ಯಶ್- ರಾಧಿಕಾ ಮಕ್ಕಳ ತುಂಟಾಟ: ವೈರಲ್ ವೀಡಿಯೋಗಳಲ್ಲಿ ಏನಿದೆ?
ಸ್ಟಾರ್ ಕಿಡ್ಸ್ ಎನ್ನುವ ಕಾನ್ಸೆಪ್ಟ್ ಬಾಲಿವುಡ್‌ನಲ್ಲಿ ಹೆಚ್ಚಾಗಿ ಇದೆ. ಅಂದರೆ ಸಿನಿಮಾ ತಾರೆಯರ ಮಕ್ಕಳ ಚಲನ ವಲನಗಳ ಬಗ್ಗೆ ಹೆಚ್ಚಾಗಿ ಬಾಲಿವುಡ್‌ನಲ್ಲಿ ಸುದ್ದಿತ್ತದೆ. ಕೆಲವು ಸ್ಟಾರ್ ಮಕ್ಕಳು ಮನೆಯಿಂದ ಹೊರಗೆ ಬಂದರೆ ಸಾಕು ಫೊಟೋ ಕ್ಲಿಕ್ಕಿಸಿ ಬಿಡುತ್ತರೆ. ಸ್ಟಾರ್ ನಟ, ನಟಿಯರ ಮಕ್ಕಳು ಹೇಗೆ ಇದ್ದಾರೆ?, ಅವರು ಹೇಗೆ ಡ್ರೆಸ್ ಮಾಡಿಕೊಳ್ಳುತ್ತಾರೆ? ಅವರು ಹೇಗೆ ಎಲ್ಲೆಲ್ಲಿ ಸುತ್ತಾಡುತ್ತಾರೆ ಎನ್ನುವಂತಹ ಹಲವು ವಿಚಾರಗಳ ಬಗ್ಗೆ ಜನರಿಗೆ ಕುತೂಹಲ ಇದ್ದೇ ಇರುತ್ತದೆ. ಇಂಥಹದ್ದೆ ಕುತೂಹಲಗಳು ಈ ಸ್ಯಾಂಡಲ್‌ವುಡ್‌ನಲ್ಲೂ ಹುಟ್ಟಿ ಕೊಂಡಿವೆ.
ಕನ್ನಡ ಚಿತ್ರರಂಗ ಅಂತ ಬಂದಾಗ ಅತಿ ಹೆಚ್ಚಾಗಿ ಇತ್ತೀಚಿಗೆ ಸದ್ದು ಮಾಡುತ್ತಾ ಇರುವ ಸ್ಟಾರ್ ಕಿಡ್ಸ್ ಅಂದ್ರೆ ಅದು ಯಶ್ ಮತ್ತು ರಾಧಿಕಾ ಪಂಡಿತ್ ಮಕ್ಕಳು. ರಾಧಿಕಾ ಮತ್ತು ಯಶ್ ಮಕ್ಕಳಾದ ಆಯ್ರಾ, ಯಥರ್ವ್ ಸದಾ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮುದ್ದು ಮಕ್ಕಳಿಗೆ ಅಭಿಮಾನಿ ಬಳಗವೇ ಇದೆ.
ಈಗ ಯಶ್, ರಾಧಿಕಾ ಮಕ್ಕಳ ಬಗ್ಗೆ ಮಾತನಾಡುವುದಕ್ಕೆ ಕಾರಣ ಅವರ ಹೊಸ ವೀಡಿಯೋ. ಅಮ್ಮ ರಾಧಿಕಾ ಪಂಡಿತ್ ಆಯ್ರಾ ಮತ್ತು ಯಥರ್ವ್ ಇರುವ ಸುಂದರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಥರ್ವ್‌ಗೆ ಊಟ ತಿನ್ನಿಸಲು ಅಮ್ಮ ಬಿಡಲಿಲ್ಲ: ಬೇಜಾರಲ್ಲಿ ಯಶ್ ಪುತ್ರಿ!
