For Quick Alerts
  ALLOW NOTIFICATIONS  
  For Daily Alerts

  'ರಿಯಾ'ಳನ್ನ ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್

  By Pavithra
  |

  ಯಶ್ ಮತ್ತು ರಾಧಿಕಾ ಪಂಡಿತ್ ಕಳೆದ ಹದಿನೈದು ದಿನಗಳಿಂದ ಚಿಕಾಗೋದಲ್ಲಿ ಬಿಡು ಬಿಟ್ಟಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಜೀವನದ ಸಣ್ಣ ಸಣ್ಣ ಖುಷಿಯ ಕ್ಷಣಗಳನ್ನ ರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಇಬ್ಬರು ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಾರೆ. ರಾಧಿಕಾ ಅವರ ಸಹೋದರ ಗೌರಂಗ್ ಹಾಗೂ ಅತ್ತಿಗೆ ಸಹನ ಅವರಿಗೆ ಹೆಣ್ಣು ಮಗು ಜನಿಸಿದ್ದು ತಮ್ಮ ಮನೆಗೆ ಪುಟ್ಟ ಅಥಿತಿಯನ್ನ ಬರಮಾಡಿಕೊಳ್ಳಲು ರಾಧಿಕಾ ಫ್ಯಾಮಿಲಿ ವಾರಕ್ಕೂ ಮುಂಚೆಯೇ ಚಿಕಾಗೋಗೆ ಪ್ರಯಾಣ ಬೆಳೆಸಿತ್ತು.

  ಯಶ್ ಕೂಡ ಸೊಸೆಯನ್ನ ನೋಡಲು ಚಿಕಾಗೋಗೆ ಭೇಟಿ ಕೊಟ್ಟಿದ್ದು ಮನೆಯವರೆಲ್ಲರೂ ಸೇರಿ ಮುದ್ದು ಮಗುವಿಗೆ ನಾಮಕರಣ ಮಾಡಿದ್ದಾರೆ. ಹೌದು ಯಶ್ ಹಾಗೂ ರಾಧಿಕಾ ತಮ್ಮ ಸೊಸೆಗೆ 'ರಿಯಾ' ಎಂದು ಹೆಸರಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಯಶ್ ರಿಯಾಳನ್ನ ಎತ್ತಿ ಮುದ್ದಾಡಿದ್ದಾರೆ. ವಿಶೇಷ ಅಂದರೆ ರೀ ಅಕ್ಷರದಲ್ಲಿ ರ(ರಾಧಿಕಾ) ಸೇರಿಕೊಂಡಿದ್ದು, ಯಾ ಅಕ್ಷರದಲ್ಲಿ ಯ(ಯಶ್) ಸೇರಿದೆ.

  ನಟಿ ರಾಧಿಕ ಪಂಡಿತ್ ಕುಟುಂಬಕ್ಕೆ ಬಂದ ಮಹಾಲಕ್ಷ್ಮಿನಟಿ ರಾಧಿಕ ಪಂಡಿತ್ ಕುಟುಂಬಕ್ಕೆ ಬಂದ ಮಹಾಲಕ್ಷ್ಮಿ

  ರಿಯಾಳನ್ನ ಯಶ್ ಎತ್ತಿಕೊಂಡಾಗ ರಿಯಾ ಕೈನಲ್ಲಿ ಮಾವನ ಗಡ್ಡ ಹಿಡಿದು ಎಳೆಯುತ್ತಿರುವ ಫೋಟೋವನ್ನ ನಟಿ ರಾಧಿಕಾ ತಮ್ಮ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಂ ನಲ್ಲಿ ಹಾಕಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಮಗುವಿನ ಹೆಸರನ್ನ ನೋಡುಗರಿಗೆ ವಿಭಿನ್ನವಾಗಿ ಪರಿಚಯಿಸಿದ್ದಾರೆ ರಾಧಿಕಾ ಪಂಡಿತ್.

  Yash and Radhika named the baby Riya.

  ಒಟ್ಟಾರೆ ರಾಧಿಕಾ ಅವರ ಮನೆಗೆ ಮುದ್ದಾದ ಅಥಿತಿಯನ್ನ ಬರಮಾಡಿಕೊಂಡಿದ್ದಾರೆ ಮಿಸ್ಟರ್ ಅಂಡ್ ಮಿಸಸ್ಸ್ ರಾಮಾಚಾರಿ. ಫೋಟೋ ಅಪ್ಲೌಡ್ ಆಗುತ್ತಿದ್ದಂತೆ ರಾಕಿಂಗ್ ಸ್ಟಾರ್ ಮನೆಯಲ್ಲಿ ಮಗು ನಗುವಿನ ಶಬ್ಧ ಯಾವಾಗ ಹೇಳಿ ಬರುತ್ತೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

  English summary
  Kannada actress Radhika's brother Gaurang and Sahana had a baby girl. Yash and Radhika named the baby Riya. Currently Yash and Radhika are with Radhika Family in Chicago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X