For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮೋಡಿ ಮಾಡಲಿರುವ 'ಮಿ.ಅಂಡ್ ಮಿಸಸ್' ರಾಮಾಚಾರಿ ಜೋಡಿ

  By Suneetha
  |

  'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಯಶಸ್ವಿ ಜೋಡಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ಮತ್ತೆ ಒಂದಾಗುತ್ತಿದ್ದಾರೆ.

  ನಿರ್ಮಾಪಕ ಕೆ. ಮಂಜು ಸ್ವರಾಜ್ ಅವರ ಇನ್ನೂ ಹೆಸರಿಡದ ಹೊಸ ಚಿತ್ರವೊಂದರಲ್ಲಿ ಇವರಿಬ್ಬರು ಕಾಣಿಸಿಕೊಳ್ಳಲಿದ್ದು, ಚಂದನವನದಲ್ಲಿ ಇವರಿಬ್ಬರ ಜೋಡಿ ಮತ್ತೆ ಮೋಡಿ ಮಾಡಲಿದೆ.[ರಾಕಿಂಗ್ ಸ್ಟಾರ್ ಅಪ್ಪನಾಗಿ ಡೈಲಾಗ್ ಕಿಂಗ್ ಕಾಣಿಸಿಕೊಳ್ತಾರಾ? ]

  ನಿರ್ದೇಶಕ ಮಹೇಶ್ ರಾವ್ ಅವರು ಆಕ್ಷನ್-ಕಟ್ ಹೇಳಲಿರುವ ಹೊಸ ಚಿತ್ರದಲ್ಲಿ ನಾನು ಯಶ್ ಜೊತೆ ಕಾಣಿಸಿಕೊಳ್ಳುತ್ತಿದ್ದೇನೆ. ಡಿಸೆಂಬರ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗುತ್ತಿದೆ ಎಂದು ನಟಿ ರಾಧಿಕಾ ಪಂಡಿತ್ ಅವರು ತಿಳಿಸಿದ್ದಾರೆ.[ಚಿತ್ರಗಳು: ಸ್ಯಾಂಡಲ್ ವುಡ್ ನ ಮುಂಬರುವ ಜೋಡಿಗಳು ಇವರು!]

  ಈ ಮೊದಲು ಈ ಜೋಡಿ 'ಮೊಗ್ಗಿನ ಮನಸು' ಮತ್ತು 'ಡ್ರಾಮಾ' ಚಿತ್ರದಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಈ ಎರಡು ಚಿತ್ರಗಳಲ್ಲಿ ನಾವಿಬ್ಬರೂ ಒಟ್ಟಿಗೆ ನಟಿಸಿದ್ದು, ಚಿತ್ರ ಯಶಸ್ವಿಯಾಗಿತ್ತು. ಹಾಗಂತ 'ನಮ್ಮಿಬ್ಬರ ಜೋಡಿ ಹಿಟ್ ಆಗುತ್ತಿದೆ ಅಂತ ನಾವಿಬ್ಬರು ಒಟ್ಟಿಗೆ ಕೆಲಸ ಮಾಡುತ್ತಿಲ್ಲ, ಇಬ್ಬರು ಪ್ರತ್ಯೇಕವಾಗಿ ಸ್ಕ್ರಿಪ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ' ಎಂದು ರಾಧಿಕಾ ತಿಳಿಸಿದ್ದಾರೆ.

  ಸದ್ಯಕ್ಕೆ ಪುನೀತ್ ರಾಜ್ ಕುಮಾರ್ ಅವರೊಂದಿಗೆ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಮುಗಿಸಬೇಕಿದೆ, ಡೇಟ್ಸ್ ಸಿಗದೇ ಹೋಗಿದ್ದರಿಂದ ಮಹೇಶ್ ಅವರು ನೀಡಿದ್ದ ಎರಡು ಅವಕಾಶಗಳನ್ನು ತಿರಸ್ಕರಿಸಬೇಕಾಗಿ ಬಂದಿತ್ತು ಹೊರತು, ಬೇರೆನು ಇಲ್ಲ. ಆದ್ರೆ ಇದೀಗ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾನೇ ಸಂತಸವಾಗುತ್ತಿದೆ, 'ಒಲವೇ ಜೀವನ' ಲೆಕ್ಕಾಚಾರ' ಚಿತ್ರದ ನಂತರ ಮಂಜು ಅವರ ಜೊತೆ ಇದು ನನ್ನ ಎರಡನೇ ಸಿನಿಮಾ ಎಂದು ರಾಧಿಕಾ ಅವರು ನುಡಿದಿದ್ದಾರೆ.[ಉಪ್ಪಿ ಬೇಕಾ, ಯಶ್ ಸಾಕಾ.? ರಾಧಿಕಾ ಪಂಡಿತ್ ತಲೆಯಲ್ಲಿ ಹುಳ]

  ಅದೇನೇ ಇರಲಿ ಒಟ್ನಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಮತ್ತೇ ಒಂದಾಗಿದ್ದು, ಸ್ಯಾಂಡಲ್ ವುಡ್ ನ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕಕರಿಗೆ ಸಖತ್ ಮನೋರಂಜನೆ ಗ್ಯಾರಂಟಿ.

  English summary
  After the long-running Kannada movie 'Mr and Mrs Ramachari', Actor Yash and Actress Radhika Pandit are all set to woo their fans once more.
  Wednesday, October 21, 2015, 9:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X