ಗೋವಾ ಸಿಎಂ ಪ್ರಮೋದ್ ಸಾವಂತ್ ಭೇಟಿಯಾದ ಯಶ್ - ರಾಧಿಕಾ ಪಂಡಿತ್

ಇತ್ತೀಚಿಗೆ ನಟ ರಾಕಿಂಗ್ ಸ್ಟಾರ್ ಯಶ್‌ ರಾಜಕೀಯಕ್ಕೆ ಬರ್ತಾರೆ ಎಂಬ ಮಾತುಗಳು ಆಗಾಗ ಸುದ್ದಿಯಾಗ್ತಿರುತ್ತೆ. ಆದರೆ, ಇದಕ್ಕೆಲ್ಲಾ ಯಶ್‌ ಯಾವತ್ತೂ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಸದ್ಯ ಭಾರತೀಯ ಸಿನಿರಂಗದಲ್ಲಿ 'ಕೆಜಿಎಫ್‌ 2' ಹೊಸ ಚಾಪನ್ನೇ ಮೂಡಿಸಿ ಮುನ್ನುಗ್ಗುತ್ತಿದೆ. ನಟ ಯಶ್‌ ಕೂಡ ನಟನೆಯಲ್ಲಿ ಹೆಚ್ಚು ಆಸಕ್ತಿ ತೋರಿದ್ದು, ಇನ್ನು ಭಿನ್ನ ವಿಭಿನ್ನ ಚಿತ್ರಗಳನ್ನು ಮಾಡಲು ಉತ್ಸುಕರಾಗಿದ್ದಾರೆ. ಆದರೆ, ಕಳೆದ ಕೆಲ ವರ್ಷಗಳಿಂದ ಯಶ್ ರಾಜಕೀಯಕ್ಕೆ ಬರಬಹುದು ಎಂಬ ಚರ್ಚೆಗಳು ಆಗ್ತಾನೆ ಇವೆ. ಏಕೆಂದರೆ ಯಶ್ ಕೆಲ ವರ್ಷಗಳಿಂದ ಜನಪರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ನೀರಿನ ವ್ಯವಸ್ಥೆಯನ್ನು ಮಾಡಿದ್ದಾರೆ. ಹೀಗಾಗಿ ಯಶ್‌ಗೆ ಜನಪರ ಕಾಳಜಿ ಇದ್ದು, ರಾಜಕೀಯಕ್ಕೆ ಬಂದರೆ ಜನರಿಗಾಗಿ ಕೆಲಸ ಮಾಡುತ್ತಾರೆ ಎಂಬ ಬಿಸಿ ಚರ್ಚೆ ಶುರುವಾಗಿದೆ.

ಈಗಾಗಲೇ ಯಶ್‌ ಕೂಡ ಈ ಬಗ್ಗೆ ಅನೇಕ ಸಂದರ್ಶನಗಳಲ್ಲಿ ಉತ್ತರಿಸಿದ್ದಾರೆ. ನನ್ನ ಗುರಿಯೇ ಬೇರೆ ಇದೆ. ಮಾಡಬೇಕಾದ ಕೆಲಸಗಳು ನೂರಾರಿದೆ. ನಾನು ಇರಬೇಕಾದ ಸ್ಥಾನವೇ ಬೇರೆ ಇದೆ ಎಂಬ ಮಾತುಗಳನ್ನ ಹೇಳಿದ್ದರು. ಸದ್ಯ ಈಗ ಆ ಮಾತುಗಳೇ ಯಶ್ ರಾಜಕೀಯಕ್ಕೆ ಏನಾದರೂ ಬರಬಹುದು ಎಂಬ ಗುಸುಗುಸುಗೆ ಕಾರಣವಾಗಿದೆ.

ಸದ್ಯ ಯಶ್ ಹಾಗೂ ರಾಧಿಕಾ ಗೋವಾ ಪ್ರವಾಸದಲ್ಲಿದ್ದು, ಪಣಜಿಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಅವರನ್ನು ಭೇಟಿಯಾಗಿ ಆತ್ಮೀಯ ಮಾತುಕತೆಯನ್ನು ನಡೆಸಿದ್ದಾರೆ. ಈ ಹಿಂದೆಯೂ ಕೂಡ ಯಶ್ ಹಲವು ರಾಜಕೀಯ ವ್ಯಕ್ತಿಗಳ ಜೊತೆ ಕಾಣಿಸಿಕೊಂಡಿದ್ದಾರೆ. ಸುಮಲತಾ ಅಂಬರೀಶ್‌ ಮಂಡ್ಯ ಕ್ಷೇತ್ರದಲ್ಲಿ ನಿಂತಾಗ ದರ್ಶನ್ ಹಾಗೂ ಯಶ್ ಇಬ್ಬರೂ ಸೇರಿ ಚುನಾವಣಾ ಪ್ರಚಾರ ನಡೆಸಿದ್ದರು. ಹೀಗಾಗಿ ಆಗಾಗ ರಾಜಕೀಯ ನಾಯಕರುಗಳ ಭೇಟಿಯಾಗುವುದರಿಂದ ಯಶ್ ಇಂದಲ್ಲದಿದ್ದರೂ ಮುಂದಾದರೂ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

Yash And Radhika Pandit Met Goa CM Pramod Sawant

ಇನ್ನು ಯಶ್‌ ಹಾಗೂ ರಾಧಿಕಾ ಪಂಡಿತ್‌ ಭೇಟಿ ಮಾಡಿದ ಪೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರಮೋದ್ ಸಾವಂತ್ ಹರ್ಷ ವ್ಯಕ್ತಪಡಿಸಿದ್ದಾರೆ. ಇಂದು ಕೆಜಿಎಫ್ ಸೂಪರ್ ಸ್ಟಾರ್‌ ಯಶ್‌ ಅವರನ್ನು ಭೇಟಿಯಾಗಿದ್ದು, ಖುಷಿ ತಂದಿದೆ. ಯಶ್ ಹಾಗೂ ಪತ್ನಿ ರಾಧಿಕಾ ಹಾಗೂ ಅವರ ಚಿತ್ರತಂಡದ ಜೊತೆ ಇಂದು ಪಣಜಿಯಲ್ಲಿರುವ ತಮ್ಮ ಕಚೇರಿಯಲ್ಲಿ ಮಾತುಕತೆ ನಡೆಸಿದ್ದು, ಸಂತೋಷ ತಂದಿದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ದಿಢೀರ್ ಅಂತ ರಾಜಕಿಯಕ್ಕೆ ಬರದಿದ್ದರೂ ಸಹ ಮುಂದೊಂದು ದಿನ ರಾಜಕೀಯಕ್ಕೆ ಬರುವ ಎಲ್ಲಾ ಮುನ್ಸೂಚನೆ ಇದೆ ಅಂತ ಹೇಳಲಾಗ್ತಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿರಬಹುದು ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡ್ತಿದೆ. ಒಂದು ವೇಳೆ ಆ ರೀತಿ ಆದರೆ ಯಶ್‌ ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ಸದ್ಯಕ್ಕೆ 'ಕೆಜಿಎಫ್‌' ಸಕ್ಸಸ್‌ನಲ್ಲಿರುವ ಯಶ್ ದಂಪತಿ ರಿಲಾಕ್ಸ್ ಮೂಡ್‌ನಲ್ಲಿದ್ದು, ಗೋವಾದಲ್ಲಿ ಕಾಲ ಕಳೆಯುತ್ತಿದ್ದಾರೆ.

More from Filmibeat

English summary
KGF superstar Yash and his wife Radhika and Team At Panaji Meet A Goa CM Pramod Sawant. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X