ಸದ್ಯ ರಾಧಿಕಾ ಪಂಡಿತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಯ್ರಾ ತನ್ನ ಯಥರ್ವ್‌ಗೆ ಪ್ರೀತಿಯಿಂದ ತಿನ್ನಿಸುತ್ತಿದ್ದಾಳೆ. ಆದರೆ ಅಮ್ಮ ಬಿಟ್ಟಿಲ್ಲ. ಈ ಕ್ಯೂಟ್ ವಿಡಿಯೋ ಹಂಚಿಕೊಂಡಿರುವ ನಟಿ ರಾಧಿಕಾ ಪಂಡಿತ್ "ನನ್ನ ಸಹೋದರನಿಗೆ ತಿನ್ನಿಸಲು ಬಿಡಿ" ಎನ್ನುವ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗದ್ದು, ಸಾಕಷ್ಟು ಮೆಚ್ಚುಗೆ ಪಡೆದು ಕೊಂಡಿದೆ.
ಈ ಮುದ್ದು ಮಕ್ಕಳಿಗೆ ಪ್ರತ್ಯೇಕವಾದ ಅಭಿಮಾನಿ ಬಳಗವೇ ಇದೆ. ಅಂದರೆ ಅವರನ್ನು ಫಾಲೋ ಮಾಡುವ ಅವರ ಫೋಟೋ ಮತ್ತು ವೀಡಿಯೋಗಳಿಗಾಗಿ ಕಾಯುವ ಸಾಕಷ್ಟು ಜನರಿದ್ದಾರೆ. ಹಾಗಾಗಿ ರಾಧಿಕಾ ಮಕ್ಕಳ ಕುರಿತಾಗಿ ಯಾವುದಾದರೂ ಪೋಸ್ಟ್ ಹಾಕಿದರೆ ಸಾಕು ಪೋಸ್ಟ್ ಕೆಲವೇ ಸಮಯದಲ್ಲಿ ವೈರಲ್ ಆಗಿಬಿಡುತ್ತದೆ. ಅಂಥ ಹಲವು ಪೋಸ್ಟ್‌ಗಳು ಇಲ್ಲಿವೆ ನೋಡಿ.
ಮ್ಯೂಜಿಕ್ ಹಾಕಿ ಡಾನ್ಸ್ ಮಾಡಿದ ಯಥರ್ವ್!
ಪುಟ್ಟ ಪೋರ ಯಥರ್ವ್ ಮ್ಯೂಜಿಕ್ ಹಾಕಿ ಡಾನ್ಸ್ ಮಾಡಿದ ವಿಡಿಯೋ ಕೂಡ ಈ ಹಿಂದೆ ರಾಧಿಕಾ ಪಂಡಿತ್ ಹಂಚಿಕೊಂಡಿದ್ದರು. ಗೂಗಲ್‌ಗೆ ಮ್ಯೂಜಿಕ್ ಪ್ಲೇ ಮಾಡಲು ಹೇಳಿ ಯಥರ್ವ್ ಪುಟ್ಟ ಪುಟ್ಟ ಹೆಜ್ಜೆ ಹಾಕಿ ಡಾನ್ಸ್ ಮಾಡಿದ್ದ. ಯಥರ್ವ್ ಜೊತೆಗೆ ಆಯ್ರಾ ಕೂಡ ಡಾನ್ಸ್ ಮಾಡಿದ್ದಳು.
ಅಪ್ಪನೊಂದಿಗೆ ಯಥರ್ವ್ ಆಟ-ತುಂಟಾಟ!
ನಟ ಯಶ್ ತಮ್ಮ ಮಕ್ಕಳೊಂದಿಗೆ ಅತಿ ಹೆಚ್ಚು ಸಮಯ ಕಳೆಯುತ್ತಾರೆ. ಹೀಗೆ ಮಗನೊಂದಿಗೆ ಆಟ ಆಡುತ್ತಿದ ವಿಡಿಯೋವನ್ನು ರಾಧಿಕಾ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯಥರ್ವ್ ಅಪ್ಪನನ್ನು ಕಚ್ಚಲು ಹೋಗ್ತಾನೆ. ಈ ತುಂಟಾಟದ ವೀಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಯಥರ್ವ್ ಪುಟ್ಟ ಮಗು ಆದರೂ ಸಿಕ್ಕಾಪಟ್ಟೆ ಚೂಟಿ ಎನ್ನುವುದು ಈ ವಿಡಿಯೋ ನೋಡಿದರೆ ಹೇಳ ಬಹುದು.
ಥ್ಯಾಂಕ್ ಯು ಹೇಳಲು ಕಲಿತ ಯಥರ್ವ್!
