For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಯಶ್ ಬಾಯಿಂದ ಬಂದ ಬೆಂಕಿಯುಂಡೆಗಳಿವು.!

  |
  KGF 2 ಡೈಲಾಗ್ ಕೇಳಿದ ಅಭಿಮಾನಿಗಳು ಪುಲ್ ಖುಷ್

  'ಕೆ.ಜಿ.ಎಫ್' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ 'ಸ್ಟಾರ್' ಆದ ಯಶ್ ಇಂದು ಹುಟ್ಟುಹಬ್ಬ ಸಂಭ್ರಮದಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಇವತ್ತು ತಮ್ಮ 34ನೇ ಜನ್ಮದಿನವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ.

  ಅಭಿಮಾನಿಗಳಂತೂ ತಮ್ಮ ಇಷ್ಟದ ನಟನ ಬರ್ತಡೇಯನ್ನ ದೊಡ್ಡ ಹಬ್ಬದಂತೆ ಆಚರಿಸುತ್ತಿದ್ದಾರೆ. ಯಶ್ ಹುಟ್ಟುಹಬ್ಬಕ್ಕಾಗಿ ಬೆಂಗಳೂರಿನ ನಾಯಂಡಹಳ್ಳಿ ಬಳಿ ಇರುವ ನಂದಿ ಲಿಂಕ್ ಗ್ರೌಂಡ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಯಶ್ ರವರ ಬೃಹತ್ ಕಟೌಟ್ ನಿಲ್ಲಿಸಿ, 5000 ಕೆ.ಜಿ ತೂಕದ ಕೇಕ್ ತಯಾರಿಸಿ ಫ್ಯಾನ್ಸ್ ಗ್ರ್ಯಾಂಡ್ ಆಗಿ 'ರಾಕಿಂಗ್ ಹಬ್ಬ' ಮಾಡುತ್ತಿದ್ದಾರೆ.

  ಯಶ್ ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತ, ರಾಕಿಂಗ್ ಸ್ಟಾರ್ ಯಶ್ ರವರ ಟಾಪ್ ಡೈಲಾಗ್ ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಬೆಳ್ಳಿತೆರೆ ಮೇಲೆ ಯಶ್ ಬಾಯಿಂದ ಬಂದ ಬೆಂಕಿಯುಂಡೆಗಳು ಇಲ್ಲಿವೆ, ನೋಡಿ ಒಂದ್ ಶಿಳ್ಳೆ ಹೊಡೆಯಿರಿ...

  'ರಾಜಾಹುಲಿ' ಚಿತ್ರದ ಡೈಲಾಗ್ಸ್

  'ರಾಜಾಹುಲಿ' ಚಿತ್ರದ ಡೈಲಾಗ್ಸ್

  * ''ಅಣ್ತಮ್ಮ, ಇಲ್ಲಿ ಯಾರು ಹೀರೋಗಳನ್ನ ಹುಟ್ಹಾಕಲ್ಲ. ನಮಗೆ ನಾವೇ ಹೀರೋ ಆಗ್ಬೇಕು'',

  * ''ಹೀರೋಗಳು ಯಾವತ್ತಿದ್ರೂ ಲೇಟಾಗಿ, ಲೇಟೆಸ್ಟ್ ಆಗಿ ಎಂಟ್ರಿಕೊಡ್ಬೇಕು''

  * ''ಕಾಲೆಳೆಯೋರು ಯಾವತ್ತಿದ್ರೂ ಕಾಲು ಕೆಳಗಿರ್ತಾರೆ, ಪ್ರೀತಿ ಅಭಿಮಾನ ಇಟ್ಟಿರುವ ಜನರು ಹೃದಯದಲ್ಲಿರುತ್ತಾರೆ''

  ಅಪ್ಪ ಯಶ್ ಗೆ ಬರ್ತಡೇ ಸರ್ಪ್ರೈಸ್: ಅಮ್ಮನೊಂದಿಗೆ ಕೇಕ್ ತಯಾರಿಸಿದ ಪುಟಾಣಿ ಆಯ್ರಾಅಪ್ಪ ಯಶ್ ಗೆ ಬರ್ತಡೇ ಸರ್ಪ್ರೈಸ್: ಅಮ್ಮನೊಂದಿಗೆ ಕೇಕ್ ತಯಾರಿಸಿದ ಪುಟಾಣಿ ಆಯ್ರಾ

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಡೈಲಾಗ್ಸ್

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಡೈಲಾಗ್ಸ್

  * ''ಸುನಾಮಿ, ಸುಂಟರಗಾಳಿ, ಬಿರುಗಾಳಿ ಎಲ್ಲಾ ಯಾವಾಗಲೋ ಒಂದು ಸಾರಿ ಬರೋದು. ಅದು ಬರುವಾಗ ಒಂದು ಭಯ ಇರುತ್ತೆ. ಬಂದು ಹೋದ ಮೇಲೆ ಅದರ ಹವಾ ಇರುತ್ತೆ.''

