ಅಂಬಿ ಮೀಸೆ ಮೇಲೆ ಕೈಯಿಟ್ಟ ಯಶ್ ಮಗಳು: ಫೋಟೋ ವೈರಲ್

Recommended Video

Ayra Yash gets blessings from Ambareesh | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳು ಐರಾ ಜೊತೆ (iyra) ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಯಶ್ ಮಗಳು ಅಂಬಿ ಫೋಟೋ ನೋಡಿ ಖುಷಿಯಿಂದ ಅಂಬಿ ಮೀಸೆ ಮೇಲೆ ಕೈಯಿಟ್ಟಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಅಂಬಿ ಮನೆಗೆ ಯಶ್ ಯಾವಾಗ ಭೇಟಿ ಕೊಟ್ಟಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇತ್ತೀಚಿನ ಫೋಟೋ ಎನ್ನುವುದು ತಿಳಿದುಬಂದಿದೆ. ಈ ಫೋಟೋದಲ್ಲಿ ಯಶ್, ರಾಧಿಕಾ ಪಂಡಿತ್, ಮಗಳು ಐರಾ ಮತ್ತು ಸುಮಲತಾ ಅವರು ಕೂಡ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ....

ಯಶ್ ಮಗಳ ಜೊತೆ ಆಟವಾಡಿದ ಸುಮಲತಾ

ಯಶ್ ಮಗಳ ಜೊತೆ ಆಟವಾಡಿದ ಸುಮಲತಾ

ಮಂಡ್ಯ ಸಂಸದೆಯಾದ ಬಳಿಕ ಸಂಪೂರ್ಣ ರಾಜಕಾರಣದಲ್ಲಿ ತೊಡಗಿಕೊಂಡಿರುವ ಸುಮಲತಾ ಅವರು, ಯಶ್-ರಾಧಿಕಾ ದಂಪತಿಯ ಮುದ್ದಿನ ಮಗಳ ಜೊತೆ ಕೆಲ ಕಾಲ ಆಟವಾಡಿ ಸಮಯ ಕಳೆದಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದಂಪತಿ ಸಮೇತ ಅಂಬಿ ಮನೆಗೆ ಭೇಟಿ

ದಂಪತಿ ಸಮೇತ ಅಂಬಿ ಮನೆಗೆ ಭೇಟಿ

ಸುಮಲತಾ ಅಂಬರೀಶ್ ಅವರ ಮನೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಭೇಟಿ ಕೊಟ್ಟಿದ್ದು, ಸುಮಲತಾ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಚುನಾವಣೆ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ

ಚುನಾವಣೆ ಬಳಿಕ ಎಲ್ಲೂ ಕಾಣಿಸಿಕೊಂಡಿಲ್ಲ

ಮಂಡ್ಯ ಚುನಾವಣೆ ಬಳಿಕ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಕೆಜಿಎಫ್ ಸಿನಿಮಾದಲ್ಲಿ ಯಶ್ ಬ್ಯುಸಿಯಾಗಿದ್ದರೆ, ಆ ಕಡೆ ಸಂಸತ್ ಅಧಿವೇಶನ ಮತ್ತು ಮಂಡ್ಯ ಅಭಿವೃದ್ದಿ ಕೆಲಸಗಳಲ್ಲಿ ಸುಮಲತಾ ಬ್ಯುಸಿ ಇದ್ದರು. ಇದೀಗ, ಸುಮಲತಾ ಅವರ ಮನೆಗೆ ಯಶ್ ದಂಪತಿ ಭೇಟಿಯಾಗಿರುವ ಫೋಟೋ ಬಹಿರಂಗವಾಗಿದೆ.

ಎರಡನೇ ಮಗು ನಿರೀಕ್ಷೆಯಲ್ಲಿ ರಾಧಿಕಾ

ಎರಡನೇ ಮಗು ನಿರೀಕ್ಷೆಯಲ್ಲಿ ರಾಧಿಕಾ

ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಧಿಕಾ ಪಂಡಿತ್ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಈಗ ಎರಡನೇ ಮಗುವಿಗೆ ಗರ್ಭಿಣಿಯಾಗಿರುವ ರಾಧಿಕಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Kannada actor Yash and radhika pandith has visited to Rebel star ambarish home with their daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X