Yash19: ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದು ಯಾರು..? ಲಿಸ್ಟ್‌ನಲ್ಲಿ ಇರೋದು ಯಾರ‍್ಯಾರು ಗೊತ್ತಾ?

ಭಾನುವಾರದಿಂದ ಕನ್ನಡಿಗರಿಗೆ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಏಕೆಂದರೆ ಕೆಜಿಎಫ್ 2 ಬಿಡುಗಡೆಯಾದಾಗಿನಿಂದ ಕಾಯುತ್ತಿದ್ದ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಕೊನೆಗೂ ಒಂದು ಅಪ್‌ಡೇಟ್ ಹೊರಬಂದಿದೆ. ಸೋಮವಾರ ಕೂಡ ತಮ್ಮ ಹೊಸ ಸಿನಿಮಾದ ಬಗ್ಗೆ ಅಪ್‌ಡೇಟ್ ಹಂಚಿಕೊಂಡು ಫ್ಯಾನ್ಸ್‌ಗೆ ಇಡೀ ವಾರಕ್ಕೆ ಬೇಕಾದಷ್ಟು ಖುಷಿ ಕೊಟ್ಟಿದ್ದಾರೆ ರಾಖಿ ಭಾಯ್!.

ಪ್ರಶಾಂತ್ ನೀಲ್ ಅವರ ಕೆಜಿಎಫ್ ಭಾಗ ಒಂದು ಮತ್ತು ಎರಡಲ್ಲಿ ಕಾಣಿಸಿಕೊಂಡ ಬಳಿಕ ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಉತ್ತರ ಭಾರತದಲ್ಲೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅವರ ಮುಮದಿನ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಕುಡ ಇತ್ತು. ಯಶ್ 19 ಬಗ್ಗೆ ಅಭಿಮಾನಿಗಳ ಕಾತುರಕ್ಕೆ ಕೊನೆಗೂ ನಟ ಉತ್ತರ ನೀಡಿದ್ದಾರೆ.

Yash 19: Who Will Direct Rocking Star Yashs New Film?

ಕೆಜಿಎಫ್ 2 ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಅವರ ಮುಂದಿನ ಚಿತ್ರಕ್ಕೆ ತಾತ್ಕಾಲಿಕವಾಗಿ ಯಶ್ 19 ಎಂದು ಹೆಸರಿಟ್ಟಿರುವ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಆದರೆ ಸಿನಿಮಾವನ್ನು ಯಾರು ನಿರ್ದೇಶಿಸುತ್ತಾರೆ ಎಂಬುದರ ಕುರಿತು ಫ್ಯಾನ್ಸ್ ತಮ್ಮದೆ ಆದ ಕುತೂಹಲ ಹೊಂದಿದ್ದಾರೆ. ಅದರಲ್ಲಿ ಕೆಲವು ಪ್ರಮುಖ ನಿರ್ದೇಶಕರ ಹೆಸರುಗಳು ಕೇಳಿಬರುತ್ತಿದೆ.

ಯಶ್ 19 ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಾರಾ ನಿರ್ದೇಶಕಿ ಗೀತು ಮೋಹನ್ ದಾಸ್?

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟಿ ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಯಶ್ 19 ಅನ್ನು ನಿರ್ದೇಶಿಸಲಿದ್ದಾರೆ ಎಂಬ ಗುಸು ಗುಸು ಮೊದಲಿನಿಂದಲೂ ಇದೆ. ಈ ಸಿನಿಮಾ ಹೈ ಆಕ್ಷನ್ ಚಿತ್ರವಾಗಲಿದೆ. ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಯಶ್ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಯಶ್ 19 ನಿರ್ದೇಶಕರ ಪಟ್ಟಿಯಲ್ಲಿರುವ ಇತರ ನಿರ್ದೇಶಕರು

ಗೀತು ಮೋಹನ್ ದಾಸ್ ಜೊತೆಗೆ ಯಶ್ 19 ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ಇತರ ಹಲವು ಪ್ರಮುಖ ನಿರ್ದೇಶಕರ ಹೆಸರು ಕೇಳಿ ಬರುತ್ತಿದೆ. ಇದರಲ್ಲಿ ನಿರ್ದೇಶಕ ನರ್ತನ್ ಹೆಸರು ಕೂಡ ಇದೆ. ಈ ಹಿಂದೆ, ಮಫ್ತಿ ನಿರ್ದೇಶಕ ನರ್ತನ್ ಅವರು ಯಶ್‌ಗೆ ಸ್ಕ್ರಿಪ್ಟ್ ಅನ್ನು ವಿವರಿಸಿದ್ದಾರೆ ಎಂಬ ವದಂತಿಗಳು ಇದೆ. ಹೀಗಾಗಿ ಅವರೇ ಯಶ್ 19 ಅನ್ನು ನಿರ್ದೇಶಿಸಲಿದ್ದಾರೆ ಎಂಬ ವದಂತಿ ಕೂಡ ಇದೆ.

ಇದರ ಜೊತೆಗೆ ಈ ವರ್ಷದ ಆರಂಭದಲ್ಲಿ ತಮಿಳು ನಿರ್ದೇಶಕ ಪಿಎಸ್ ಮಿತ್ರನ್ ಅವರು ಯಶ್‌ಗೆ ಕಥೆಯನ್ನು ಹೇಳಿದ್ದಾರೆ ಎಂದು ವರದಿಯಾಗಿದೆ. ಈ ಕಥೆ ಯಶ್ ಅವರಿಗೆ ಇಷ್ಟವಾಗಿದೆ. ಇದೇ ಯಶ್ 19 ರ ಕಥೆ ಎಂಬ ವರದಿಗಳು ಇವೆ. ಆದರೆ, ರಾಕಿಂಗ್ ಸ್ಟಾರ್‌ಗೆ ಯಾರು ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದಕ್ಕೆ ಡಿಸೆಂಬರ್ 8 ರಂದು ಖಚಿತ ಮಾಹಿತಿ ತಿಳಿಯಲಿದೆ.

ಯಶ್19 ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಯಶ್19 ಸಿನಿಮಾದ ತಮ್ಮ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಜಾನ್ ವಿಕ್ ಫ್ರ್ಯಾಂಚೈಸ್‌ಗೆ ಹೆಸರುವಾಸಿಯಾಗಿರುವ ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಕೂಡ ತಮ್ಮ ತಯಾರಿಗೆ ಸಹಾಯ ನೀಡುವಂತೆ ಕೇಳಿ ಭೇಟಿಯಾಗಿದ್ದಾರೆ ಎಂದು ಈ ವರ್ಷದ ಆರಂಭದಲ್ಲಿ ವರದಿಯಾಗಿದೆ. ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಲಿದೆ ಎಂದು ಯಶ್ ಬಹಿರಂಗಪಡಿಸಿದ್ದಾರೆ.

More from Filmibeat

English summary
Who will direct Yash's new film Yash 19?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X