ಒಂದು ದಿನ ಮೊದ್ಲೆ 'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್ ಲೀಕ್?; ಕೇಳಿ ಥ್ರಿಲ್ ಆದ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅದ್ವಾನಿ ನಟನೆಯ 'ಟಾಕ್ಸಿಕ್' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಸದ್ಯ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡಲು ವೇದಿಕೆ ಸಿದ್ಧವಾಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಕೂಡ ಸಿಕ್ಕಿದೆ. ಮಾರ್ಚ್ 2ರಂದು ಅಂದ್ರೆ ನಾಳೆ ಮಧ್ಯಾಹ್ನ 12.59ಕ್ಕೆ 'ತಬಾಹಿ' ಎಂದು ಶುರುವಾಗುವ ಸಾಂಗ್ ರಿಲೀಸ್ ಆಗಬೇಕಿದೆ.

ವಿಶಾಲ್ ಮಿಶ್ರಾ ಈ ರೊಮ್ಯಾಂಟಿಕ್ ಸಾಂಗ್ ಸಾರಥ್ಯ ವಹಿಸಿದ್ದಾರೆ. ಟ್ಯೂನ್ ಹಾಕಿ ಹಾಡಿದ್ದಾರೆ. ಕನ್ನಡದಲ್ಲಿ ಯೋಗರಾಜ್ ಭಟ್ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಲೇಖನಿ ಹಿಡಿದಿದ್ದಾರೆ. ಬೀಚ್‌ನಲ್ಲಿ ಯಶ್ ಹಾಗೂ ಕಿಯಾರಾ ನಡುವಿನ ರೊಮ್ಯಾಂಟಿಕ್ ಸಾಂಗ್ ಎನ್ನುವುದು ಪೋಸ್ಟರ್ ನೋಡಿದರೆ ಅರ್ಥವಾಗುತ್ತಿದೆ. ಇದೆಲ್ಲದರ ನಡುವೆ ಒಂದು ದಿನ ಮೊದಲೇ ಸಾಂಗ್ ಲೀಕ್ ಆಗಿದೆ ಎಂದು ಗುಲ್ಲಾಗಿದೆ.

Yash and Kiara Advani s Toxic Tabaahi Song Set for Release Amid AI Leak Buzz

ಯಾವುದೇ ಸಿನಿಮಾ ಟೀಸರ್, ಸಾಂಗ್ ಲೀಕ್ ಎನ್ನುವುದು ಹೊಸ ವಿಷಯವೇನಲ್ಲ. Spotify ಆಪ್‌ನಲ್ಲೇ 'ಟಾಕ್ಸಿಕ್' ಸಾಂಗ್ ರಿಲೀಸ್ ಆಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ವೈರಲ್ ಆಗುತ್ತಿರುವ ಸಾಂಗ್ ಕ್ಲಿಪ್ ಗಮನ ಸೆಳೆದಿದೆ. ಅಭಿಮಾನಿಗಳು ಕೇಳಿ ಖುಷಿಯಾಗಿದ್ದಾರೆ. ಆದರೆ ಇದು ಒರಿಜಿನಲ್ ಸಾಂಗ್ ಅಲ್ಲ, ಬದಲಿಗೆ ಎಐ ಬಳಸಿ ಸೃಷ್ಟಿಸಿರುವ ಸಾಂಗ್ ಎನ್ನುವುದು ಅರ್ಥವಾಗುತ್ತಿದೆ. Spotify ಆಪ್‌ ರೀತಿ ಕಾಣುವ ಮತ್ತೊಂದು ಆಪ್‌ ಹೆಸರು ಬಳಸಿ ವೈರಲ್ ಮಾಡುತ್ತಿರುವುದು ಮತ್ತಷ್ಟು ಅನುಮಾನ ಮೂಡಿಸಿದೆ.

