ಈಗ ಹೇಳುವ ಮೂಡ್ ಇಲ್ಲ. ನೆಕ್ಸ್ಟ್ ಟೈಂ ಸಿಕ್ಕಾಗ ಹೇಳ್ತೀನಿ: ನಿರ್ದೇಶಕ ಪವನ್ ಗೆ ಯಶ್ ಹೀಗೆ ಹೇಳಿದ್ದೇಕೆ?

ರಾಕಿಂಗ್ ಸ್ಟಾರ್ ಅಭಿನಯದ ಗೂಗ್ಲಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಯಶಸ್ಸು ಕಂಡ ಸಿನಿಮಾ. ಯಶ್ ಸಿನಿ ಜೀವನವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ ಸಿನಿಮಾ ಗೂಗ್ಲಿ. ಕನ್ನಡ ಚಿತ್ರಪ್ರೇಕ್ಷಕರ ಮನಗೆದ್ದ ಗೂಗ್ಲಿ ಸಿನಿಮಾ ರಿಲೀಸ್ ಆಗಿ 7 ವರ್ಷಗಳಾಗಿದೆ.

ಮತ್ತೆ ಮತ್ತೆ ನೋಡಬೇಕು ಎನ್ನುವ ಸಿನಿಮಾಗಳ ಪಟ್ಟಿಯಲ್ಲಿ ಗೂಗ್ಲಿ ಸಿನಿಮಾ ಕೂಡ ಸೇರಿಕೊಂಡಿದೆ. ಸಿನಿಮಾದ ಹಾಡುಗಳು, ಲವ್ ಸ್ಟೋರಿ, ಯಶ್ ಅಭಿನಯ ಸಿನಿಮಾಪ್ರಿಯರನ್ನು ನಿದ್ದೆಗೆಡಿಸುತ್ತು. ನಟಿ ಕೃತಿ ಕರಬಂಧ ರಾಕಿಂಗ್ ಸ್ಟಾರ್ ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಯಶ್ ಮತ್ತು ಕೃತಿ ಲವ್ ಸ್ಟೋರಿಗೆ ಕನ್ನಡ ಚಿತ್ರಪ್ರೇಕ್ಷಕರು ಫಿದಾ ಆಗಿದ್ದರು. ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬಂದ ಗೂಗ್ಲಿ ಸಿನಿಮಾ 7 ವರ್ಷಗಳನ್ನು ಕಳೆದಿದೆ. ಈ ಸಂತಸವನ್ನು ರಾಕಿಂಗ್ ಸ್ಟಾರ್, ಪವನ್ ಒಡೆಯರ್ ಮತ್ತು ನಟಿ ಕೃತಿ ಕರಬಂಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಗೂಗ್ಲಿ ತಂಡಕ್ಕೆ ಯಶ್ ಅಭಿನಂದನೆ

ಗೂಗ್ಲಿ ತಂಡಕ್ಕೆ ಯಶ್ ಅಭಿನಂದನೆ

ಯಶ್ ಸಿನಿಮಾರಂಗಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿವೆ. ಇದೆ ಸಂತಸದಲ್ಲಿ ಗೂಗ್ಲಿ ಬಗ್ಗೆಯೂ ಹೇಳಿಕೊಂಡಿದ್ದಾರೆ. "12 ವರ್ಷದ ಆಚರಣೆಯನ್ನು ತುಂಬಾ ವಿಶೇಷವಾಗಿಸಿದ್ದಕ್ಕೆ ಧನ್ಯವಾದಗಳು. ಗೂಗ್ಲಿ ಸಿನಿಮಾಗೆ 2 ವರ್ಷವಾಗಿದೆ. ಗೂಗ್ಲಿ ತಂಡಕ್ಕೆ ಅಭಿನಂದನೆಗಳು ಮತ್ತು ತುಂಬಾ ಧನ್ಯವಾದಗಳು. ಪವನ್ ಒಡೆಯರ್, ಕೃತಿ ಕರಬಂಧ, ಜಯಣ್ಣ ಕಂಬೈನ್ಸ್ ಮತ್ತು ಚಿತ್ರದ ಭಾಗವಾದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ಹೇಳಿದ್ದಾರೆ.

