ಯಶ್ ಹೊಸ ಮನೆ ಗೃಹಪ್ರವೇಶ; ಕನಸಿನ ಮನೆ ಪ್ರವೇಶ ಮಾಡಿದ ರಾಕಿಂಗ್ ದಂಪತಿ

By ಫಿಲ್ಮೀ ಬೀಟ್ ಡೆಸ್ಕ್

ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ್ ಕನಸಿನ ಮನೆಯ ಪ್ರವೇಶ ಮಾಡಿದ್ದಾರೆ. ಇಂದು (ಜುಲೈ 1) ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ಮಾಡಿದ್ದು, ರಾಕಿಂಗ್ ದಂಪತಿಯ ಕನಸಿನ ಅರಮನೆಯ ಫೋಟೋಗಳು ಫ್ಯಾನ್ ಪೇಜ್ ಗಳಲ್ಲಿ ಹರಿದಾಡುತ್ತಿವೆ.

ಅಂದಹಾಗೆ ಯಶ್ ದಂಪತಿ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಮನೆ ಖರೀದಿಸಿದ್ದರು. ಅನೇಕ ತಿಂಗಳಿಂದ ಮನೆಯ ಇಂಟಿರಿಯರ್ ಡಿಸೈನ್ ಕೆಲಸ ನಡೆಯುತ್ತಿತ್ತು. ಇದೀಗ ಮನೆಯ ಕೆಲಸ ಪೂರ್ಣಗೊಂಡಿದ್ದು, ಯಶ್ ಮತ್ತು ರಾಧಿಕಾ ದಂಪತಿ ಇಂದು ಕನಸಿನ ಮನೆಗೆ ಪ್ರವೇಶ ಮಾಡಿದ್ದಾರೆ. ಮುಂದೆ ಓದಿ..

ಸರಳವಾಗಿ ನಡೆದ ಗೃಹ ಪ್ರವೇಶ

ಸರಳವಾಗಿ ನಡೆದ ಗೃಹ ಪ್ರವೇಶ

ಸರಳವಾಗಿ ನಡೆದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಸದ್ಯದಲ್ಲೇ ಆಷಾಡ ಪ್ರಾರಂಭವಾಗುತ್ತಿರುವ ಕಾರಣ ಅದಕ್ಕೂ ಮೊದಲೇ ಗೃಹಪ್ರವೇಶ ಮಾಡುವ ಉದ್ದೇಶದಿಂದ ಇಂದೇ ಕಾರ್ಯಕ್ರಮ ಮಾಡಿದ್ದಾರೆ.

ಅಂಬರೀಶ್ ಅಪಾರ್ಟ್ಮೆಂಟ್ ನಲ್ಲೇ ಇದೆ ಯಶ್ ಮನೆ

ಅಂಬರೀಶ್ ಅಪಾರ್ಟ್ಮೆಂಟ್ ನಲ್ಲೇ ಇದೆ ಯಶ್ ಮನೆ

ಅಂದಹಾಗೆ ಇದೇ ಅಪಾರ್ಟ್ಮೆಂಟ್ ನಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಮನೆ ಕೂಡ ಇದೆ. ಅಂಬರೀಶ್ ಮನೆ ಸಮೀಪದಲ್ಲೇ ಯಶ್ ಕೂಡ ಮನೆ ಖರೀದಿಸಿದ್ದು ವಿಶೇಷ.

ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ರಾಕಿಂಗ್ ದಂಪತಿ

ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ರಾಕಿಂಗ್ ದಂಪತಿ

ಇಂದು ನಡೆದ ಗೃಹಪ್ರವೇಶ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ಪಂಚೆ ಮತ್ತು ಶರ್ಟ್ ನಲ್ಲಿ ಮಿಂಚಿದ್ರೆ, ನಟಿ ರಾಧಿಕಾ ಆರೆಂಜ್ ಮತ್ತು ಹಸಿರು ಬಣ್ಣ ರೇಶ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ರು. ಮುದ್ದಾದ ಜೋಡಿಯ ಸುಂದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Recommended Video

ಅಪ್ಪು ಅಭಿಮಾನಿಗಳ ಖುಷಿ ಹೆಚ್ಚಿಸಿದ ವಿಜಯ್ ಕಿರಗಂದೂರ್ | Filmibeat Kannada
ಕೆಜಿಎಫ್-2 ಬಿಡುಗಡೆಗೆ ಕಾಯುತ್ತಿರುವ ಯಶ್

ಕೆಜಿಎಫ್-2 ಬಿಡುಗಡೆಗೆ ಕಾಯುತ್ತಿರುವ ಯಶ್

ಸಿನಿಮಾ ವಿಚಾರಕ್ಕೆ ಬರುವುದಾದರೆ ಯಶ್ ಸದ್ಯ ಕೆಜಿಎಫ್-2 ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಈ ಸಿನಿಮಾ ಬಳಿಕ ಯಶ್ ಯಾರ ನಿರ್ದೇಶನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

More from Filmibeat

English summary
Actor Yash And Radhika Pandit's new house warming ceremony, photos viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X