For Quick Alerts
  ALLOW NOTIFICATIONS  
  For Daily Alerts

  'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ನಟಿಸೋರು ಈ ಇಬ್ಬರಲ್ಲಿ ಯಾರು.?

  By Bharath Kumar
  |
  'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ನಟಿಸೋರು ಈ ಇಬ್ಬರಲ್ಲಿ ಯಾರು.? | Filmibeat Kannada

  ಕಳೆದ ವರ್ಷ ತೆಲುಗು ಇಂಡಸ್ಟ್ರಿಯಲ್ಲಿ ಬಹುದೊಡ್ಡ ಗೆಲುವು ಕಂಡ ಸಿನಿಮಾ ಅರ್ಜುನ್ ರೆಡ್ಡಿ. ವಿಜಯ ದೇವರಕೊಂಡ ನಾಯಕರಾಗಿದ್ದ ಈ ಸಿನಿಮಾ ಭಾಷೆಯ ಗಡಿ ಮೀರಿ ಎಲ್ಲರೂ ಮೆಚ್ಚಿಕೊಂಡಿದ್ದರು. 'ಕಲ್ಟ್' ಕಾನ್ಸೆಪ್ಟ್ ನಲ್ಲಿ ಸಿನಿಮಾ ಕಥೆ ಹೊಂದಿದ್ದ ಈ ಸಿನಿಮಾ ಯುವ ಜನಾಂಗಕ್ಕಂತೂ ಸಿಕ್ಕಾಪಟ್ಟೆ ಇಷ್ಟವಾಗಿತ್ತು.

  ಇನ್ನು ತೆಲುಗಿನಲ್ಲಿ ಈ ಸಿನಿಮಾ ನೋಡಿದ ಕನ್ನಡದವರು ನಮ್ಮ ಇಂಡಸ್ಟ್ರಿಯಲ್ಲಿ ಈ ಚಿತ್ರವನ್ನ ಯಾರು ಮಾಡಬಹುದು ಎಂಬ ಪ್ರಶ್ನೆಯನ್ನ ಅವತೇ ಇಟ್ಟುಕೊಂಡಿದ್ದರು. ಅಷ್ಟರಲ್ಲಾಗಲೇ ರಾಕಿಂಗ್ ಸ್ಟಾರ್ ಯಶ್ 'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ಕಾಣಿಸಿಕೊಳ್ತಾರೆ ಎಂಬ ಸುದ್ದಿ ಹೊರಬಿತ್ತು.

  'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ಯಾರು ನಟಿಸಬೇಕು.?

  ಆದ್ರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲವಾದ್ದರಿಂದ ಅಭಿಮಾನಿಗಳ ಆಸೆಗೆ ತಣ್ಣೀರು ಬಿದ್ದಿತ್ತು. ಇದೀಗ, ಇದೇ ಪ್ರಶ್ನೆ ಮತ್ತೆ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಈ ಬಾರಿ ರಾಕಿಂಗ್ ಸ್ಟಾರ್ ಜೊತೆಯಲ್ಲಿ ಡಾಲಿ ಧನಂಜಯ್ ಹೆಸರು ಕೂಡ ಸೇರಿಕೊಂಡಿದೆ. ಹಾಗಿದ್ರೆ, ಇವರಿಬ್ಬರಲ್ಲಿ ಈ ಪಾತ್ರವನ್ನ ಯಾರೂ ಮಾಡಿದ್ರೆ ಚೆನ್ನಾಗಿರುತ್ತೆ ಎಂಬ ಕುತೂಹಲಕ್ಕೆ ನಮ್ಮ ಒದುಗರು ತೆರೆ ಎಳೆದಿದ್ದಾರೆ.

  'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ಯಾರು ನಟಿಸಬೇಕು.?

  'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ಯಾರು ನಟಿಸಬೇಕು.?

  ಫಿಲ್ಮಿಬೀಟ್ ಕನ್ನಡ ವೆಬ್ ಸೈಟ್ ನಲ್ಲಿ 'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ಯಾರು ನಟಿಸಬೇಕು.? ಎಂಬ ಪ್ರಶ್ನೆಯನ್ನ ಕೇಳಲಾಗಿತ್ತು. ಇದಕ್ಕೆ ಉತ್ತರವಾಗಿ ಯಶ್, ಧನಂಜಯ್ ಇಬ್ಬರು ಆಯ್ಕೆ ನೀಡಲಾಗಿತ್ತು. ರೀಮೇಕ್ ಮಾಡುವುದು ಬೇಡ ಎಂದು ಮೂರನೇ ಆಯ್ಕೆಯನ್ನ ಕೂಡ ಕೇಳಲಾಗಿತ್ತು.

