ಕಳೆದ 30 ದಿನಗಳಲ್ಲಿ ತೆಲುಗು, ತಮಿಳು ಹಾಗೂ ಮಲಯಾಳಂ ಜನ ಹೆಚ್ಚಾಗಿ ಹುಡುಕಿದ ಕನ್ನಡದ ನಟ ಇವರೇ!
ಗೂಗಲ್.. ಯಾವುದಾದರೂ ವ್ಯಕ್ತಿಯೋರ್ವನ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕೆಂದರೆ ಅಥವಾ ಆ ವ್ಯಕ್ತಿಯ ಬಗೆಗಿ ಸುದ್ದಿಗಳನ್ನು ತಿಳಿದುಕೊಳ್ಳಬೇಕೆಂದರೆ ಎಲ್ಲರ ತಲೆಗೂ ತಕ್ಷಣ ಬರುವ ಹೆಸರೇ ಗೂಗಲ್. 'ಗೂಗಲ್‌ನಲ್ಲಿ ಏನೇನಿಲ್ಲ.. ಸಿಲೆಬಸ್‌ಗಿಂತ ಜಾಸ್ತಿ ತಿಳ್ಕೊ ಲೈಫು ಇಷ್ಟೇನೆ' ಎಂದು ಭಟ್ರು ಬರೆದಿರುವ ಹಾಗೆ ಕೆಲಸ ಮಾಡುತ್ತೆ ಈ ಗೂಗಲ್.
ಇನ್ನು ಮನರಂಜನೆ ವಿಷಯಕ್ಕೆ ಬಂದರೂ ಸಹ ಈ ಗೂಗಲ್ ಪಾತ್ರ ದೊಡ್ಡದ್ದೇ ಇದೆ. ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ತಿಳಿದುಕೊಳ್ಳಬೇಕೆಂದರೆ ಅಥವಾ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ಬಹುತೇಕ ಸಿನಿ ರಸಿಕರು ಮೊರೆ ಹೋಗುವುದು ಇದೇ ಗೂಗಲ್‌ನತ್ತ.

ಹೀಗೆ ಗೂಗಲ್‌ನಲ್ಲಿ ನಡೆಯುವ ಹುಡುಕಾಟದಲ್ಲಿ ಯಾರ ಬಗ್ಗೆ ಎಷ್ಟು ಪ್ರಮಾಣದಲ್ಲಿ ಹುಡುಕಾಡಿದ್ದಾರೆ ಎಂಬುದನ್ನು ತಿಳಿಯಬಹುದಿದ್ದು, ಕಳೆದ ದಿನ, ಕಳೆದ ವಾರ, ಕಳೆದ ತಿಂಗಳು, ಹೀಗೆ ನಮಗೆ ಎಷ್ಟು ದಿನಗಳ ವರದಿ ಬೇಕೋ ಅಷ್ಟು ದಿನಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಸದ್ಯ ಕಳೆದ 30 ದಿನಗಳಲ್ಲಿ ಅಂದರೆ ಕಳೆದ ಮೇ ತಿಂಗಳಿನಲ್ಲಿ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಡಲ್ಪಟ್ಟ ಕನ್ನಡದ ನಟರ ಬಗ್ಗೆ ತಿಳಿದುಕೊಳ್ಳಲು ಮುಂದಾದಾಗ ಗೂಗಲ್ ನೀಡಿದ ಮಾಹಿತಿ ಈ ಕೆಳಕಂಡಂತಿದೆ..
ಕರ್ನಾಟಕದಲ್ಲಿ ಯಾರ ಬಗ್ಗೆ ಎಷ್ಟು ಹುಡುಕಾಟ?
ಇನ್ನು ಗೂಗಲ್ ಸರ್ಚ್‌ನಲ್ಲಿ ಕಳೆದ 30 ದಿನಗಳಲ್ಲಿ ಕರ್ನಾಟಕದಲ್ಲಿ ಯಾವ ಕನ್ನಡ ನಟನ ಬಗ್ಗೆ ಅತಿಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂಬುದನ್ನು ಹುಡುಕಿದಾಗ ಪುನೀತ್ ರಾಜ್‌ಕುಮಾರ್ ಬಗ್ಗೆ 32% ಜನರು ಹುಡುಕಿದ್ದರೆ, ದರ್ಶನ್ ತೂಗುದೀಪ ಬಗ್ಗೆ 26% ಜನರು ಹುಡುಕಿದ್ದಾರೆ. ಇನ್ನುಳಿದಂತೆ ಸುದೀಪ್ ಬಗ್ಗೆ 22% ಜನರು ಹುಡುಕಿದ್ದು, ಯಶ್ ಬಗ್ಗೆ 20% ಬಳಕೆದಾರರು ಹುಡುಕಾಡಿದ್ದಾರೆ.

