ಯಶ್ 19 ಆಕ್ಷನ್ ಚಿತ್ರವಲ್ಲ, ಕೆಜಿಎಫ್ ರೀತಿಯ ಸಿನಿಮಾ ಅಲ್ಲ; ಚಿತ್ರ ಹೀಗಿರಬೇಕು ಎಂಬುದು ಯಶ್ ಆಸೆ!

Yash 19 will be very different from KGF and announcement will be made at the end of April: Sources

ಚಂದನವನದಲ್ಲಿ ಸದ್ಯ ಸಿನಿ ರಸಿಕರಲ್ಲಿ ಅತಿದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿರುವುದು ಸ್ಟಾರ್ ನಟ ಯಶ್ ನಟಿಸಲಿರುವ ಮುಂದಿನ ಚಿತ್ರ ಯಾವುದು ಎಂದು. ಹೌದು, ಕೆಜಿಎಫ್ ಚಾಪ್ಟರ್ 1 ಹಾಗೂ 2 ಸಿನಿಮಾಗಳ ಮೂಲಕ ಕರ್ನಾಟಕ ಮಾತ್ರವಲ್ಲದೇ ಭಾರತ ಬಾಕ್ಸ್ ಆಫೀಸ್ ಅನ್ನೂ ಧೂಳ್ ಎಬ್ಬಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ನಿಂತಿರುವ ಯಶ್ ಮುಂದೆ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಪ್ರಶ್ನೆ ಯಶ್ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ವಿವಿಧ ಭಾಷೆಯ ಸಿನಿ ರಸಿಕರಲ್ಲಿ ಮೂಡಿದೆ.

ಅಂದ್ಹಾಗೆ ಯಶ್ ಕೆಜಿಎಫ್ ಚಿತ್ರ ಮುಗಿಯಿತು ಎಂದ ಕೂಡಲೇ ಬೇರೆ ಚಿತ್ರವೊಂದನ್ನು ಸುಲಭವಾಗಿ ಒಪ್ಪಿಕೊಂಡು ಘೋಷಣೆ ಮಾಡಲಿಲ್ಲ. ಕೆಜಿಎಫ್ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣ ತನ್ನ ಮುಂದಿನ ಚಿತ್ರವನ್ನು ಅದಕ್ಕಿಂತ ದೊಡ್ಡದಾಗಿ ಅಥವಾ ಅದೇ ಮಟ್ಟದಲ್ಲಿ ಮಾಡಬೇಕೆಂಬುದು ಯಶ್ ಯೋಜನೆ. ಹೀಗಾಗಿಯೇ ಯಶ್ ತಮ್ಮ ಮುಂದಿನ ಚಿತ್ರದ ಆಯ್ಕೆಯಲ್ಲಿ ಜಾಗರೂಕತೆ ವಹಿಸಿದ್ದಾರೆ. ಎಚ್ಚರಿಕೆಯಿಂದ ಕಥೆಯನ್ನು ಆರಿಸಿ ಕೆಜಿಎಫ್ ಸಕ್ಸಸ್ ಅನ್ನು ಮುಂದುವರಿಸುವ ಪ್ಲಾನ್ ಯಶ್ ಅವರದ್ದು.

ಇನ್ನು ಯಶ್ ಮುಂದಿನ ಚಿತ್ರವನ್ನು ನರ್ತನ್ ನಿರ್ದೇಶಿಸಲಿದ್ದಾರಂತೆ, ತೆಲುಗಿನ ಆ ನಿರ್ದೇಶಕ ನಿರ್ದೇಶಿಸಲಿದ್ದಾರಂತೆ, ತಮಿಳಿನ ಈ ದೊಡ್ಡ ನಿರ್ದೇಶಕ ನಿರ್ದೇಶಿಸಲಿದ್ದಾರಂತೆ ಎಂಬ ಸುದ್ದಿ ಹರಿದಾಡಿತ್ತು. ಅಲ್ಲದೇ ಸ್ವತಃ ಯಶ್ ಅವರೇ ತಮ್ಮ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಿಕೊಳ್ಳಲಿದ್ದಾರಂತೆ ಎಂಬ ಸುದ್ದಿಯೂ ಹರಿದಾಡಿತ್ತು ಹಾಗೂ ರಾಧಿಕಾ ಪಂಡಿತ್ ಅವರೇ ಯಶ್ ಸಿನಿಮಾದ ಮುಂದಿನ ಡೈರೆಕ್ಟರ್ ಎಂಬ ಸುದ್ದಿಯೂ ಸಹ ಹಬ್ಬಿತ್ತು.

ಹೀಗೆ ನಾನಾ ಅಂತೆ ಕಂತೆ ಸುದ್ದಿಗಳು ಹರಿದಾಡಿದರೂ ಸಹ ಯಾವುದೂ ಇಲ್ಲಿಯವರೆಗೆ ನಿಜವಾಗಿಲ್ಲ. ಈ ವರ್ಷ ಯಶ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಘೋಷಣೆ ಪಕ್ಕಾ ಎನ್ನಲಾಗಿತ್ತು. ಆದರೆ ಈ ಕುರಿತು ಪ್ರತಿಕ್ರಿಯಿಸಿದ್ದ ಯಶ್ ಚಿತ್ರವನ್ನು ಆದಷ್ಟು ಬೇಗ ಘೋಷಿಸಲಿದ್ದೇನೆ, ಸ್ವಲ್ಪ ತಾಳ್ಮೆಯಿಂದಿರಿ ಎಂದು ಪತ್ರವೊಂದನ್ನು ಬರೆದು ಅಭಿಮಾನಿಗಳಿಗೆ ತಿಳಿಸಿದ್ದರು. ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು ದೊಡ್ಡದಾಗಿ ಚಿತ್ರ ಮಾಡಲಿದ್ದೇನೆ, ಹಾಗಾಗಿ ತಡವಾಗ್ತಿದೆ ಎಂದು ಯಶ್ ಆ ಪೋಸ್ಟ್‌ನಲ್ಲಿ ಪರೋಕ್ಷವಾಗಿ ತಿಳಿಸಿದ್ದರು.