  ಓದುಗರ ಆಯ್ಕೆ ಯಾರು ಗೊತ್ತಾ.?

  ಓದುಗರ ಆಯ್ಕೆ ಯಾರು ಗೊತ್ತಾ.?

  'ಅರ್ಜುನ್ ರೆಡ್ಡಿ' ರೀಮೇಕ್ ನಲ್ಲಿ ಯಾರು ನಟಿಸಬೇಕು.? ಎಂಬ ಪ್ರಶ್ನೆಗೆ ಉತ್ತರಿಸಿರುವ ನಮ್ಮ ಓದುಗರು ಧನಂಜಯ್ ನಾಯಕನಾದ್ರೆ ಚೆನ್ನಾಗಿರುತ್ತೆ ಎಂದು ಶೇಕಡಾ 53 ರಷ್ಟು ಜನ ಹೇಳಿದ್ರೆ, ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಲಿ ಎಂದು ಶೇಕಡಾ 14 ರಷ್ಟು ಜನ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.

  'ರಾಕಿಂಗ್ ಸ್ಟಾರ್'ನ ಫಾಲೋ ಮಾಡ್ತಿದ್ದಾರಾ ಈ ತೆಲುಗು ನಟ?

  ರೀಮೇಕ್ ಮಾಡೋದು ಬೇಡ

  ರೀಮೇಕ್ ಮಾಡೋದು ಬೇಡ

  ಇನ್ನು ಅರ್ಜುನ್ ರೆಡ್ಡಿ ಸಿನಿಮಾವನ್ನ ರೀಮೇಕ್ ಮಾಡಲಿ ಎಂಬುವವರ ಮಧ್ಯೆ ಈ ಚಿತ್ರವನ್ನ ಕನ್ನಡಕ್ಕೆ ರೀಮೇಕ್ ಮಾಡಬೇಡಿ ಎನ್ನುವವವರು ಕೂಡ ಇದ್ದಾರೆ. ನಮ್ಮ ವೆಬ್ ಸೈಟ್ ನಲ್ಲಿ ಶೇಕಡಾ 34 ರಷ್ಟು ಮಂದಿ ರೀಮೇಕ್ ಬೇಡ ಎನ್ನುತ್ತಿದ್ದಾರೆ.

  'ಅರ್ಜುನ್ ರೆಡ್ಡಿ' ರೀಮೇಕ್ ಬಗ್ಗೆ ಯಶ್ ಹೇಳೋದೇ ಬೇರೆ.!

  ರಿಮೇಕ್ ಹಕ್ಕು ಖರೀದಿಸಿರುವ ರಾಕ್ ಲೈನ್

  ರಿಮೇಕ್ ಹಕ್ಕು ಖರೀದಿಸಿರುವ ರಾಕ್ ಲೈನ್

  ಸದ್ಯದ ಮಾಹಿತಿಯ ಪ್ರಕಾರ ಅರ್ಜುನ್ ರೆಡ್ಡಿ ಚಿತ್ರದ ರೀಮೇಕ್ ಹಕ್ಕು ಕನ್ನಡದ ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಬಳಿ ಇದೆ ಎನ್ನಲಾಗಿದೆ. ಹೀಗಾಗಿ, ಕನ್ನಡದ ಸ್ಟಾರ್ ನಟರೊಬ್ಬರು ಈ ಸಿನಿಮಾ ಮಾಡಬಹುದು ಎಂಬ ನಿರೀಕ್ಷೆಯೂ ಇದೆ. ಆದ್ರೆ, ಯಾರು ಮಾಡಬಹುದು ಎಂಬ ಕುತೂಹಲ ಮಾತ್ರ ಸದ್ಯಕ್ಕೆ ಹಾಗಯೇ ಇರಲಿ.

  ಈ ಚಿತ್ರ ಮಾಡಿದ್ರೆ, ಯಶ್ ಇಮೇಜ್ ಕಂಪ್ಲೀಟ್ ಬದಲಾಗುತ್ತಂತೆ.!

  English summary
  If Telugu super hit movie Arjun Reddy remake in kannada, who should act in lead role.? here is the answer from our website readers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X