Don't Miss!
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ಯಶ್ ಬಾಕ್ಸಾಫೀಸ್ ಸುಲ್ತಾನ್ ಎಂದ ಹೊಂಬಾಳೆ: ತಿರುಗಿಬಿದ್ದ ದರ್ಶನ್ ಫ್ಯಾನ್ಸ್
ಸ್ಯಾಂಡಲ್ವುಡ್ನಲ್ಲಿ ಫ್ಯಾನ್ಸ್ ವಾರ್ ಹೊಸತೇನಲ್ಲ. ಒಂದು ಚಿಕ್ಕ ಕಾರಣವಿದ್ದರೂ ಸೂಪರ್ಸ್ಟಾರ್ ಅಭಿಮಾನಿಗಳು ಅಖಾಡಕ್ಕೆ ಇಳಿದುಬಿಡುತ್ತಾರೆ. ಅದರಲ್ಲೂ ಟೈಟಲ್ ವಿಚಾರಕ್ಕೆ ಸೂಪರ್ಸ್ಟಾರ್ ಅಭಿಮಾನಿಗಳ ನಡುವೆ ಬೇಜಾನ್ ಫ್ಯಾನ್ಸ್ ವಾರ್ ಈ ಹಿಂದೆ ನಡೆದು ಹೋಗಿದೆ. ಅದರಲ್ಲೂ ಬಾಸ್ ಟೈಟಲ್ಗೆ ಅಭಿಮಾನಿಗಳ ನಡುವೆ ವಾಗ್ವಾದ ನಡೆದಿದ್ದೇ ಹೆಚ್ಚು.
ಇಷ್ಟು ದಿನ ಬಾಸ್ ಟೈಟಲ್ಗಾಗಿ ಕಿತ್ತಾಡಿದ್ದ ಸೂಪರ್ಸ್ಟಾರ್ ಅಭಿಮಾನಿಗಳು ಈಗ 'ಬಾಕ್ಸಾಫೀಸ್ ಸುಲ್ತಾನ್' ಟೈಟಲ್ಗಾಗಿ ಅಖಾಡಕ್ಕಿಳಿದಿದ್ದಾರೆ. ಈ ಟೈಟಲ್ಗಾಗಿ ಸೋಶಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫೈಟ್ ನಡೆಯುತ್ತಿದೆ.
ಶಿವಮೊಗ್ಗದ
ಸಹ್ಯಾದ್ರಿ
ಕಾಲೇಜಿನಲ್ಲಿ
ಅತಿಥಿಯಾಗಿ
ಹೋಗಿದ್ದ
ಯಶ್:
ಆ
ದಿನ
ನೆನೆದ
ಹಳೇ
ವಿದ್ಯಾರ್ಥಿ!
'ಕೆಜಿಎಫ್ 2' ವಿಶ್ವದ ಮೂಲೆ ಮೂಲೆಯಲ್ಲೂ ಘರ್ಜಿಸುತ್ತಿರುವ ಬೆನ್ನಲ್ಲೇ 25 ದಿನಗಳನ್ನು ಪೂರೈಸಿತ್ತು. ಈ ಸಂಭ್ರಮದಲ್ಲಿದ್ದ ಹೊಂಬಾಳೆ ಫಿಲ್ಮ್ಸ್ ಒಂದು ಟ್ವೀಟ್ ಮಾಡಿತ್ತು. ಆ ಟ್ವೀಟ್ ನೋಡಿದ ಬಳಿಕ ದರ್ಶನ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲ್ಮ್ಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ಈಗ ಫ್ಯಾನ್ ವಾರ್ ಆಗಿ ಬದಲಾಗುತ್ತಿದೆ.
25ನೇ
ದಿನಕ್ಕೆ
ರಾಜಮೌಳಿಯ
RRR
ಕಲೆಕ್ಷನ್ಗೆ
ಸೆಡ್ಡು
ಹೊಡೆದ
'KGF
2':
ಗಳಿಕೆ
ಬೇಟೆ
ಇನ್ನೂ
ನಿಂತಿಲ್ಲ!
|
ಬಾಕ್ಸಾಫೀಸ್ ಸುಲ್ತಾನ್ ಯಾರು?
ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ವಿಶ್ವದಾದ್ಯಂತ ಬಾಕ್ಸಾಫೀಸ್ನಲ್ಲಿ ಸಾವಿರ ಕೋಟಿ ಲೂಟಿ ಮಾಡಿದ್ದು, 1200 ಕೋಟಿಯತ್ತ ಮುನ್ನುಗ್ಗುತ್ತಿದೆ. ಈ ಬೆನ್ನಲ್ಲೇ ಮೇ 9ರಂದು 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿತ್ತು. ಹೀಗಾಗಿ 'ಕೆಜಿಎಫ್ 2' ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿ, ಯಶ್ ಬಾಕ್ಸಾಫೀಸ್ ಸುಲ್ತಾನ್ ಎಂದು ಹೇಳಿತ್ತು. ಈ ಟ್ವೀಟ್ ಹೊರಬೀಳುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೆರಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೊಂಬಾಳೆ ಫಿಲ್ಮ್ಸ್ ವಿರುದ್ಧ ತಿರುಗಿಬಿದ್ದಿದ್ದಾರೆ.