  * ''ನಾನ್ ಬರೋವರೆಗೂ ಮಾತ್ರ ಬೇರೆಯವರ ಹವಾ. ಬಂದ ಮೇಲೆ ನಂದೇ ಹವಾ.''

  * ''ಧಮ್ ಹೊಡೆಯೋಕೆ ಧಮ್ ಇದೆ. ಅವರನ್ನ ಫೇಸ್ ಮಾಡೋಕೆ ಧಮ್ ಇಲ್ವಾ.?''

  * ''ಅವಳನ್ನ ಪ್ರೀತಿಸೋನು ನಾನೇ.. ರೇಗಿಸುವವನು ನಾನೇ.. ರಾಮಾಚಾರಿನೂ ನಾನೇ.. ಜಲೀಲನೂ ನಾನೇ..''

  ದಾಖಲೆಗಳ ನಡುವೆ ಹುಟ್ಟುಹಬ್ಬ ಆಚರಿಸಿದ 'ಕೆಜಿಎಫ್' ಕಿಂಗ್ದಾಖಲೆಗಳ ನಡುವೆ ಹುಟ್ಟುಹಬ್ಬ ಆಚರಿಸಿದ 'ಕೆಜಿಎಫ್' ಕಿಂಗ್

  'ಮಾಸ್ಟರ್ ಪೀಸ್' ಚಿತ್ರದ ಡೈಲಾಗ್ಸ್

  'ಮಾಸ್ಟರ್ ಪೀಸ್' ಚಿತ್ರದ ಡೈಲಾಗ್ಸ್

  * ''ಯಾವ ಫೀಲ್ಡ್ ಮೇಲೂ ಯಾವನ ಹೆಸರೂ ಪರ್ಮನೆಂಟ್ ಆಗಿ ಕೆತ್ತಿರಲ್ಲ. ಯಾವನ್ ಅಖಾಡಕ್ಕೆ ಇಳಿದು ತೊಡೆ ತಟ್ಟಿ ನಿಲ್ತಾನೋ, ಅವನದ್ದೇ ಫೀಲ್ಡು, ಅವನದ್ದೇ ಶೀಲ್ಡು''

  ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ

  'ಗಜಕೇಸರಿ' ಚಿತ್ರದ ಡೈಲಾಗ್ಸ್

  'ಗಜಕೇಸರಿ' ಚಿತ್ರದ ಡೈಲಾಗ್ಸ್

  * ''ಒಬ್ಬ ತಂದೆ ಮನಸ್ಸು ಮಾಡಿದರೆ, ಅವನ ಮಗನನ್ನು ಸರಿ ಮಾಡಬಹುದು. ಒಬ್ಬ ಗುರು ಮನಸ್ಸು ಮಾಡಿದರೆ, 50 ಜನ ವಿದ್ಯಾರ್ಥಿಗಳನ್ನು ಸರಿ ಮಾಡಬಹುದು. ಅದೇ ಒಬ್ಬ ಡಿಸಿ ಮನಸ್ಸು ಮಾಡಿದರೆ, ಇಡೀ ಜಿಲ್ಲೆಯನ್ನೇ ಸರಿ ಮಾಡಬಹುದು''

  * ''ಇಡೀ ಸರ್ಕಾರವೇ ತಿರುಗಿಬಿದ್ದರೂ, ನಾನು ನನ್ನ ಜನರ ಪರವಾಗಿ ಹೋರಾಡುತ್ತೇನೆ. ಪ್ರಾಣ ಹೋದರೂ ನನ್ನನ್ನು ನಂಬಿದವರನ್ನು ಕೈ ಬಿಡಲ್ಲ''

  'ಸಂತು ಸ್ಟ್ರೈಟ್ ಫಾರ್ವರ್ಡ್' ಡೈಲಾಗ್ಸ್

  'ಸಂತು ಸ್ಟ್ರೈಟ್ ಫಾರ್ವರ್ಡ್' ಡೈಲಾಗ್ಸ್

  * ''ದೊಡ್ಡವರನ್ನು ಟಚ್ ಮಾಡೋದೇ ತಪ್ಪು. ಒಂದು ವೇಳೆ ಟಚ್ ಮಾಡಿದ್ರೂ, ಅದು ಅವರ ಕಾಲು ಆಗಿರಬೇಕು. ಕಾಲರ್ ಅಲ್ಲ''

  * ''ನುಗ್ಗೋ ಬುಲೆಟ್ ಗೆ ಎದುರುಗಡೆ ಯಾವನಿದ್ರೇನು.? ನುಗ್ತಾ ಇರೋದೇ, ಎದೆ ಸೀಳ್ತಾ ಇರೋದೇ.!''