ಎಐ ಜನರೇಟೆಡ್ ಸಾಂಗ್ ಇಷ್ಟು ಮಜವಾಗಿದೆ ಅಂದ್ರೆ ಒರಿಜಿನಲ್ ಸಾಂಗ್ ಹೇಗಿರಬೇಡ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಇನ್ನು 18 ದಿನ ಬಾಕಿಯಿದೆ. ರವಿ ಬಸ್ರೂರು ಸೇರಿ ಐವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಿಜಿಎಂ ಜೊತೆಗೆ ಒಂದು ಸಾಂಗ್‌ಗೆ ರವಿ ಬಸ್ರೂರು ಟ್ಯೂನ್ ಹಾಕಿದ್ದಾರೆ. ವಿಶಾಲ್ ಮಿಶ್ರಾ 4 ಟ್ರ್ಯಾಕ್‌ಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿರುವುದು ವಿಶೇಷ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಇಂಗ್ಲೀಷ್ ಭಾಷೆಗೂ ಡಬ್ ಆಗಿ ಬಿಡುಗಡೆ ಆಗುತ್ತಿರುವುದು ವಿಶೇಷ. ಶೀಘ್ರದಲ್ಲೇ ಬೆಂಗಳೂರಿನಲ್ಲಿ ಗ್ರ್ಯಾಂಡ್ ಈವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡುವ ಪ್ಲ್ಯಾನ್ ನಡೀತಿದೆ. ಅದಕ್ಕೂ ಮುನ್ನ 'ತಬಾಹಿ' ಆರ್ಭಟ ಶುರುವಾಗಲಿದೆ.

'ಟಾಕ್ಸಿಕ್' ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಸಾಕಷ್ಟು ಜನರ ಹೆಸರು ಕೇಳಿ ಬಂದಿತ್ತು. ಬ್ರಿಟನ್ ಕಂಪೋಸರ್ ಟ್ಯೂನ್ ಹಾಕುತ್ತಾರೆ ಅಂತೆಲ್ಲಾ ಗುಲ್ಲಾಗಿತ್ತು. ಕೊನೆಗೆ ಅನಿರುದ್ಧ್ ರವಿಚಂದರ್ ಟ್ಯೂನ್ ಹಾಕುವುದು ಪಕ್ಕಾ ಎನ್ನುವ ಊಹಾಪೋಹ ಕೇಳಿಬಂದಿತ್ತು. ಆದರೆ ಕೊನೆಗೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡುವುದು ಪಕ್ಕಾ ಆಗಿತ್ತು. ಇತ್ತೀಚೆಗೆ ಇನ್ನು 4 ಜನ ಅವರೊಟ್ಟಿಗೆ ಕೈ ಜೋಡಿಸುತ್ತಿರುವ ವಿಚಾರ ಗೊತ್ತಾಗಿತ್ತು.

ಜೀ ಆಡಿಯೋ ಸಂಸ್ಥೆಗೆ 'ಟಾಕ್ಸಿಕ್' ಆಡಿಯೋ ರೈಟ್ಸ್ ಸೇಲ್ ಆಗಿದೆ. ಭರ್ಜರಿ ದರಕ್ಕೆ ಡೀಲ್ ಕುದುರಿಸಲಾಗಿದೆ. ಕನ್ನಡ ವರ್ಷನ್ ಓಟಿಟಿ ರೈಟ್ಸ್ ಕೂಡ ಜೀ-5 ಪಾಲಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನುಳಿದಂತೆ ಚಿತ್ರ ಥ್ರಿಯೇಟ್ರಿಕಲ್ ರೈಟ್ಸ್, ಓಟಿಟಿ ರೈಟ್ಸ್‌ಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ಯಶ್ ನಟಿಸಿರುವಂತೆ ಕಾಣುತ್ತಿದೆ. ರಾಯ ಹಾಗೂ ಟಿಕೆಟ್ ಎಂಬ ಎರಡು ಪಾತ್ರ ಮಾಡುತ್ತಿರುವುದು ಗೊತ್ತಾಗುತ್ತಿದೆ. ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಯಶ್ ಪ್ರೇಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಬಹಳ ವರ್ಷಗಳ ಬಳಿಕ ಕ್ಲೀನ್‌ ಶೇವ್‌ನಲ್ಲಿ ಸಖತ್ ಯಂಗ್ ಲುಕ್‌ನಲ್ಲಿ ಅಬ್ಬರಿಸಿದ್ದಾರೆ.

More from Filmibeat

Read more about: yash kiara advani toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X