ಅಪ್ಪ ಯಶ್ ಗೆ ಬರ್ತಡೇ ಸರ್ಪ್ರೈಸ್: ಅಮ್ಮನೊಂದಿಗೆ ಕೇಕ್ ತಯಾರಿಸಿದ ಪುಟಾಣಿ ಆಯ್ರಾ
Recommended Video
ಇವತ್ತು ರಾಕಿಂಗ್ ಹಬ್ಬ. ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಗಂತೂ ಇಂದು ಸಂಭ್ರಮದ ಹಬ್ಬ. ಯಾಕಂದ್ರೆ, ಇವತ್ತು ರಾಕಿ ಭಾಯ್ ಯಶ್ ಹುಟ್ಟುಹಬ್ಬ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ, ಅಷ್ಟೇ ಸ್ಟೈಲ್ ನಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ.
ಯಶ್ ಹುಟ್ಟುಹಬ್ಬದ ಪ್ರಯುಕ್ತ 'ಕೆ.ಜಿ.ಎಫ್' ಸೆಕೆಂಡ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ದಾಖಲೆ ಎತ್ತರದ ಕಟೌಟ್ ನಿಲ್ಲಿಸಲಾಗಿದೆ. 5000 ಕೆ.ಜಿ ತೂಕದ ಕೇಕ್ ತಯಾರು ಮಾಡಲಾಗಿದೆ.
ಇವೆಲ್ಲದಕ್ಕಿಂತ ಸೂಪರ್ ಸ್ಪೆಷಲ್ ಮತ್ತು ಕ್ಯೂಟ್ ಅಂತ ಅನಿಸಿರುವುದು ಯಶ್ ಮನೆಯಲ್ಲಿ ರೆಡಿಯಾದ ಪುಟ್ಟ ಕೇಕ್. ಅಮ್ಮ ಮತ್ತು ಮಗಳು ಸೇರಿಕೊಂಡು ಯಶ್ ಗೆ ಸರ್ಪ್ರೈಸ್ ಕೊಡುವ ಸಲುವಾಗಿ ಏನೆಲ್ಲಾ ಮಾಡಿದ್ರು ಅಂತ ವಿವರವಾಗಿ ಹೇಳ್ತೀವಿ, ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಕೇಕ್ ಬೇಕ್ ಮಾಡಿದ ಪತ್ನಿ ರಾಧಿಕಾ ಪಂಡಿತ್
ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಯಶ್ ಮತ್ತು ರಾಧಿಕಾ ಪಂಡಿತ್ ಪ್ರೀತಿಸಿ, ಮದುವೆ ಆದವರು. ಲವ್ ಮಾಡುತ್ತಿದ್ದ ಸಮಯದಲ್ಲಿ ಯಶ್ ಜನ್ಮದಿನದಂದು ಮೊದಲು ವಿಶ್ ಮಾಡುತ್ತಿದ್ದವರು ರಾಧಿಕಾ ಪಂಡಿತ್. ಹಾಗೇ, ಯಶ್ ಬರ್ತಡೇ ಗಾಗಿ ಪ್ರತಿ ವರ್ಷ ಮನೆಯಲ್ಲಿ ಕೇಕ್ ಬೇಕ್ ಮಾಡುವ ಜವಾಬ್ದಾರಿ ರಾಧಿಕಾ ಪಂಡಿತ್ ರದ್ದೇ. ಈ ವರ್ಷ ಕೂಡ ಯಶ್ ಬರ್ತಡೇ ಗಾಗಿ ಪತ್ನಿ ರಾಧಿಕಾ ಪಂಡಿತ್ ಕೇಕ್ ಬೇಕ್ ಮಾಡಿದ್ದಾರೆ.

