For Quick Alerts
  ALLOW NOTIFICATIONS  
  For Daily Alerts

  ಆಪ್ತ ಸಹಾಯಕನ ಮದುವೆ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್ ದಂಪತಿ

  |

  ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಶನಲ್ ಸ್ಟಾರ್ ಆಗಿ ಗುರುತಿಸಿಕೊಂಡರೂ ತನ್ನ ಜೊತೆಯಲ್ಲಿದ್ದವರನ್ನು ಎಂದು ಮರೆತಿಲ್ಲ. ಸದಾ ಆಪ್ತರ ಬೆನ್ನಿಗೆ ನಿಲ್ಲುವ ಯಶ್ ಇಂದು ಅವರ ಆಪ್ತ ಸಹಾಯಕನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದರು.

  ಮುಂದೆ ನಿಂತು ಆಪ್ತ ಸಹಾಯಕನ ಮದುವೆ ಮಾಡಿದ ಯಶ್ | Filmibeat Kannada

  ಹೌದು, ಯಶ್ ಅವರ ಆಪ್ತ ಸಹಾಯಕ ಚೇತನ್ ಸುಮಾರು 10 ವರ್ಷಕ್ಕೂ ಹೆಚ್ಚು ಸಮಯದಿಂದ ರಾಕಿಂಗ್ ಸ್ಟಾರ್ ಜೊತೆ ಕೆಲಸ ಮಾಡುತ್ತಿದ್ದಾರೆ. ಯಶ್ ಅವರ ಆರಂಭದ ದಿನಗಳಿಂದ ಚೇತನ್ ಜೊತೆಯಲ್ಲೇ ಇದ್ದಾರೆ. ಇಂದು ಚೇತನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಚೇತನ್ ಗೆ ರಾಕಿಂಗ್ ಜೋಡಿ ಶುಭಹಾರೈಸಿದ್ದಾರೆ.

  ಕೆಜಿಎಫ್ 2: ಪ್ರಧಾನಿ ಮೋದಿ ಬಳಿ ಯಶ್ ಅಭಿಮಾನಿಗಳ ವಿಶೇಷ ಮನವಿಕೆಜಿಎಫ್ 2: ಪ್ರಧಾನಿ ಮೋದಿ ಬಳಿ ಯಶ್ ಅಭಿಮಾನಿಗಳ ವಿಶೇಷ ಮನವಿ

  ಆಪ್ತ ಸಹಾಯಕನ ಮದುವೆಯಲ್ಲಿ ಯಶ್ ದಂಪತಿ

  ಆಪ್ತ ಸಹಾಯಕನ ಮದುವೆಯಲ್ಲಿ ಯಶ್ ದಂಪತಿ

  ಯಶ್ ಆಪ್ತ ಸಹಾಯಕ ಚೇತನ್ ಅವರ ಮದುವೆ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಸಮಾರಂಭದಲ್ಲಿ ಅನೇಕರು ಹಾಜರಿದ್ದರು. ಗೆಳೆಯನ ಹಾಗೆ ಇರುವ ಆಪ್ತ ಸಹಾಯಕನ ಮದುವೆಗೆ ರಾಕಿ ಭಾಯ್ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಕೂಡ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

  ಮುಂದೆ ನಿಂತು ಮದುವೆ ನೆರವೇರಿಸಿದ ಯಶ್

  ಮುಂದೆ ನಿಂತು ಮದುವೆ ನೆರವೇರಿಸಿದ ಯಶ್

  ಯಶ್ ದಂಪತಿಯ ಹಾಜರಾತಿಯಿಂದ ಚೇತನ್ ಸಂತೋಷಕ್ಕೆ ಪಾರವೆ ಇರಲಿಲ್ಲ. ಅಂದಹಾಗೆ ಯಶ್ ಅವರೇ ಮುಂದೆ ನಿಂತು ಆಪ್ತನ ಮದುವೆ ನೆರವೇರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅನೇಕ ವರ್ಷಗಳಿಂದ ಜೊತೆಯಲ್ಲಿರುವ ಸ್ನೇಹಿತನ ಮದುವೆಯನ್ನು ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ ಎಂದರೆ ಅಚ್ಚರಿ ಪಡಬೇಕಾಗಿಲ್ಲ.

  ಕೆಜಿಎಫ್ 2 ಹಿಂದಿ ಡಬ್‌: ರಾಖಿ ಭಾಯ್ ಪಾತ್ರಕ್ಕೆ ಧ್ವನಿ ಯಾರದ್ದು?ಕೆಜಿಎಫ್ 2 ಹಿಂದಿ ಡಬ್‌: ರಾಖಿ ಭಾಯ್ ಪಾತ್ರಕ್ಕೆ ಧ್ವನಿ ಯಾರದ್ದು?

  ಕೆಂಪು ಬಣ್ಣದ ಗೌನ್ ನಲ್ಲಿ ರಾಧಿಕಾ ಮಿಂಚಿಂಗ್

  ಕೆಂಪು ಬಣ್ಣದ ಗೌನ್ ನಲ್ಲಿ ರಾಧಿಕಾ ಮಿಂಚಿಂಗ್

  ಅಂದಹಾಗೆ ಗೆಳೆಯನ ಮದುವೆಯಲ್ಲಿ ಯಶ್ ಬಿಳಿ ಬಣ್ಣದ ಫಾರ್ಮಲ್ ಧರಿಸಿದ್ದರು, ಪತ್ನಿ ರಾಧಿಕಾ ಕೆಂಪು ಬಣ್ಣದ ಗೌನ್ ನಲ್ಲಿ ಮಿಂಚಿದ್ದಾರೆ. ರಾಕಿಂಗ್ ನಿನ್ನ ನಡೆದ ಆರತಕ್ಷತೆಯನ್ನೂ ಭಾಗಿಯಾಗಿದ್ದರು. ಯಶ್ ದಂಪತಿ ಮದುವೆಗೆ ಹಾಜರಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಕುತೂಹಲ ಮೂಡಿಸಿದೆ ಯಶ್ ಮುಂದಿನ ಸಿನಿಮಾ

  ಕುತೂಹಲ ಮೂಡಿಸಿದೆ ಯಶ್ ಮುಂದಿನ ಸಿನಿಮಾ

  ಅಂದಹಾಗೆ ಯಶ್ ಸದ್ಯ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇನ್ನು ಮುಂದಿನ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಸದ್ಯದಲ್ಲೇ ಯಶ್ ಹೊಸ ಸಿನಿಮಾ ಘೋಷಣೆ ಮಾಡುವ ಸಾಧ್ಯತೆ ಇದೆ.

  English summary
  Rocking star Yash And Radhika Pandit Visit one of their Assistant Marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X