»   » ಯಶ್-ಪುನೀತ್ ರಿಲೀಸ್ ಮಾಡಲಿರುವ ಟ್ರೈಲರ್ ಯಾವುದು?

ಯಶ್-ಪುನೀತ್ ರಿಲೀಸ್ ಮಾಡಲಿರುವ ಟ್ರೈಲರ್ ಯಾವುದು?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಬ್ಬರು ಸೇರಿ ಹೊಸ ಚಿತ್ರದ ಟ್ರೈಲರ್ ವೊಂದನ್ನ ಬಿಡುಗಡೆ ಮಾಡಲಿದ್ದಾರೆ.

ಹೌದು, 'ಉಗ್ರಂ' ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರು ನಿರ್ದೇಶನ ಮಾಡಿರುವ 'ಕಟಕ' ಚಿತ್ರದ ಟ್ರೈಲರ್ ನ್ನ ಕನ್ನಡದ ಇಬ್ಬರು ಸೂಪರ್ ಸ್ಟಾರ್ ರಿಲೀಸ್ ಮಾಡುತ್ತಿದ್ದಾರೆ. ಇಂದು (ಸೆಪ್ಟೆಂಬರ್ 30) ಸಂಜೆ ಬೆಂಗಳೂರಿನಲ್ಲಿ 'ಕಟಕ' ಟ್ರೈಲರ್ ರಿಲೀಸ್ ಆಗಲಿದೆ.

Yash and Puneeth will Release kataka Trailer

ಇದೊಂದು ಹಾರರ್ ಸ್ಟೋರಿಯಾಗಿದ್ದು, ಶ್ಲಾಘ ಸಾಲಿಗ್ರಾಮ ಎಂಬ ಬಾಲಕಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಅಂದ್ಹಾಗೆ, ರವಿ ಬಸ್ರೂರು ನಿರ್ದೇಶನ ಮಾಡುತ್ತಿರುವ ಮೂರನೇ ಚಿತ್ರ ಇದಾಗಿದ್ದು, ಇದಕ್ಕು ಮುಂಚೆ 'ಗರ್ ಗರ್ ಮಂಡ್ಲ', 'ಬಿಲಿಂದರ್' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದರು.

'ಜಟ್ಟ', 'ಮೈತ್ರಿ' ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಎನ್‌.ಎಸ್.ರಾಜಕುಮಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಮುಂದಿನ ತಿಂಗಳು ಸಿನಿಮಾ ತೆರೆಗೆ ಬರಲಿದೆ.

English summary
Actors Puneeth Rajakumar and Yash are all set to release the trailer of 'Kataka' jointly tonight in Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada