For Quick Alerts
  ALLOW NOTIFICATIONS  
  For Daily Alerts

  ಅಕ್ಷಯ ತೃತೀಯ ದಿನ ಯಶ್ - ರಾಧಿಕಾ ಪುತ್ರಿಯ ಪರಿಚಯ

  |
  ಅಕ್ಷಯ ತೃತೀಯಕ್ಕೆ ದೊಡ್ಡ ಉಡುಗೊರೆ ಕೊಡ್ತಾರೆ ಯಶ್ ದಂಪತಿ | FILMIBEAT KANNADA

  ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬಕ್ಕೆ ಮಹಾಲಕ್ಷ್ಮಿ ಕಾಲಿಟ್ಟು ಕೆಲ ತಿಂಗಳು ಕಳೆದಿವೆ. ರಾಕಿಂಗ್ ಜೋಡಿಯ ಮುದ್ದು ಮಗುವಿಗೆ ಅಭಿಮಾನಿಗಳ ಪ್ರೀತಿ ಸಿಕ್ಕಿದೆ.

  ಸಾಕಷ್ಟು ಅಭಿಮಾನಿಗಳು ಮಗುವಿಗೆ ಆ ಹೆಸರು ಇಡಿ, ಈ ಹೆಸರು ಇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸುತ್ತಿದ್ದಾರೆ. ಇದೀಗ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದು ಕಂದನನ್ನು ಪರಿಚಯ ಮಾಡಲು ನಿರ್ಧಾರ ಮಾಡಿದ್ದಾರೆ.

  ಯಶ್ ದಂಪತಿ ಸುದ್ದಿಗೋಷ್ಠಿ: ಮಗುವಿಗೆ ರಾಧಿಕಾ ಮೊದಲೇ ಹೆಸರಿಟ್ಟಿದ್ದರಂತೆ

  ಅಕ್ಷಯ ತೃತೀಯ ದಿನ ಚಿನ್ನವನ್ನು ಕೊಂಡರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಅದೇ ದಿನ ತಮ್ಮ ಮನೆಯ ಚಿನ್ನವನ್ನು ಅಭಿಮಾನಿಗಳಿಗೆ ತೋರಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

  ಯಶ್ ತಮ್ಮ ಮಗಳನ್ನು ಮುದ್ದಿಸುವ ಫೋಟೋ ಹಾಕಿರುವ ಅವರು ''ತಂದೆ ಮತ್ತು ಮಗಳ ಸಂಬಂಧ ಬೆಲೆ ಕಟ್ಟಲಾಗದು. ನೀವು ನಮ್ಮ ರಾಣಿಯನ್ನು ನೋಡಲು ಕಾಯುತ್ತಿದ್ದೀರಿ. ನಾವು ನಿಮ್ಮನ್ನು ನಿರಾಸೆ ಮಾಡುವುದಿಲ್ಲ. ಈ ಮೇ 7 ರ ಅಕ್ಷಯ ತೃತೀಯದ ದಿನ ನಾವು ನಮ್ಮ ನಿಜವಾದ ನಿಧಿಯನ್ನು ತೋರಿಸುತ್ತೇವೆ ಎಂದಿದ್ದಾರೆ.

  ತಂದೆಯಾದ ಯಶ್ : ಮನೆಗೆ ಬಂದ ಮಹಾಲಕ್ಷ್ಮಿ

  ಅಂದಹಾಗೆ, ಇನ್ನು ಎರಡು ದಿನ ಕಾದರೆ ಅಭಿಮಾನಿಗಳು ಯಶ್ ಹಾಗೂ ರಾಧಿಕಾ ಪ್ರೀತಿಯ ಪುತ್ರಿಯನ್ನು ನೋಡಬಹುದಾಗಿದೆ.

  English summary
  Kannada actor Yash and Radhika Pandit daughter reveal their daughter photo on the occasion of Akshaya Tritiya (May 7th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X