ಮತ್ತೊಂದು ಗೂಗ್ಲಿ ಯಾವಾಗ?

ಮತ್ತೊಂದು ಗೂಗ್ಲಿ ಯಾವಾಗ?

ನಿರ್ದೇಶಕ ಪವನ್ ವಡೆಯರ್ ಮತ್ತೊಂದು ಗೂಗ್ಲಿ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರನ್ನು ಹೇಳಿಕೊಂಡಿದ್ದಾರೆ. "ಮತ್ತೊಂದು ಗೂಗ್ಲಿ ಡಾರ್ಲಿಂಗ್ ಯಶ್" ಎಂದು ಪವನ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡುವ ಮೂಲಕ ಪವನ್ ಕಾಲೆಳೆದಿದ್ದಾರೆ.

'ಈಗ ಹೇಳೊ ಮೂಡ್ ಇಲ್ಲ' ಎಂದ ಯಶ್

'ಈಗ ಹೇಳೊ ಮೂಡ್ ಇಲ್ಲ' ಎಂದ ಯಶ್

"ನೀವು ಇನ್ನೂ ಒಂದು ಗೂಗ್ಲಿ ಎಂದು ಹೇಳುತ್ತಿದ್ದೀರಿ? ಈಗ ಅದರ ಬಗ್ಗೆ ಹೇಳೊ ಮೂಡ್ ಇಲ್ಲ. ನೆಕ್ಸ್ಟ ಟೈಂ ಸಿಕ್ಕಾಗ ಹೇಳ್ತೀನಿ" ಎಂದು ಯಶ್, ಸಾಮಾಜಿಕ ಜಾಲತಾಣದಲ್ಲಿ ಪವನ್ ಕಾಲೆಳೆದಿದ್ದಾರೆ. ಯಶ್ ಪ್ರತಿಕ್ರಿಯೆಗೆ ಪವನ್ "ಇದು ಗೂಗ್ಲಿ ಅಂದ್ರೆ" ಎಂದಿದ್ದಾರೆ. ಪವನ್ ಮತ್ತು ಯಶ್ ಇಬ್ಬರ ಮಾತುಕತೆ ನೋಡಿ ಅಭಿಮಾನಿಗಳು ಗೂಗ್ಲಿ-2 ಬರ್ತಿದೆಯಾ ಎಂದು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಗೂಗ್ಲಿ-2 ಗಾಗಿ ಕಾಯುತ್ತಿದ್ದೀವಿ ಎಂದು ಹೇಳುತ್ತಿದ್ದಾರೆ.

ಗೂಗ್ಲಿ-2 ಮಾಡಲು ಉತ್ಸುಕರಾಗಿದ್ದಾರೆ ಕೃತಿ

ಗೂಗ್ಲಿ-2 ಮಾಡಲು ಉತ್ಸುಕರಾಗಿದ್ದಾರೆ ಕೃತಿ

ಈ ಹಿಂದೆ ನಟಿ ಕೃತಿ ಬರಬಂಧ ಸಹ ಗೂಗ್ಲಿ-2 ಮಾಡುವ ಬಗ್ಗೆ ಕೇಳಿಕೊಂಡಿದ್ದರು. ನಿರ್ದೇಶಕ ಪವನ್ ಬಳಿ ಕೃತಿ 'ಮತ್ತೊಂದು ಸಿನಿಮಾ ಮಾಡಿ ನನ್ನನ್ನು ಕರೆದುಕೊಳ್ಳಿ' ಎಂದಿದ್ದರು ಇಡೀ ತಂಡ ಗೂಗ್ಲಿ ಹಾಗೆ ಮತ್ತೊಂದು ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ಒಂದು ವೇಳೆ ಯಶ್ ಡೇಟ್ ಸಿಕ್ಕರೆ ಮತ್ತೊಂದು ಗೂಗ್ಲಿ ಬರುವುದರಲ್ಲಿ ಯಾವುದೆ ಅನುಮಾನವಿಲ್ಲ.

More from Filmibeat

English summary
Actor Yash And Kriti Kharbanda starrer Googly movie completes 7 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X