ಪುಟ್ಟ ಮಕ್ಕಳು ಮಾತು ಕಲಿಯುವಾಗ ತೊದಲು ನುಡಿ ಆಲಿಸುವುದೇ ಚೆಂದ. ಯಥರ್ವ್ ಮೊದಲ ಬಾರಿಗೆ ಥ್ಯಾಂಕ್ ಯು ಹೇಳುವುದನ್ನು ಕಲಿತಿದ್ದಾನೆ. ಯಥರ್ವ್ ಥ್ಯಾಂಕ್ಸ್ ಹೇಳುವುದೇ ಚೆಂದ. ಈ ವಿಡಿಯೋವನ್ನು ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಾಕಷ್ಟು ಮೆಚ್ಚುಗೆಯ ಜೊತೆಗೆ ಯಥರ್ವ್ ಕಲಿಕೆಯ ಬಗ್ಗೆ ಉತ್ತಮ ಕಾಮೆಂಟ್‌ಗಳು ಕೂಡ ಬಂದಿವೆ.
ಜಾನಿ ಜಾನಿ ಎಸ್ ಪಪ್ಪ ಎಂದ ಯಶ್ ಪುತ್ರ!
ನಟ ಯಶ್ ಮತ್ತು ಮಕ್ಕಳು ಇರುವ ಮತ್ತೊಂದು ಮುದ್ದು ವೀಡಿಯೋ ಅಂದರೆ, ಯಶ್ ಮಗನಿಗೆ ರೈಮ್ಸ್ ಹೇಳಿ ಕೊಡುವ ವೀಡಿಯೋ. ಜಾನಿ ಜಾನಿ ಎಸ್ ಪಪ್ಪ ಅಂತ ಯಶ್ ಹೇಳಿ ಕೊಟ್ಟ ರೈಮ್ಸ್‌ಗೆ ಯಥರ್ವ್ ತಲೆದೂಗುತ್ತಾನೆ. ಕೊನೆಯಲ್ಲಿ ಹ..ಹಹ..ಹ ಅಂತ ಬಾಯಿ ತುಂಬ ನಗುತ್ತಾನೆ. ಇದು ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.
ಬಿಸಿಲು ನೋಡುವುದನ್ನು ಹೇಳಿ ಕೊಟ್ಟ ಆಯ್ರಾ!
ರಾಧಿಕಾ, ಯಶ್ ಮೊದಲ ಪುತ್ರಿ ಆಯ್ರಾ ಬಿಸಿಲು ನೋಡುವುದು ಹೇಗೆ ಎನ್ನುವ ಪಾಠ ಮಾಡಿದ್ದಳು. ಬಿಸಿಲು ನೋಡುವುದು ಹೇಗೆ ಎಂದು ಕೇಳಿದರೆ, ತಲೆ ಮೇಲೆ ಎತ್ತಿ ಬಿಸಿಲಿನಲ್ಲಿ ಕಣ್ಣು ಮುಚ್ಚಿ ಕುಳಿತು ಬಿಡುತ್ತಿದ್ದಳು. ಇದು ಮೊದಲ ಬಾರಿಗೆ ಹಂಚಿಕೊಂಡ ಆಯ್ರಾಳ ವೀಡಿಯೊ.
ಈ ಇಬ್ಬರು ಮಕ್ಕಳ ತುಂಟಾಟದ ವಿಡಿಯೋಗಳನ್ನ ನೋಡುವುದೇ ಚೆಂದ. ಅಷ್ಟೆ ಮುದ್ದಾಗಿ ಆಯ್ರಾ ಮತ್ತು ಯಥರ್ವ್ ಕಾಣಿಸಿಕೊಳ್ಳುತ್ತಾರೆ. ಇನ್ನು ರಾಧಿಕಾ ಪಂಡಿತ್ ಅವರು ಮಕ್ಕಳ ಮುದ್ದು ವಿಡಿಯೋಗಳನ್ನ ಆಗಾಗ ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಮಕ್ಕಳನ್ನು ಫಾಲೋ ಮಾಡುವ ಅಭಿಮಾನಿಗಳು ಇದ್ದಾರೆ. ಹಾಗಾಗಿ ಅವರ ಫೊಟೋ ಮತ್ತು ವಿಡಿಯೋಗಳನ್ನು ರಾಧಿಕಾ ಅವರು ಹಂಚಿಕೊಳ್ಳುತ್ತಾರೆ.


Click it and Unblock the Notifications