ಅಮ್ಮನಿಗೆ ಸಹಾಯ ಮಾಡಿದ ಮುದ್ದು ಪುಟಾಣಿ ಆಯ್ರಾ
ಯಶ್ ಹುಟ್ಟುಹಬ್ಬಕ್ಕಾಗಿ ರಾಧಿಕಾ ಪಂಡಿತ್ ಕೇಕ್ ತಯಾರು ಮಾಡುತ್ತಿದ್ದರೆ, ಪಕ್ಕದಲ್ಲೇ ಇದ್ದ ಪುತ್ರಿ ಆಯ್ರಾ ಅಮ್ಮನಿಗಾಗಿ ಸಹಾಯ ಮಾಡುತ್ತಿದ್ದಳು. ಅಲ್ಲಿಗೆ, ಈ ವರ್ಷದ ಯಶ್ ಬರ್ತಡೇ ಕೇಕ್ ಸಿಕ್ಕಾಪಟ್ಟೆ ಸ್ಪೆಷಲ್ ಅಂತಲೇ ಲೆಕ್ಕ ಅಲ್ಲವೇ.?!

ತಿಂದಿದ್ದೇ ಹೆಚ್ಚು.!
ತಾಯಿ ರಾಧಿಕಾ ಪಂಡಿತ್ ಕೇಕ್ ಮಾಡುವಾಗ, ಸಹಾಯ ಮಾಡಿದ್ದಕ್ಕಿಂತ ಚಾಕಲೇಟ್ ಸಿರಪ್, ಕ್ರೀಮ್ ನೆಲ್ಲಾ ಆಯ್ರಾ ತಿಂದಿದ್ದೇ ಹೆಚ್ಚು. ''ಆದರೂ ಆಕೆಯ ಪ್ರಯತ್ನವನ್ನ ಮೆಚ್ಚಲೇಬೇಕು'' ಎಂದು ಖುಷಿ ಪಟ್ಟಿದ್ದಾರೆ ರಾಧಿಕಾ ಪಂಡಿತ್.

ಅಪ್ಪನಿಗೆ ವಿಶ್ ಮಾಡಿದ ಮಗಳು.!
''ಎ ವೆರಿ ಹ್ಯಾಪಿ ಬರ್ತಡೇ. ಹ್ಯಾಪಿ ಬರ್ತಡೇ ಟು ಡಾಡಾ'' ಅಂತ ರಾಧಿಕಾ ಪಂಡಿತ್ ಹೇಳಿದರೆ, ಆಯ್ರಾ ''ಡಾಡಾ'' ಅಂತ ಮುದ್ದು ಮುದ್ದಾಗಿ ಆಗಿ ಹೇಳಿದ್ದಾಳೆ. ತಂದೆ ಯಶ್ ಗೆ ಇದಕ್ಕಿಂತ ಬೆಸ್ಟ್ ವಿಶ್ ಬೇಕಾ.?

ಕೇಕ್ ಸಿಗುತ್ತೋ, ಇಲ್ವೋ ಗೊತ್ತಿಲ್ಲ.!
ಅದಾಗಲೇ ಕೇಕ್ ನ ಆಯ್ರಾ ತಿನ್ನುತ್ತಿದ್ದರಿಂದ, ''ನಿಮಗೆ (ಯಶ್) ಕೇಕ್ ಸಿಗುತ್ತೋ, ಇಲ್ವೋ ಗೊತ್ತಿಲ್ಲ. ಆದರೂ ಪ್ರೀತಿಯಿಂದ ಮಾಡಿರೋದಕ್ಕೆ ಒಂದು ಸ್ಮಾಲ್ ಪೀಸ್ ಎತ್ತಿಟ್ಟಿರುವೆ, ನಿಮಗೋಸ್ಕರ'' ಎಂದಿದ್ದಾರೆ ರಾಧಿಕಾ ಪಂಡಿತ್.

ಯಶ್ ಹಂಚಿಕೊಂಡ ವಿಡಿಯೋ
ಯಶ್ ಜನ್ಮದಿನದ ಪ್ರಯುಕ್ತ ರಾಧಿಕಾ ಪಂಡಿತ್ ಮತ್ತು ಪುತ್ರಿ ಆಯ್ರಾ ಕೇಕ್ ತಯಾರು ಮಾಡುತ್ತಿದ್ದ ವಿಡಿಯೋನ ಖುದ್ದು ರಾಧಿಕಾ ಪಂಡಿತ್, ಯಶ್ ರವರ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹಂಚಿ, ಪತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಸಿಕ್ಕಾಪಟ್ಟೆ ಕ್ಯೂಟ್ ಆಗಿರುವ ಈ ವಿಡಿಯೋ ಈಗ ವೈರಲ್ ಆಗಿದೆ.


Click it and Unblock the Notifications