ತೆಲುಗು ರಾಜ್ಯಗಳಲ್ಲಿ ಯಾರ ಬಗ್ಗೆ ಎಷ್ಟು ಜನರು ಹುಡುಕಿದ್ದಾರೆ?
ಅತ್ತ ನೆರೆಯ ತೆಲುಗು ರಾಜ್ಯಗಳಲ್ಲಿ ಕನ್ನಡದ ಈ ನಟರ ಪೈಕಿ ಕಳೆದ 30 ದಿನಗಳಲ್ಲಿ ಯಾರ ಬಗ್ಗೆ ಎಷ್ಟು ಜನರು ಹುಡುಕಿದ್ದಾರೆ ಎಂಬುದನ್ನು ಪರಿಶೀಲಿಸಿದಾಗ ಪುನೀತ್ ರಾಜ್‌ಕುಮಾರ್ ಬಗ್ಗೆ 43% ಜನರು ಹುಡುಕಿದ್ದರೆ, ರಾಕಿಂಗ್ ಸ್ಟಾರ್ ಯಶ್ ಬಗ್ಗೆ 36% ಜನರು ಹುಡುಕಿದ್ದಾರೆ, ದರ್ಶನ್ ಬಗ್ಗೆ 13% ಜನರು ಹಾಗೂ ಸುದೀಪ್ ಬಗ್ಗೆ 8% ಜನರು ಹುಡುಕಿದ್ದಾರೆ.
ತಮಿಳುನಾಡಿಯಲ್ಲಿ ಯಾರ ಬಗ್ಗೆ ಹೆಚ್ಚು ಹುಡುಕಾಟ?
ತೆಲುಗು ರಾಜ್ಯಗಳು ಹಾಗೂ ಕರ್ನಾಟಕದಲ್ಲಿ ಕಳೆದ ತಿಂಗಳು ಪುನೀತ್ ರಾಜ್‌ಕುಮಾರ್ ಕುರಿತು ಹೆಚ್ಚು ಜನರು ಹುಡುಕಿದ್ದರೆ, ತಮಿಳುನಾಡಿನಲ್ಲಿ ಯಶ್ ಬಗ್ಗೆ ಹೆಚ್ಚು ಜನರು ಹುಡುಕಿದ್ದಾರೆ. 47% ಜನರು ಯಶ್ ಬಗ್ಗೆ ಹುಡುಕಿದ್ದರೆ, ಪುನೀತ್ ರಾಜ್‌ಕುಮಾರ್ ಬಗ್ಗೆ 25% ಜನರು ಹುಡುಕಿದ್ದಾರೆ, ದರ್ಶನ್ ಬಗ್ಗೆ 15% ಜನರು ಹುಡುಕಿದ್ದಾರೆ ಹಾಗೂ ಸುದೀಪ್ ಬಗ್ಗೆ 13% ಜನರು ಹುಡುಕಿದ್ದಾರೆ.
ಕೇರಳದಲ್ಲಿ ಯಾರ ಬಗ್ಗೆ ಹೆಚ್ಚು ಹುಡುಕಾಟ?
ಕೇರಳದಲ್ಲಿ ಮೇ ತಿಂಗಳಿನಲ್ಲಿ 50% ಜನರು ಹುಡುಕಿದ್ದರೆ, ಪುನೀತ್ ರಾಜ್‌ಕುಮಾರ್ ಬಗ್ಗೆ 23% ಜನರು ಹುಡುಕಿದ್ದಾರೆ, ಸುದೀಪ್ ಬಗ್ಗೆ 17% ಹಾಗೂ ದರ್ಶನ್ ಬಗ್ಗೆ 10% ಜನರು ಹುಡುಕಿದ್ದಾರೆ.


Click it and Unblock the Notifications











