಟು ದೊಡ್ಡ ಮಟ್ಟದ ಹೆಸರನ್ನು ಮಾಡಿರುವ ಯಶ್ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಹಲವು ದಿನಗಳಿಂದ ಸತತವಾಗಿ ಎಲ್ಲರನ್ನೂ ಸಹ ಕಾಡುತ್ತಿದೆ. ಹೌದು, ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡ ಬಳಿಕ ಯಶ್ ಯಾವ ನಿರ್ದೇಶಕರ ಜತೆ ಚಿತ್ರ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಒಂದೂವರೆ ವರ್ಷ ಸಮೀಪಿಸುತ್ತಿದ್ದರೂ ಸಹ ತಮ್ಮ ಮುಂದಿನ ಚಿತ್ರದ ಬಗೆಗಿನ ಯಾವುದೇ ಸುಳಿವನ್ನೂ ಸಹ ಯಶ್ ಬಿಟ್ಟುಕೊಟ್ಟಿಲ್ಲ.

Yash 19: Fans are sharing Yash is missing posts as they didnot get any update about Yash 19

ಹೀಗೆ ಯಶ್ ತಮ್ಮ ಮುಂದಿನ ಪ್ರಾಜೆಕ್ಟ್ ಘೋಷಣೆ ಮಾಡುವುದನ್ನು ವಿಳಂಬ ಮಾಡಿದಷ್ಟು ಅಭಿಮಾನಿಗಳಲ್ಲಿ ಇದ್ದ ಕುತೂಹಲ ಹಾಗೂ ಪ್ರಶ್ನೆಗಳು ಬೇಸರ ಹಾಗೂ ಹತಾಶೆಯಾಗಿ ಪರಿವರ್ತನೆಗೊಳ್ಳುತ್ತಿದ್ದು, ತಾಳ್ಮೆ ಕಳೆದುಕೊಂಡ ಕೆಲ ಯಶ್ ಅಭಿಮಾನಿಗಳು ಪದೇಪದೆ ಯಶ್ ಮುಂದಿನ ಚಿತ್ರದ ಕುರಿತು ಪ್ರಶ್ನೆಗಳನ್ನು ಕೇಳುತ್ತಲೇ ಇದ್ದಾರೆ. ಈಗಾಗಲೇ ಹಲವಾರು ಬಾರಿ ಈ ಕುರಿತು ಪ್ರಶ್ನೆಗಳನ್ನು ಹಾಕಿ ಉತ್ತರ ಸಿಗದೇ ಬೇಸರಕ್ಕೊಳಗಾಗಿದ್ದ ಯಶ್ ಫ್ಯಾನ್ಸ್ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಯಶ್ ಬಳಿ ಪ್ರಶ್ನೆ ಇಟ್ಟಿದ್ದಾರೆ.

ಇಷ್ಟು ದಿನಗಳು ನೇರವಾಗಿ ಯಶ್ 19 ಬಗ್ಗೆ ಮಾಹಿತಿಯನ್ನು ಕೊಡಿ ಎಂದು ಬರೆದುಕೊಳ್ಳುತ್ತಿದ್ದ ಯಶ್ ಫ್ಯಾನ್ಸ್ ಈ ಬಾರಿ ಯಶ್ ಕಾಣೆಯಾಗಿದ್ದಾರೆ ಎಂದು ವಿಭಿನ್ನವಾಗಿ ಪ್ರಕಟಣೆಯೊಂದನ್ನು ಪೋಸ್ಟ್ ಮಾಡುವುದರ ಮೂಲಕ ಯಶ್ 19 ಚಿತ್ರವನ್ನು ಬೇಗ ಘೋಷಿಸುವಂತೆ ಒತ್ತಡ ಹೇರಿದ್ದಾರೆ. ಪತ್ರಿಕೆಯೊಂದರಲ್ಲಿ ಕಾಣೆಯಾಗಿರುವವರ ಬಗ್ಗೆ ಹಾಕಲಾಗುವ ಪ್ರಕಟಣೆಯ ಎಡಿಟ್ ಮಾಡಿರುವ ಯಶ್ ಫ್ಯಾನ್ಸ್ ತಮ್ಮ ನೆಚ್ಚಿನ ನಟ ಫೋಟೊವನ್ನು ಬಳಸಿ "ಕಾಣೆಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಮ್ಮ ಕನ್ನಡ ಚಿತ್ರರಂಗದ ಹೆಮ್ಮಯ ನಟ. ಕೆಜಿಎಫ್ ಬಾರಿ ಸಕ್ಸಸ್‌ನಿಂದ ತನ್ನ ಮುಂದಿನ ಚಿತ್ರದ ಘೋಷಣೆ ಮಾಡುತ್ತೇನೆ ಎಂದು ಹೇಳಿ ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದ್ದಾರೆ. ಕೂಡಲೇ ಯಾರಾದರೂ ಅವರನ್ನು ಸಂಪರ್ಕಿಸಿ. ಕೇವಲ ಘೋಷಣೆ ಮಾಡೋಕೆ ಎರಡು ವರ್ಷ ತಗೊಂಡ್ರೆ ಹೇಗೆ? ಅಭಿಮಾನಿಗಳ ಎಮೋಷನ್ಸ್ ಜತೆ ಆಟ ಆಡ್ತಾ ಇದ್ದೀರಾ. ಎಲ್ಲರೂ ಅವರಿವರ ನಟರ ಚಿತ್ರಗಳ ಅಪ್‌ಡೇಟ್ ತಗೊಂಡು ಎಂಜಾಯ್ ಮಾಡ್ತಾ ಇದ್ದಾರೆ. ನೀವು ಮಾತ್ರ ಇನ್ನೂ ಘೋಷಣೆಯನ್ನೇ ಮಾಡಿಲ್ಲ. ಯಾವುದೇ ಸುಳಿವನ್ನೂ ಸಹ ಕೊಟ್ಟಿಲ್ಲ. ತುಂಬಾ ಬೇಜಾರಾಗುತ್ತೆ ಬಾಸ್. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ" ಎಂದು ಬರೆಯಲಾಗಿದೆ.

ಸದ್ಗ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯಶ್ ಅಭಿಮಾನಿಗಳು ಈ ಫೋಟೊವನ್ನು ಹಂಚಿಕೊಂಡು ಯಶ್ 19 ಚಿತ್ರವನ್ನು ಬೇಗ ಘೋಷಿಸಿ ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Yash 19: Fans are sharing Yash is missing posts as they didnot get any update about Yash 19
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X