For Quick Alerts
  ALLOW NOTIFICATIONS  
  For Daily Alerts

  ನಾಲ್ಕು ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ನಟಿಸಿದ ಯಶ್-ರಾಧಿಕಾ!

  |

  ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ, ಆಫ್‌ ಸ್ಕ್ರೀನ್‌ ನಲ್ಲಿ ಮಾತ್ರವಲ್ಲದೆ, ಆನ್‌ ಸ್ಕ್ರೀನ್‌ನಲ್ಲೂ ಸೂಪರ್ ಹಿಟ್ ಜೋಡಿ. ಈ ಇಬ್ಬರೂ ಒಟ್ಟಿಗೆ ನಟಿಸಿದ ಸಿನಿಮಾಗಳು ಸೂಪರ್-ಡೂಪರ್ ಹಿಟ್.

  ಯಶ್ ಮತ್ತು ರಾಧಿಕಾ ಕೊನೆಯದಾಗಿ ಒಟ್ಟಿಗೆ ನಟಿಸಿದ್ದು, 'ಸಂತು ಸ್ಟ್ರೈಟ್ ಫಾರ್ವರ್ಡ್‌' ಸಿನಿಮಾದಲ್ಲಿ ಅದು ಬಿಡುಗಡೆಯಾಗಿ 4 ವರ್ಷಗಳಾಗಿವೆ. ಇದೀಗ ಈ ಜೋಡಿ ಮತ್ತೆ ಒಟ್ಟಿಗೆ ನಟಿಸಿದ್ದಾರೆ, ಆದರೆ ಸಿನಿಮಾದಲ್ಲಲ್ಲ.

  ಹೌದು, ಯಶ್ ಮತ್ತು ರಾಧಿಕಾ ಒಟ್ಟಿಗೆ ನಟಿಸಿದ್ದಾರೆ ಆದರೆ ಸಿನಿಮಾದಲ್ಲಲ್ಲ, ಬದಲಿಗೆ ಜಾಹೀರಾತಿನಲ್ಲಿ. ಅಡುಗೆ ಎಣ್ಣೆಯೊಂದರ ಬ್ರ್ಯಾಂಡ್‌ಗಾಗಿ ಜಾಹೀರಾತೊಂದರಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ.

  ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿರುವ ದಂಪತಿ

  ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿರುವ ದಂಪತಿ

  ತಮಾಷೆಯಾಗಿರುವ ಈ ಜಾಹೀರಾತಿನಲ್ಲಿ ಯಶ್ ಸಖತ್ 'ಗ್ರೇಟ್' ಆಗಿ ವರ್ತಿಸುತ್ತಿದ್ದಾರೆ! ರಾಧಿಕಾ ಮಾಡಿದ ಅಡುಗೆ ತಿಂದು ಸಖತ್ ಎನರ್ಜೆಟಿಕ್ ಆಗಿ ಸಕ್ರಿಯರಾಗಿ ಬದಲಾಗಿದ್ದಾರೆ ಯಶ್. ಜಾಹೀರಾತಿನಲ್ಲಿ ಸಹ ಯಶ್ ಹಾಗೂ ರಾಧಿಕಾ ನಡುವೆ ಅದ್ಭುತವಾದ ಕೆಮೆಸ್ಟ್ರಿ ಇದೆ.

  ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್‌

  ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್‌

  ತಾವು ಹಾಗೂ ರಾಧಿಕಾ ಪಂಡಿತ್ ಅಭಿನಯದ ಜಾಹೀರಾತಿನ ವಿಡಿಯೋವನ್ನು ಯಶ್, ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ. ಯಶ್-ರಾಧಿಕಾ ರನ್ನು ಮತ್ತೆ ಒಟ್ಟಿಗೆ ನೋಡಿದ ಖುಷಿ ಹಂಚಿಕೊಂಡಿದ್ದಾರೆ.

  ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

  ಯಶ್ ಮತ್ತು ರಾಧಿಕಾ ಪಂಡಿತ್ ಈ ವರೆಗೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರೂ ಮೊಗ್ಗಿನ ಮನಸ್ಸು ಸಿನಿಮಾ ದಲ್ಲಿ ಈ ಜೋಡಿ ಮೊದಲ ಬಾರಿಗೆ ಜೋಡಿಯಾಯಿತು. ಆ ನಂತರ ಡ್ರಾಮಾ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ದೊರೆಯುವ ಮುನ್ನಾ ನಂದ ಗೋಕುಲ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು ರಾಧಿಕಾ ಮತ್ತು ಯಶ್.

  ಯಶ್ 2 ಚಿತ್ರೀಕರಣದಲ್ಲಿ ಯಶ್ ಬ್ಯುಸಿ

  ಯಶ್ 2 ಚಿತ್ರೀಕರಣದಲ್ಲಿ ಯಶ್ ಬ್ಯುಸಿ

  ಮಗುವಾದ ಬಳಿಕ ನಟನೆಯಿಂದ ದೂರ ಉಳಿದಿದ್ದಾರೆ ರಾಧಿಕಾ ಪಂಡಿತ್. ಇವರು ನಟಿಸಿದ ಕೊನೆಯ ಸಿನಿಮಾ 2019 ರಲ್ಲಿ ಬಿಡುಗಡೆಯಾದ ಆದಿಲಕ್ಷ್ಮಿ ಪುರಾಣ. ಇನ್ನು ನಟ ಯಶ್ ಕೆಜಿಎಫ್ 2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.

  English summary
  Actor Yash and Radhika Pandit acted in an advertisement. They both last scene on screen in 'Santhu Straight forward' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X