ರೊಚ್ಚಿಗೆದ್ದ ದರ್ಶನ್ ಫ್ಯಾನ್ಸ್!
ಹೊಂಬಾಳೆ ವಿರುದ್ಧ ದರ್ಶನ್ ಫ್ಯಾನ್ಸ್ ಕಿಡಿಕಾರುತ್ತಿದ್ದಾರೆ. 'ಯಜಮಾನ' ಸಿನಿಮಾದ ಡೈಲಾಗ್ ಬಿಟ್ಟು ಆಕ್ರೋಶ ಹೊರ ಹಾಕಿದ್ದಾರೆ. " ಬಜಾರ್ನಲ್ಲಿ ತುಂಬಾ ಜನ ನಾನೇ ಸುಲ್ತಾನ.. ನಾನೇ ಸುಲ್ತಾನ ಅಂತ ಓಡುತ್ತಿರುತ್ತಾರೆ. ಆದರೆ, ಒರಿಜಿನಲ್ ಸುಲ್ತಾನ, ಎಲ್ಲರನ್ನೂ ಓಡಾಡಿಸಿಕೊಂಡು, ಆಟ ನೋಡಿಕೊಂಡು ನಿಂತಿರುತ್ತಾನೆ." ಅಂತ ಡೈಲಾಗ್ ಬಿಟ್ಟಿದ್ದಾರೆ. ಇನ್ನೊಂದು ಕಡೆ ಬಾಕ್ಸಾಫೀಸ್ ಸುಲ್ತಾನ ಯಾರು ಅಂತ ಎಲ್ಲರಿಗೂ ಗೊತ್ತು. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಬಳಿ ಕೇಳುವಂತೆ ಹೊಂಬಾಳೆಗೆ ಟಾಂಗ್ ಕೊಟ್ಟಿದ್ದಾರೆ.

ಯಶ್ ಫ್ಯಾನ್ಸ್ ಗರಂ
ಹೊಂಬಾಳೆ ಫಿಲ್ಮ್ಸ್ ಯಶ್ ಬಾಕ್ಸಾಫೀಸ್ ಸುಲ್ತಾನ್ ಅಂತ ಟ್ವೀಟ್ ಮಾಡುತ್ತಿದ್ದಂತೆ ದರ್ಶನ್ ಫ್ಯಾನ್ಸ್ ಕಿಡಿಕಾರಿದ್ದರು. ಜೊತೆ ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ ಅನ್ನು ನಿಂದಿಸುವಂತೆ ಕೆಲವರು ಟ್ವೀಟ್ ಮಾಡಿದ್ದರು. ಇದರಿಂದ ರೊಚ್ಚಿಗೆ ಯಶ್ ಅಭಿಮಾನಿಗಳು ಅಖಾಡಕ್ಕಿಳಿಯುತ್ತಿದ್ದಾರೆ. ಯಶ್ ಯಶಸ್ಸು ಕಂಡು ದರ್ಶನ್ ಅಭಿಮಾನಿಗಳಿಗೆ ತಡೆಯೋಕೆ ಆಗುತ್ತಿಲ್ಲ. ಅದಕ್ಕೆ ಹೀಗೆ ಟ್ವೀಟ್ ಮಾಡುತ್ತಿದ್ದಾರೆಂದು ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರಂತೂ ಫೋಟೊಗಳನ್ನು ಎಡಿಟ್ ಮಾಡಿ ಟ್ವೀಟ್ ಮಾಡುತ್ತಿದ್ದಾರೆ.

ಬಾಕ್ಸಾಫೀಸ್ ಸುಲ್ತಾನ್ ಯಾರು?
ಸ್ಯಾಂಡಲ್ವುಡ್ನಲ್ಲಿ 'ಬಾಕ್ಸಾಫೀಸ್ ಸುಲ್ತಾನ್' ಟೈಟಲ್ಗಾಗಿ ಆಗಾಗಾ ಫ್ಯಾನ್ಸ್ ವಾರ್ ನಡೆಯುತ್ತಲೇ ಇರುತ್ತೆ. ಯಶ್ ಹಾಗೂ ದರ್ಶನ್ ಅಭಿಮಾನಿಗಳು ಈ ಟೈಟಲ್ಗಾಗಿ ವಾಗ್ಯುದ್ಧ ನಡೆಸುತ್ತಲೇ ಇರುತ್ತಾರೆ. ಈ ಹಿಂದೆ ತಮ್ಮ ತಮ್ಮ ಸಿನಿಮಾಗಳಲ್ಲಿ ಡೈಲಾಗ್ ಬಿಟ್ಟು ಟಾಂಗ್ ಕೊಡುತ್ತಿದ್ದರು. ಆದ್ರೀಗ ಡೈಲಾಗ್ ವಾರ್ ನಿಂತಿದ್ದೆ. ಯಶ್ ಹಾಗೂ ದರ್ಶನ್ ಇಬ್ಬರೂ ಬಾಕ್ಸಾಫೀಸ್ ಸುಲ್ತಾನ್ ಅಂತ ಪ್ರೂವ್ ಆಗಿದೆ. ನಿನ್ನೆ (ಮೇ 10) 'ಒರಿಜಿನಲ್ ಬಾಕ್ಸಾಫೀಸ್ ಸುಲ್ತಾನ್' ಅಂತ ಟ್ರೆಂಡಿಂಗ್ ಆಗುತ್ತಿದೆ. ಈ ಕಾರಣಕ್ಕೆ 'ಬಾಕ್ಸಾಫೀಸ್ ಸುಲ್ತಾನ್' ಟೈಟಲ್ ಬಗ್ಗೆ ಇಬ್ಬರ ಅಭಿಮಾನಿಗಳು ಯಾವ ನಿರ್ಧಾರಕ್ಕೆ ಬರುತ್ತಾರೆ ಅನ್ನೋದೇ ಸದ್ಯದ ಪ್ರಶ್ನೆ.