ಅದರಂತೆ ಇದೀಗ ಯಶ್ ಮುಂದಿನ ಚಿತ್ರ ಯಾವಾಗ ಘೋಷಣೆಯಾಗಲಿದೆ ಎಂಬುದರ ಕುರಿತಾಗಿ ಹೊಸ ಸುದ್ದಿಯೊಂದು ಹೊರಬಿದ್ದಿದ್ದು, ಬಾಲಿವುಡ್ ಹಂಗಾಮಾ ವೆಬ್ ತಾಣ ಈ ಸುದ್ದಿಯನ್ನು ಹೊರಹಾಕಿದೆ. ಯಶ್ ಆಪ್ತ ವಲಯದ ಜತೆ ಮಾತನಾಡಿ ಯಶ್ ಮುಂದಿನ ಚಿತ್ರ ಯಾವಾಗ ಘೋಷಣೆಯಾಗಲಿದೆ ಎಂಬುದನ್ನು ತಿಳಿಸಿದೆ ಹಾಗೂ ಚಿತ್ರ ಯಾವ ರೀತಿ ಇರಲಿದೆ ಎಂಬುದನ್ನೂ ಸಹ ಬಿಚ್ಚಿಟ್ಟಿದೆ.

ಈ ಕುರಿತಾಗಿ ಸುದ್ದಿ ಪ್ರಕಟಿಸಿರುವ ಬಾಲಿವುಡ್ ಹಂಗಾಮಾ ಯಶ್ ಆಪ್ತ ವಲಯವನ್ನು ಸಂಪರ್ಕಿಸಿದಾಗ ಸದ್ಯ ಯಶ್ ಅವರು ಲಂಡನ್‌ನಲ್ಲಿ ಕುಟುಂಬದ ಜತೆ ಸಮಯ ಕಳೆಯುತ್ತಿದ್ದಾರೆ, ಯಶ್ ಒಮ್ಮೆ ಲಂಡನ್‌ನಿಂದ ಬಂದ ಬಳಿಕ ಕೆಲವೇ ವಾರಗಳಲ್ಲಿ ಯಶ್ ಮುಂದಿನ ಚಿತ್ರ ಘೋಷಣೆಯಾಗಲಿದೆ ಎಂದು ತಿಳಿಸಿದೆ.

ಅಲ್ಲದೇ ಯಶ್ ಯಾವ ರೀತಿಯ ಸಿನಿಮಾ ಮಾಡಬೇಕೆಂಬ ಆಸೆ ಹೊಂದಿದ್ದಾರೆ ಎಂಬುದನ್ನೂ ಸಹ ಈ ಸುದ್ದಿಯಲ್ಲಿ ಉಲ್ಲೇಖಿಸಲಾಗಿದೆ. ಯಶ್ ಆಪ್ತ ವಲಯ ಬಾಲಿವುಡ್ ಹಂಗಾಮಾಗೆ ಯಶ್ ಸಂಪೂರ್ಣವಾಗಿ ಕೆಜಿಎಫ್ ಯೂನಿವರ್ಸ್‌ನಿಂದ ಹೊರಬಂದು ಸಿನಿಮಾ ಮಾಡಬೇಕು ಎಂದು ಕೊಂಡಿದ್ದಾರೆ, ಅವರ ಮುಂದಿನ ಚಿತ್ರ ಈ ಬಾರಿ ಆಕ್ಷನ್ ಸಿನಿಮಾವಾಗಿರುವುದಿಲ್ಲ, ಅದರಲ್ಲಿಯೂ ಕೆಜಿಎಫ್ ರೀತಿ ಇರುವುದೇ ಇಲ್ಲ, ಆದರೆ ಕೊಂಚ ಮಟ್ಟದ ಆಕ್ಷನ್ ಇರುತ್ತೆ, ಇಲ್ಲವಾದರೆ ಅವರ ಅಭಿಮಾನಿಗಳು ಬೇಸರಗೊಳ್ಳುತ್ತಾರೆ, ಆದರೆ ಈ ಚಿತ್ರ ಕೆಜಿಎಫ್‌ಗಿಂತ ಎಲ್ಲಾ ಆಯಾಮದಲ್ಲೂ ತುಂಬಾ ವಿಭಿನ್ನವಾಗಿರಲಿದೆ ಎಂದು ತಿಳಿಸಿದೆ.

ಇನ್ನು ಈ ಚಿತ್ರವನ್ನು ಯಶ್ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಘೋಷಣೆ ಮಾಡಲಿದ್ದಾರೆ ಎಂದು ಸಹ ಬಾಲಿವುಡ್ ಹಂಗಾಮಾ ತಿಳಿಸಿದೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ ಆಗಿದ್ದು ಯಶ್ 19 ಚಿತ್ರಕ್ಕೆ ಆಕ್ಷನ್ ಕಟ್ ಹೇಳುವವರು ಯಾರು, ಯಾವ ರೀತಿಯ ಚಿತ್ರ ಎಂಬ ಕುತೂಹಲ ಸದ್ಯ ಅಭಿಮಾನಿಗಳಲ್ಲಿ ಮೂಡಿದೆ.

More from Filmibeat

English summary
Yash 19 will be very different from KGF and announcement will be made at the end of April: Sources
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X