ಸಂತೋಷ್-ಸುರಭಿ ನಿಶ್ವಿತಾರ್ಥದಲ್ಲಿ ಆನಂದದ ಸಂಭ್ರಮ
ಸ್ಯಾಂಡಲ್ ವುಡ್ ನ ಯಂಗ್ ಟ್ಯಾಲೆಂಟೆಡ್ ನಿರ್ದೇಶಕರ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿರೋ ಡೈರೆಕ್ಟರ್ 'ಸಂತೋಷ್ ಆನಂದ್ ರಾಮ್' ನಿನ್ನೆಯಷ್ಟೇ(ನವೆಂಬರ್ 26) ಬಳ್ಳಾರಿಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇದೇ ಫಿಲ್ಮೀಬೀಟ್ ನಲ್ಲಿ ನೀವೆಲ್ಲಾ ಓದಿರುವಂತೆ ಸಂತೋಷ್ ಬಳ್ಳಾರಿ ಮೂಲದ ಇಂಜಿನಿಯರ್ ಓದಿಕೊಂಡಿರೋ 'ಸುರಭಿ'ಯವರನ್ನ ಮದುವೆಯಾಗಲಿದ್ದಾರೆ.ಬಳ್ಳಾರಿಯಲ್ಲಿ ನಡೆದ ಅದ್ದೂರಿ ಎಂಗೆಂಜ್ ಮೆಂಟ್ ನಲ್ಲಿ ಸಾಕಷ್ಟು ಸೆಲಬ್ರೆಟಿಗಳು ಭಾಗಿಯಾಗಿದ್ದರು.

ಮದುವೆಗೆ ಅಣಿಯಾದ ಸ್ಯಾಂಡಲ್ ವುಡ್ ನಿರ್ದೇಶಕ
ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿಶ್ಚಿತಾರ್ಥ ನಿನ್ನೆ (ನವೆಂಬರ್ 26) ಬಳ್ಳಾರಿಯಲ್ಲಿ ಅದ್ದೂರಿಯಾಗಿ ನಡೆದಿದೆ. ಸುರಭಿಯವರ ಜೊತೆ ಎಂಗೆಂಜ್ ಮೆಂಟ್ ಮಾಡಿಕೊಂಡಿರೋ ಸಂತೋಷ್ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಶುಭಕೋರಿದ್ರು 'ಯಶ್' ಮತ್ತು 'ರಾಧಿಕಾ ಪಂಡಿತ್'
ರಾಮಚಾರಿ ನಿರ್ದೇಶಕನ ನಿಶ್ಚಿತಾರ್ಥಕ್ಕೆ ಕನ್ನಡ ಸಿನಿಮಾರಂಗದ' ರಾಕಿಂಗ್ ಸ್ಟಾರ್' ಹಾಗೂ ಸ್ಯಾಂಡಲ್ ವುಡ್ ನ ಪ್ರಿನ್ಸೆಸ್ 'ರಾಧಿಕಾ ಪಂಡಿತ್' ಬಂದಿದ್ದರು. ದಂಪತಿ ಸಮೇತರಾಗಿ ಬಂದು ಸಂತೋಷ್ ಮತ್ತು ಸುರಭಿಗೆ ಶುಭಕೋರಿದ್ರು.

ಎಂಗೆಂಜ್ ಮೆಂಟ್ ನಲ್ಲಿ ಅಪ್ಪು
ಸಂತೋಷ್ ಮತ್ತು ಸುರಭಿ ಎಂಗೆಂಜ್ ಮೆಂಟ್ ಗೆ 'ಪವರ್ ಸ್ಟಾರ್' ಕೂಡ ಎಂಟ್ರಿಕೊಟ್ಟು ಶುಭಾಷಯ ಕೋರಿದ್ರು.ಅಪ್ಪು ಜೊತೆಯಲ್ಲಿ 'ರಾಜಕುಮಾರ' ಸಿನಿಮಾತಂಡ ಹಾಗೂ ನಿರ್ಮಾಪಕ 'ವಿಜಯ್ ಕಿರಗಂದೂರು' ಕೂಡ ನಿಶ್ಚಿತಾರ್ಥದಲ್ಲಿ ಕಾಣಿಸಿಕೊಂಡರು.

ಬೆಂಗಳೂರಿನಲ್ಲಿ ನಡೆಯೋ ಮದುವೆ
ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿರೋ ಸುರಭಿ ಮತ್ತು ಸಂತೋಷ್ ಆನಂದ್ ರಾಮ್ ಮುಂದಿನ ವರ್ಷದ ಪ್ರಾರಂಭದಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಫೆಬ್ರವರಿ 20 ಹಾಗೂ 21 ರಂದು ಬೆಂಗಳೂರಿನಲ್ಲಿ ಮದುವೆ ಸಮಾರಂಭ ನಡೆಯಲಿದೆ


Click it and Unblock the Notifications