  * ''ಕೋಟೆ ಕಟ್ಟಿ ಮೆರೆದವ್ರೇ ಮಣ್ಣಲ್ಲಿ ಮಣ್ಣು ಆಗಿ ಹೋದ್ರು. ಇನ್ ನೀನ್ಯಾವನೋ..''

  * ''ಹಿರಿಯರಿಗೆ ಗೌರವಿಸುತ್ತಾ, ಕಿರಿಯರಿಗೆ ಪ್ರೋತ್ಸಾಹಿಸುತ್ತಾ, ನಂಬಿದವರನ್ನು ಪ್ರೀತಿಸುತ್ತಾ ಬದುಕುವುದು ಕಲಿ''

  * ''ಕಂದಾ ಸ್ಟ್ರೈಟ್ ಆಗಿ ಒಂದು ಮಾತು ಹೇಳ್ತೀನಿ ಕೇಳು.. ಪಾಪ ಮಾಡಿ ಶಾಪ ಹಾಕಿಸಿಕೊಂಡು ಬದುಕುತ್ತಿರೋ ನೀನೇ ಇಲ್ಲಿಯವರೆಗೂ ಬಂದಿರಬೇಕಾದ್ರೆ, ಇನ್ನು ಆಶೀರ್ವಾದ ತಗೊಂಡು ಬದುಕ್ತೀರೋ ನಾನು ಯಾವ ರೇಂಜಿಗೆ ಹೋಗಬಹುದು ಅಂತ ಯೋಚನೆ ಮಾಡು''

  'ಕೆ.ಜಿ.ಎಫ್' ಚಿತ್ರದ ಡೈಲಾಗ್ಸ್

  'ಕೆ.ಜಿ.ಎಫ್' ಚಿತ್ರದ ಡೈಲಾಗ್ಸ್

  * ''ಎದೆಯಲ್ಲಿ ಕಲ್ಲು ಇದ್ದೋನಿಗೆ ರಕ್ತ ಅಂಟಲ್ಲ''

  * ''ಗಾಯಗೊಂಡಿರುವ ಸಿಂಹದ ಉಸಿರು, ಘರ್ಜನೆಗಿಂತ ಭಯಂಕರವಾಗಿರುತ್ತದೆ''

  * ''ಇಫ್ ಯು ಆರ್ ಬ್ಯಾಡ್.. ಐ ಆಮ್ ಯುವರ್ ಡ್ಯಾಡ್''

  * ''ಜೀವನದಲ್ಲಿ ಭಯ ಇರ್ಬೇಕು, ಭಯ ಗುಂಡಿಗೆಯಲ್ಲಿ ಇರ್ಬೇಕು, ಆದರೆ ಆ ಗುಂಡಿಗೆ ನಮ್ಮದಲ್ಲ. ನಮ್ ಎದುರುಗಡೆ ಇರೋನ್ದು ಆಗಿರ್ಬೇಕು''

  * ''ಒಂದು ಹೊಡೆದಾಟದಲ್ಲಿ ಯಾರು ಮೊದಲು ಹೊಡೆದರು ಅನ್ನೋದು ಲೆಕ್ಕಕ್ಕೆ ಬರಲ್ಲ. ಯಾವನ್ ಮೊದ್ಲು ಕೆಳಗ್ ಬಿದ್ದ ಅನ್ನೋದೇ ಲೆಕ್ಕಕ್ಕೆ ಬರೋದು''

  * ''ಯಾರೋ ಹತ್ತು ಜನನ್ನ ಹೊಡೆದು, ಡಾನ್ ಆದವನಲ್ಲಾ ಕಣೋ ನಾನು. ನಾನು ಹೊಡೆದಿರೋ ಹತ್ತು ಜನನೂ ಡಾನೇ.!''

  * ''ಪ್ರಪಂಚದಲ್ಲೇ ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ''

  English summary
  Yash 34th birthday: Here is the list of Top Dialogues of Rocking Star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X